ಕೋಟ: ಕೋಟ ಪಡುಕರೆಯ ಯುವತಿಯೋರ್ವಳು ನೇಪಾಳ ಮೂಲದ ಇದೀಗ ಅಸ್ಸಾಂನ ನಿವಾಸಿಯಾಗಿರುವ ಯುವಕನನ್ನು ಪ್ರೀತಿಸಿ ಸೆ.21ರಂದು ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು.
ಇಲ್ಲಿನ ಕೋಟ ಪಡುಕರೆಯ ನಿವಾಸಿ ದಿ.ಕಾಳ ಬತ್ತಾಡ ಮತ್ತು ರಾಧಾ ಅವರ ಪುತ್ರಿ ದೀಪಾ (21) ಹಾಗೂ ನೇಪಾಳ ಮೂಲದ ಉಪೆನ್ ಡೈಮಾರ್ (23) ದಂಪತಿಗಳೆ ಈ ನವ ಜೋಡಿಗಳು.
ಸುಮಾರು ಐದು ವರ್ಷದಿಂದ ಮಣೂರಿನ ಫಿಶ್‌ಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉಪೆನ್ ಅವರು ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ದೀಪಾಳನ್ನು ಪ್ರೀತಿಸುತ್ತಿದ್ದು, ಇವರ ಮದುವೆಗೆ ದೀಪಾಳ ಸಂಬಂಧಿ ಪಿ.ವಿ. ಆನಂದ್ ಮುಂದಾಳತ್ವ ವಹಿಸಿದರು.
ಹುಡುಗಿಯ ಕಡೆಯಿಂದ ಸ್ಥಳೀಯ ಮಂದಿ ಹಾಗೂ ನೇಪಾಳದಿಂದ ಹುಡುಗನ ಕಡೆಯವರು ಮದುವೆಗೆ ಆಗಮಿಸಿದ್ದರು. ಸ್ಥಳೀಯ ದಲಿತ ಸಂಘರ್ಷ ಸಮಿತಿಯ ಮುಖಂಡರು, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ದಂಪತಿಗಳು ನವ ವಧು ವರರನ್ನು ಅಶೀರ್ವಚಿಸಿದರು.
ಒಟ್ಟಾರೆ ನೇಪಾಲಿ ಹುಡುಗನೊಂದಿಗೆ ನಡೆದ ಕರಾವಳಿ ಹುಡುಗಿಯ ಈ ಕಲ್ಯಾಣ ಮಸ್ತುವಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.