Advertisement

ಕರಾವಳಿ ಸಮಸ್ಯೆ: ಶೀಘ್ರ ಶಾಸಕರ ಸಭೆ

02:50 PM Feb 15, 2018 | Team Udayavani |

ಕಾಪು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಂದಾಯ ಇಲಾಖೆಗೆ ಸಂಬಂಧಪಟ್ಟು ಮಾಡಿರುವ ಘೋಷಣೆಗಳನ್ನು ಚುನಾವಣೆಗೆ ಮೊದಲೇ ಈಡೇರಿಸುವ ಜವಾಬ್ದಾರಿ ಸರಕಾರದ್ದಾಗಿದ್ದು ಅದಕ್ಕಾಗಿ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚೆಯನ್ನೂ ನಡೆಸ‌ಲಾಗಿದೆ. ಕರಾವಳಿ ಭಾಗದಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧ ಪಟ್ಟು ಅತ್ಯವಶ್ಯಕವಾಗಿ ಬಗೆಹರಿಸಲೇಬೇಕಾದ ಹಲವು ಸಮಸ್ಯೆಗಳಿದ್ದು, ಆ ಕುರಿತಾಗಿ ಚರ್ಚಿಸಲು ಕರಾವಳಿ ಶಾಸಕರೊಂದಿಗೆ ಒಂದು ವಾರದೊಳಗೆ ವಿಶೇಷ ಸಭೆ ನಡೆಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಬುಧವಾರ ಕಾಪು ಬಂಗ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನೂತನ ಕಾಪು ತಾಲೂಕು ಉದ್ಘಾಟನೆ, ಅಧಿಕೃತ ಘೋಷಣೆ ಮತ್ತು ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಸಾಂತ್ಯದೊಳಗೆ ಮೂಲ ಸೌಕರ್ಯ  
ಸೊರಕೆಯವರ ಅಭಿಲಾಷೆಯಂತೆ, ಹೋರಾಟ ಸಮಿತಿ, ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಗೆ ಮಣಿದು ಕಾಪು ತಾಲೂಕನ್ನು ಘೋಷಣೆ ಮಾಡಿದೆ. ಅದಕ್ಕೆ ಪೂರಕವಾಗಿ ಅನುದಾನ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಕಾಪು ತಾಲೂಕನ್ನು ಮಾದರಿ ತಾಲೂಕನ್ನಾಗಿ ಪರಿವರ್ತಿಸುವ ಜವಾಬ್ದಾರಿಯೂ ಸರಕಾರದ್ದಾಗಿದೆ. ಈ ನಿಟ್ಟಿನಲ್ಲಿ ಕಾಪು ತಾಲೂಕಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನೂ ತಿಂಗಳಾಂತ್ಯದೊಳಗೆ ಒದಗಿಸಲು ನಾನು ಬದ್ಧ ಎಂದರು.

ಸಮಸ್ಯೆ ಪರಿಹಾರಕ್ಕೆ ಯತ್ನ 
ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಮತ್ತು ವಿಎಗಳು ಕಡ್ಡಾಯವಾಗಿ ಗ್ರಾಮಕ್ಕೆ ತೆರಳಿ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದ್ದು, ಶೀಘ್ರ ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿ.ಪಂ. ಸಿಇಒ ಶಿವಾನಂದ ಕಪಾಶಿ, ಮಾಲಿನಿ, ಎಚ್‌. ಉಸ್ಮಾನ್‌, ವಿಲ್ಸನ್‌ ರೋಡ್ರಿಗಸ್‌, ವಂ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ವಂ| ರಾಕ್‌ ಡಿ’ಸೋಜಾ, ಡಾ| ದೇವಿಪ್ರಸಾದ್‌ ಶೆಟ್ಟಿ, ಡಾ| ರಾಜಶೇಖರ ಕೋಟ್ಯಾನ್‌, ನವೀನ್‌ಚಂದ್ರ ಜೆ. ಶೆಟ್ಟಿ, ಕಾಪು ಲೀಲಾಧರ ಶೆಟ್ಟಿ, ಕೆ.ಪಿ.ಆಚಾರ್ಯ, ಡಾ| ಪ್ರಭಾಕರ ಶೆಟ್ಟಿ, ಶ್ರೀಧರ ಶೇಣವ, ಕೆ. ವಾಸುದೇವ ಶೆಟ್ಟಿ, ಕೆ. ಮನೋಹರ ಶೆಟ್ಟಿ, ದೀಪಕ್‌ ಕುಮಾರ್‌ ಎರ್ಮಾಳ್‌ ಉಪಸ್ಥಿತರಿದ್ದರು.
ಪ್ರದೀಪ್‌ ಕುಡೇìಕರ್‌ ಸ್ವಾಗತಿಸಿದರು. ಕಾಪು ದಿವಾಕರ ಶೆಟ್ಟಿ ಪ್ರಸ್ತಾವನೆಗೈದರು. ಮೋಹನ್‌ರಾಜ್‌ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

ಕಾಪು ತಾಲೂಕಿಗೆ ಸರಕಾರಿ ಕಾಂಪ್ಲೆಕ್ಸ್ 
ಕಾಪು ತಾಲೂಕು ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಶಾಸಕ ವಿನಯ ಕುಮಾರ್‌ ಸೊರಕೆ ಅವರು ಕಾಪುವಿಗೆ ಐಡೆಂಟಿಟಿ ಬರಬೇಕಾದರೆ ತಾಲೂಕು ರಚನೆ ಅಗತ್ಯವಾಗಿ ನಡೆಯಬೇಕಿದೆ ಎಂಬ ಬೇಡಿಕೆಯನ್ನು ಸಿಎಂ ಮತ್ತು ಕಂದಾಯ ಸಚಿವರ ಮುಂದಿರಿಸಿದ್ದು, ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ದೊರಕಿದೆ. ಕಾಪು ತಾಲೂಕು ರಚನೆ ಯಾಗುತ್ತಲೇ ಸರಕಾರದ ಎಲ್ಲ ಕಚೇರಿಗಳೂ ಕಾಪುವಿಗೆ ಬರಲಿದ್ದು, ಜನರಿಗೆ ಅನುಕೂಲವಾಗಲಿದೆ. ಕಾಪು ಬಂಗ್ಲೆ ಮೈದಾನವನ್ನು ಸರಕಾರಿ ಕಾಂಪ್ಲೆಕ್ಸ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲಾಗಿದ್ದು, ಅದಕ್ಕೂ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next