Advertisement
ದ.ಕ., ಉಡುಪಿ ಭಾಗದಲ್ಲಿ ಬಿಸಿ ಗಾಳಿ ಎಚ್ಚರಿಕೆಯನ್ನು ಐಎಂಡಿಯು ನೀಡಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎನ್ನುತ್ತಾರೆ ಹವಾಮಾನ ವಿಶ್ಲೇಷಕರು.
ಸದ್ಯ ಉತ್ತರ ಭಾರತ ಭಾಗಗಳಲ್ಲಿ ತಾಪಮಾನ ಏರಿಕೆ ಕಂಡಿದೆ. ಪುಣೆ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಆ ಭಾಗದಿಂದ ಕರಾವಳಿ ಕಡೆಗೆ ಗಾಳಿ ಬೀಸುತ್ತಿದ್ದು, ಇದು ಬಿಸಿಯಾಗಿರುತ್ತದೆ. ಇದೇ ಕಾರಣಕ್ಕೆ ಬಿಸಿ ಗಾಳಿಯ ಎಚ್ಚರಿಕೆ ನೀಡಲಾಗಿದೆ ಎನ್ನುತ್ತಾರೆ ಐಎಂಡಿ ಅಧಿಕಾರಿ ಪ್ರಸಾದ್. ಹವಾಮಾನ ತಜ್ಞ ಡಾ| ರಾಜೇಗೌಡ ಪ್ರಕಾರ, “ಮೆಡಿಟರೇನಿಯನ್ ಪ್ರದೇಶದಲ್ಲಿ ಡಸ್ಟ್‌ಸ್ಟಾರ್ಮ್ (ಧೂಳುಮಿಶ್ರಿತ ಬಿರುಗಾಳಿ) ಆರಂಭ ವಾಗಿದೆ. ವಾತಾವರಣದಲ್ಲಿ ಒತ್ತಡ ಕಡಿಮೆ ಯಾದರೆ ಡಸ್ಟ್ ಸ್ಟಾರ್ಮ್ ದಕ್ಷಿಣದ ಕಡೆಗೂ ಬೀಸುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ.
Related Articles
ಸದ್ಯದ ಮಾಹಿತಿಯಂತೆ ಮಾರ್ಚ್ ಮೂರನೇ ವಾರದವರೆಗೆ ಗರಿಷ್ಠ ಉಷ್ಣಾಂಶ ಇದೇ ರೀತಿ ಇರಲಿದೆ. ಕರಾವಳಿಯಲ್ಲಿ ವಾಡಿಕೆ ಅಥವಾ ಅದಕ್ಕಿಂತ ಒಂದೆರಡು ಡಿ.ಸೆ. ಹೆಚ್ಚಿನ ತಾಪಮಾನ ದಾಖಲಾಗಲಿದ್ದು, ಬಳಿಕ ಪೂರ್ವ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ತಜ್ಞರು.
Advertisement