Advertisement
ರಾಜ್ಯದಿಂದ ಪ್ರತೀ ವರ್ಷ ಸುಮಾರು 1 ಸಾವಿರ ಕಂಟೈನರ್‌ಗಳ ಮೂಲಕ ಚೀನಕ್ಕೆ ಮೀನು ರಫ್ತು ಆಗುತ್ತದೆ. ಒಂದು ಕಂಟೈನರ್‌ನಲ್ಲಿ 25 ಟನ್ ಮೀನು ಇರುತ್ತದೆ. ಕಪ್ಪೆ ಬೊಂಡಾಸ್, ಬೊಂಡಾಸ್ ಮತ್ತು ಪಾಂಬೋಲು ಮೀನು ಯಥೇತ್ಛವಾಗಿ ಚೀನಕ್ಕೆ ರಫ್ತಾಗುತ್ತವೆ. ಆದರೆ ಕೊರೊನೋತ್ತರದಲ್ಲಿ ವಿದೇಶಗಳಿಂದ ಬೇಡಿಕೆ ಕುಸಿತ ಮತ್ತು ಕಟ್ಟುನಿಟ್ಟಿನ ನಿಯಮಗಳಿಂದ ರಫ್ತಿಗೆ ಹೊಡೆತ ಬೀಳುತ್ತಿದೆ.
Related Articles
Advertisement
ಪ್ರಯೋಗಾಲಯ ಪರೀಕ್ಷೆ ಇಲ್ಲಿಲ್ಲ!ಕೇಂದ್ರ ಸರಕಾರದ “ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ದ ಕಚೇರಿ ಮಂಗಳೂರಿನಲ್ಲಿ ಇದ್ದರೂ ಇಲ್ಲಿಂದ ರಫ್ತಾಗುವ ಮೀನಿನ ಪ್ರಯೋಗಾಲಯ ಪರೀಕ್ಷೆಗಾಗಿ ಕೊಚ್ಚಿಯಲ್ಲಿರುವ ಕೇಂದ್ರ ಕಚೇರಿಯನ್ನು ಅವಲಂಬಿಸಬೇಕಾಗಿದೆ. ರಫ್ತು ಮಾಡುವ ಕಾರ್ಖಾನೆಯಲ್ಲಿ ಲ್ಯಾಬ್ ಇದ್ದರೂ ವಾರ್ಷಿಕವಾಗಿ ನಡೆಯಬೇಕಾದ ಪರೀಕ್ಷೆಯ ವರದಿಯನ್ನು ಕೊಚ್ಚಿಯಿಂದಲೇ ಪಡೆಯಬೇಕಾದ ಕಾರಣ ಕರಾವಳಿಯ ರಫ್ತು ಉದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳೂರಿನಲ್ಲೇ ಪ್ರಯೋಗಾಲಯ ಆರಂಭಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರೂ ಸಮಸ್ಯೆ ತಪ್ಪಿಲ್ಲ. ಏರ್‌ಕಾರ್ಗೊ ದರ ದುಪ್ಪಟ್ಟು !
ಸದ್ಯ ಏರ್ ಕಾರ್ಗೊ ಮಾತ್ರ ನಿರ್ವಹಣೆಯಾಗುತ್ತಿದ್ದು, ದರ ಏರಿದೆ. ಇದು ಕೂಡ ಮೀನು ರಫ್ತಿಗೆ ಹೊಡೆತ ನೀಡುತ್ತಿದೆ. ಸದ್ಯ 100 ರೂ. ಮೌಲ್ಯದ ಮೀನನ್ನು 300 ರೂ. ವ್ಯಯಿಸಿ ಕಳುಹಿಸಿಕೊಡುವ ಸ್ಥಿತಿಯಿದೆ. ಹೀಗಾಗಿ ಮಾರ್ಚ್‌ನಿಂದ ಇಲ್ಲಿಯ ವರೆಗೆ ಮೀನು ರಫ್ತು ಮಾಡಿಲ್ಲ. ವಿಮಾನಯಾನ ಸಂಸ್ಥೆಗಳು ದರ ಕಡಿಮೆ ಮಾಡಿದರೆ ಉತ್ತಮ ಎನ್ನುತ್ತಾರೆ ಓರ್ವ ರಫ್ತು ಉದ್ಯಮಿ. ಚೀನ ಸೇರಿದಂತೆ ವಿದೇಶಗಳಿಗೆ ರಾಜ್ಯದಿಂದ ಕಳೆದ ವರ್ಷ ಸುಮಾರು 1,600 ಕೋ.ರೂ. ಮೌಲ್ಯದ ಮೀನು ರಫ್ತಾಗಿದೆ. ಈ ಬಾರಿ ಮೀನುಗಾರಿಕೆ ಆರಂಭ ತಡವಾದದ್ದರಿಂದ ಕೆಲವು ದಿನಗಳ ಬಳಿಕ ರಫ್ತು ಆರಂಭವಾಗುವ ನಿರೀಕ್ಷೆಯಿದೆ. ಅಲ್ಲಿನ ಬೇಡಿಕೆಗೆ ಆಧರಿಸಿ ವಹಿವಾಟು ನಡೆಯಲಿದೆ.
– ಪಾರ್ಶ್ವನಾಥ್, ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು ಮೀನು ರಫ್ತು ಮಾಡುವ ಕಾರ್ಖಾನೆಗಳು
ಮಂಗಳೂರು 12
ಉಡುಪಿ 10
ಉತ್ತರ ಕನ್ನಡ 3
ಒಟ್ಟು: 25 ದಿನೇಶ್ ಇರಾ