Advertisement

U. T. Khader ಕರಾವಳಿಯ ಸಂಸ್ಕೃತಿ ಅಂತಾರಾಷ್ಟ್ರೀಯ ಮಟ್ಟಕ್ಕೆ

11:13 PM Sep 06, 2024 | Team Udayavani |

ಮಂಗಳೂರು: ಅಂತಾರಾಷ್ಟ್ರೀ ಯ ಮಟ್ಟದ ಕರಾಟೆ ಚಾಂಪಿಯನ್‌ ಆಯೋಜಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೆ, ಕರಾವಳಿಯ ಸಂಸ್ಕೃತಿ ಪರಂಪರೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿ ಸುವ ಅವಕಾಶ ಲಭಿಸಿದೆ ಎಂದು ವಿಧಾನಸಭಾಧ್ಯಕ್ಷ ಹಾಗೂ ಕರಾಟೆ ಚಾಂಪಿಯನ್‌ಶಿಪ್‌ ಚೀಫ್‌-ಡಿ- ಮಿಶನ್‌ ಯು.ಟಿ. ಖಾದರ್‌ ಹೇಳಿದರು.

Advertisement

ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಮಂಗಳೂರು ಡೋಜೋ ವತಿಯಿಂದ ಕುಲಶೇಖರ ಚರ್ಚ್‌ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ “ಶೌರ್ಯ’ ಕರಾಟೆ ಚಾಂಪಿಯನ್‌ಶಿಪ್‌ ಅನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರಾಟೆಯಂತಹ ಕ್ರೀಡೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿ. ಹೆತ್ತವರ ಪ್ರೋತ್ಸಾಹ, ಸಹಕಾರದಿಂದ ಕರಾಟೆ ಇಂದಿಗೂ ಜೀವಂತವಾಗಿದೆ. ಅಂತಾ ರಾಷ್ಟ್ರೀಯ ಮಟ್ಟದ ಕರಾಟೆಗಳಿಗೆ ವಿದೇಶಗಳಿಗೆ ಅಥವಾ ದೇಶದ ಇತರರಾಜ್ಯಗಳಿಗೆ ತೆರಳಲು ಸಾಧ್ಯವಾಗ ದವರಿಗೆ ಮಂಗಳೂರಿನಲ್ಲಿ ಆಯೋಜಿಸಿ ರುವ ಈ ಚಾಂಪಿಯನ್‌ಶಿಪ್‌ ಒಂದು ಅವಕಾಶವಾಗಿದ್ದು, ಇದನ್ನು ಉತ್ತಮ ವಾಗಿ ಬಳಸಿಕೊಳ್ಳಬೇಕು ಎಂದರು.

ಮಂಗಳೂರು ಬಿಷಪ್‌ ಅ| ವಂ| ಡಾ| ಪೀಟರ್‌ ಪಾವ್ಲ್ ಸಲ್ಡಾನಾ ಅವರು ಕರಾಟೆ ಚಾಂಪಿಯನ್‌ಶಿಪ್‌ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.

ಉತ್ತಮ ಸ್ಪಂದನೆ: ಕಾಮತ್‌
ಅಧ್ಯಕ್ಷತೆ ವಹಿಸಿದ್ದ ಶಾಸಕ, ಸಂಘಟನೆ ಸಮಿತಿ ಚೇರ್ಮನ್‌ ಡಿ.ವೇದವ್ಯಾಸ ಕಾಮತ್‌ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ಆಯೋಜನೆ ಆಗಿಲ್ಲ. ಈಗ ಮಂಗ ಳೂರಿನಲ್ಲಿ ನಡೆಯುತ್ತಿರುವ ಕರಾಟೆ ಚಾಂಪಿಯನ್‌ಶಿಪ್‌ಗೆ ದೊಡ್ಡ ಮಟ್ಟದ ಸ್ಪಂದನೆ ಸಿಕ್ಕಿದೆ. ಸ್ಥಳೀಯ ಹಿರಿಯ ಕರಾಟೆ ಪಟುಗಳು ತೀರ್ಪುಗಾರರ ಸಹಕಾರದಿಂದ ಅಂತಾರಾಷ್ಟ್ರೀಯ ಸ್ಪರ್ಧೆ ಯಶಸ್ವಿಯಾಗಿ ನಡೆಯಲಿ ಎಂದರು.

Advertisement

ಪಂದ್ಯಾವಳಿಯ ಡೈರೆಕ್ಟರ್‌ ಜನರಲ್‌ ಡಾ| ಎ. ಸದಾನಂದ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಹಿರಿಯ ಸಲಹೆಗಾರ ರಾಜಗೋಪಾಲ್‌ ರೈ, ಕರಾಟೆ ಇಂಡಿಯಾ ಅಧ್ಯಕ್ಷ ಭರತ್‌ ಶರ್ಮಾ, ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯಾ ಅಧ್ಯಕ್ಷ ಈಶ್ವರ್‌ ಕಟೀಲು, ಕಾರ್ಯದರ್ಶಿ ಮಧು ಪಾಟೀಲ್‌, ಪ್ರಮುಖರಾದ ಕೆ.ತೇಜೋಮಯ, ರಮೇಶ್‌ ಕುಂದರ್‌, ಜನಾರ್ದನ್‌ ನಾಯಕ್‌, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಯತೀಶ್‌ ಬೈಕಂಪಾಡಿ, ಕರ್ನಾಟಕ ಕರಾಟೆ ಅಧ್ಯಕ್ಷ ಭಾರ್ಗವ ರೆಡ್ಡಿ, ಸಂಘಟನೆ ಸಮಿತಿ ಅಧ್ಯಕ್ಷ ಸುರೇಂದ್ರ ಬಿ., ಉಪಾಧ್ಯಕ್ಷ ರೆ| ಫಾ|ಕ್ಲಿಫರ್ಡ್‌ ಫೆರ್ನಾಂಡಿಸ್‌, ಪ್ರಧಾನ ಕಾರ್ಯದರ್ಶಿ ಸೂರಜ್‌ ಕುಮಾರ್‌, ಖಜಾಂಚಿ ಸುಧೀರ್‌ ಸಾಲ್ಯಾನ್‌ ಉಪಸ್ಥಿತರಿದ್ದರು.

ಸಾವಿರಕ್ಕೂ ಅಧಿಕ ಸ್ಪರ್ಧಿಗಳು
ಶುಕ್ರವಾರ 6ರಿಂದ 14 ವರ್ಷದೊಳಗಿನ ಎಲ್ಲ ವಿಧದ ಕಲರ್‌ ಬೆಲ್ಟ್‌ಗಳ ಕರಾಟೆ ಪಟುಗಳಿಗೆ ಸ್ಪರ್ಧೆಗಳು ನಡೆದ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಸುಮಾರು ಒಂದು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಸೆ.7ರಂದು 14 ವರ್ಷ ಮೇಲ್ಪಟ್ಟವರಿಗೆ ಪಂದ್ಯಾಟ ನಡೆಯಲಿದೆ. ಸೆ.8ರಂದು ರವಿವಾರ ಬ್ಲ್ಯಾಕ್‌ ಬೆಲ್ಟ್ನವರ ಪಂದ್ಯಾಟ ನಡೆಯಲಿವೆ. ಇದರಲ್ಲಿ ಮಲೇಶ್ಯಾ, ಜೋರ್ಡಾನ್‌, ಜಪಾನ್‌, ಶ್ರೀಲಂಕಾ, ತಾಂಜಾನಿಯಾ ಮುಂತಾದ ದೇಶಗಳಿಂದ ಕರಾಟೆ ಪಟುಗಳ ತಂಡಗಳು ಭಾಗವಹಿಸಲಿವೆ. ಶನಿವಾರ ಮತ್ತು ರವಿವಾರ ಬೆಳಗ್ಗೆ 9.30ರಿಂದ ಸ್ಪರ್ಧೆಗಳು ಆರಂಭವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.