Advertisement

ಕರಾವಳಿ ಕಾಂಗ್ರೆಸ್‌ ಸಿದ್ಧತೆ, ಹೊಸ ಹುರುಪು

06:00 AM Mar 18, 2018 | Team Udayavani |

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾ. 20ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಸುವ ಜನಾಶೀರ್ವಾದ ಯಾತ್ರೆಗೆ ಸರ್ವ ಸಿದ್ಧತೆಗಳು ನಡೆಯುತ್ತಿವೆ. ಚುನಾವಣೆ ಸಮೀಪಿಸುತ್ತಿದ್ದು, ರಾಹುಲ್‌ ಕರಾವಳಿ ಪ್ರವಾಸ ಕಾಂಗ್ರೆಸ್‌ ಪಾಳೆಯದಲ್ಲಿ ಹೊಸ ಹುರುಪು ಮೂಡಿಸಿದೆ.

Advertisement

ರಾಹುಲ್‌ ಪ್ರವಾಸ
ರಾಹುಲ್‌ ಗಾಂಧಿ ಮಾ. 20ರಂದು ಬೆಳಗ್ಗೆ 11.30ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಕಾಪುವಿಗೆ ತೆರಳುತ್ತಾರೆ. 12.55ರಿಂದ 1.35ರ ವರೆಗೆ ತೆಂಕ ಎರ್ಮಾಳ್‌ನಲ್ಲಿ ರಾಜೀವ್‌ ಗಾಂಧಿ ಪೊಲಿಟಿಕಲ್‌ ಇನ್‌ಸ್ಟಿಟ್ಯೂಟ್‌ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸುವರು. 1.45ರಿಂದ 2.20ರವರೆಗೆ ಪಡುಬಿದ್ರಿಯಲ್ಲಿ ಕಾರ್ನರ್‌ ಮೀಟಿಂಗ್‌
ಇದೆ. ಅಪರಾಹ್ನ 3.30ಕ್ಕೆ ಮೂಲ್ಕಿಗೆ ಆಗಮಿಸುವ ಅವರನ್ನು ದ.ಕ. ಜಿಲ್ಲಾ ಕಾಂಗ್ರೆಸ್‌ ಸ್ವಾಗತಿಸಲಿದೆ. ಬಳಿಕ ಸುರತ್ಕಲ್‌ನಲ್ಲಿ 4.20ರಿಂದ 4.50ರ ವರೆಗೆ ರೋಡ್‌ಶೋ ಹಾಗೂ ಸಭೆ ನಡೆಯಲಿದೆ. ಸಂಜೆ 5.20ರಿಂದ ನಗರದ ಅಂಬೇಡ್ಕರ್‌ ವೃತ್ತದಿಂದ ನೆಹರೂ ಮೈದಾನದ ವರೆಗೆ ಯಾತ್ರೆ ಸಾಗಲಿದೆ. ಸಂಜೆ 6ರಿಂದ ನೆಹರೂ ಮೈದಾನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ನಡೆಯಲಿದೆ.

ಧಾರ್ಮಿಕ ಕೇಂದ್ರಗಳಿಗೆ ಭೇಟಿ
ಕಾರ್ಯಕರ್ತರ ಸಭೆಯ ಬಳಿಕ 7.30ರಿಂದ 9 ಗಂಟೆಯ ವರೆಗೆ ಮಂಗಳೂರಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ, ರೊಸಾರಿಯೋ ಚರ್ಚ್‌ ಹಾಗೂ ಉಳ್ಳಾಲ ದರ್ಗಾಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡುವರು.  ರೋಡ್‌ಶೋಗೆ ಹೆಚ್ಚು ಒತ್ತು  ಉತ್ತರ ಕರ್ನಾಟಕದಲ್ಲಿ ರಾಹುಲ್‌ ಗಾಂಧಿ ನಡೆಸಿರುವ ರೋಡ್‌ಶೋ ಭಾರೀ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ದ. ಕ. ಹಾಗೂ ಉಡುಪಿ ಜಿಲ್ಲೆಯ ಯಾತ್ರೆ ಸಂದರ್ಭದಲ್ಲೂ ರೋಡ್‌ ಶೋಗೆ ಹೆಚ್ಚು ಒತ್ತು ನೀಡಲಾಗಿದೆ. 

ಭಾರೀ ಸಿದ್ಧತೆ
ಯಾತ್ರೆಯ ಅಭೂತಪೂರ್ವ ಸಂಘಟನೆಗಾಗಿ ಬಿ. ರಮಾನಾಥ ರೈ ಹಾಗೂ ಹರೀಶ್‌ ಕುಮಾರ್‌ ನೇತೃತ್ವದಲ್ಲಿ ಈಗಾಗಲೇ ಪೂರ್ವಭಾವಿ ಸಭೆಗಳು ನಡೆದಿವೆ. 

ಸರ್ಕಿಟ್‌ ಹೌಸ್‌ನಲ್ಲಿ ವಾಸ್ತವ್ಯ 
 ರಾಹುಲ್‌ ಗಾಂಧಿ ಮಾ. 20ರಂದು ರಾತ್ರಿ ನಗರದ ಸಕೀìಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡುವರು. ಎಸ್‌ಪಿಜಿ ಪಡೆ ಶನಿವಾರ ಸರ್ಕಿಟ್‌ ಹೌಸ್‌ಗೆ ಆಗಮಿಸಿ ಭದ್ರತೆ ವ್ಯವಸೆœಗಳ ಬಗ್ಗೆ ಪರಿಶೀಲಿಸಿದೆ. ಮಾ. 21ರಂದು ರಾಹುಲ್‌ ಗಾಂಧಿ ಬೆಳಗ್ಗೆ 8.30ರಿಂದ 9.30ರ ವರೆಗೆ ಸರ್ಕಿಟ್‌ ಹೌಸ್‌ನಲ್ಲಿ ದ. ಕ. ಮತ್ತು ಉಡುಪಿ ಜಿಲ್ಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಸಭೆ ಹಾಗೂ 9 ರಿಂದ 10 ಗಂಟೆಯ ವರೆಗೆ ಎರಡೂ ಜಿಲ್ಲೆಗಳ ಪಕ್ಷದ ಹಿರಿಯ ನಾಯಕರ ಸಭೆ ನಡೆಸುವರು. 10.20ಕ್ಕೆ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಿ ಬಳಿಕ ಚಿಕ್ಕಮಗಳೂರಿನ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next