Advertisement
ಸಾಮಾನ್ಯವಾಗಿ 3 ಬೆಳೆಗಳಲ್ಲಿ ಭತ್ತದ ಕೃಷಿ ಕಾರ್ಯ ನಡೆಯುತ್ತಿತ್ತು. ಎಣಿಲು, ಸುಗ್ಗಿ ಹೀಗೆ ಮಳೆಗಾಲವನ್ನೇ ಅಂದರೆ ಮಳೆ ನೀರನ್ನೇ ಆಧರಿಸಿದ ಒಂದು ಬೆಳೆ. ಸ್ವಲ್ಪ ನೀರಾಶ್ರಯವಿದ್ದು ಎರಡನೆಯ ಬೆಳೆ. ನದಿ ಬದಿ ಇತ್ಯಾದಿ ಅವಲಂಬಿತ ಸಂಪೂರ್ಣ ನೀರಾಶ್ರಯವಿರುವ 3ನೆಯ ಬೆಳೆ. ಎರಡು ಮೂರನೆಯ ಫಸಲಿನಲ್ಲಿ ಉದ್ದು ಬೆಳೆ ಯುವವರಿದ್ದಾರೆ. ಬಹು ಬಗೆಯ ತರಕಾರಿಗಳನ್ನು ಬೆಳೆಸುವವರೂ ಇದ್ದಾರೆ.
ಆಧುನೀಕರಣದ ಪ್ರಭಾವ ಭತ್ತದ ಕೃಷಿಗಾರಿಕೆ ಯನ್ನೂ ತಟ್ಟಿದೆ. ಒಂದು ಹಂತದಲ್ಲಿ ಭತ್ತದ ಗದ್ದೆಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಾ ಬಂದವು. ನಿರ್ಮಾಣ ಕಾರ್ಯ ಇತ್ಯಾದಿ ಇಲ್ಲಿ ನಡೆದು ಕೃಷಿ ಭೂಮಿಯ ಪ್ರಮಾಣ ಇಳಿಮುಖ ವಾಯಿತು. ತೋಟಗಾರಿಕೆಗೂ ಈ ಗದ್ದೆಗಳು ಬಳಕೆಯಾದರೂ ಅದು ವಾಣಿಜ್ಯ ಬೆಳೆಗಳ ಮೂಲಕ ರೈತರಿಗೆ ಆರ್ಥಿಕ ಶಕ್ತಿಯೂ ಆಯಿತು. ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಕಾರ್ಯಕ್ಕೆ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಾ ಒಂದಿಷ್ಟು ಅಳಿದುಳಿದ ಗದ್ದೆಗಳ ಕಾರ್ಯಕ್ಕೆ ಟಿಲ್ಲರ್, ಟ್ರಾÂಕ್ಟರ್ ಇತ್ಯಾದಿ ಆಧುನಿಕ ತಂತ್ರಜ್ಞಾನದ ಬಳಕೆ ಯಾಯಿತು. ಶ್ರಮ ಇಲ್ಲಿ ಕಡಿಮೆಯಾದರೂ ಫಸಲು ಇಳಿಮುಖವಾಗುತ್ತಾ ಬಂತು. ಒಂದಿಷ್ಟು ವೆಚ್ಚದಾಯಕ ಕೂಡ.
Related Articles
Advertisement
ಕರಾವಳಿಯ ಪ್ರಧಾನ ಆಹಾರ ಅಕ್ಕಿ. ಆದರೆ ಈಗ ಒಂದು ಕಾಲದ ಸ್ವಾವಲಂಬನೆಯಿಂದ ಈಗ ಪರಾ ಪಲಂಬನೆ ಅನಿವಾರ್ಯವಾಗಿದೆ. ಆಯಾ ಜಿಲ್ಲೆ ಗಳಿಗೆ ಸಾಕಷ್ಟು ಅಕ್ಕಿಯನ್ನು ಉತ್ಪಾದನೆ ಮಾಡ ಲಾಗುತ್ತಿತ್ತು. ಆದರೆ ಈಗ ಸುಮಾರು ಶೇ. 30ರಷ್ಟು ಬೇರೆ ಜಿಲ್ಲೆ, ರಾಜ್ಯಗಳಿಂದ ಆಮದು ಮಾಡಿ ಕೊಳ್ಳು ವುದು ಅನಿವಾರ್ಯವಾಗಿದೆ. ಸಾಂಪ್ರದಾಯಿಕ ಗುಣಮಟ್ಟ ತನ್ಮೂಲಕ ವ್ಯತ್ಯಾಸಗೊಳ್ಳುತ್ತಿದೆ.
ಕೃಷಿ ಕಾರ್ಯಕ್ಕೆ ಸಂಬಂಧಿಸಿದ ರೋಮಾಂಚ ನವು ತನ್ಮೂಲಕ ಮರೆಯಾಗಿದೆ. ಅದಕ್ಕೆ ಉತ್ತ ಗದ್ದೆಯಲ್ಲಿ ಹಲಗೆ ಹಾಕುವ ವೇಳೆ ಎಳೆಯರು ಕುಳಿತು ಆನಂದ ಅನುಭವಿಸುತ್ತಿದ್ದ ದಿನಗಳಿದ್ದವು. (ತತ್‌ಕ್ಷಣ ಗದ್ದೆಯ ನಡುವೆ ಒಳ್ಳೆ ಮುಂತಾದ ನೀರ ಹಾವುಗಳನ್ನು ಕಂಡು ತಿರುಚಿ ಓಡಿ ಬರುವ ಮಕ್ಕಳೂ ಇದ್ದರು) ಪೈರು ಬೆಳೆಯುತ್ತಿದ್ದಂತೆ ಹಂದಿ ಮತ್ತಿತರ ಪ್ರಾಣಿ ಪಕ್ಷಿಗಳ ದಾಳಿ ತಡೆಗಟ್ಟಲು ದೊಡ್ಡ ಗದ್ದೆಯ ನಡುವೆ ಸ್ಥಳೀಯ ಭಾಷೆಗಳಲ್ಲಿ ಗುಡುಮು ಎಂದು ಕರೆಯಲಾಗುತ್ತಿದ್ದ ಪುಟ್ಟ ಗುಡಿಸಲು ನಿರ್ಮಾಣ ಮಾಡುತ್ತಿದ್ದರು. ರೈತರು ಇಲ್ಲಿ ರಾತ್ರಿಯಲ್ಲಿ ಪಾಳಿ ಸಹಿತ ಕುಳಿತು ಡಬ್ಬಿ ಇತ್ಯಾದಿ ಶಬ್ದ ಬರುವ ಪರಿಕರಗಳನ್ನು ಬಡಿದು ಈ ಪ್ರಾಣಿ ಪಕ್ಷಿಗಳನ್ನು ಓಡಿಸುವ ಕಾಯಕವಿತ್ತು. ಅಂತೆಯೇ ಪ್ರಾಣಿಗಳನ್ನು ಬೆದರಿಸಲು ಗದ್ದೆ ನಡುವೆ ಬೆರ್ಚಪ್ಪನ ಸ್ಥಾಪನೆಯಾಗುತ್ತಿತ್ತು.
ಅಕ್ಕಿಯೇ ಮೂಲ ಆಹಾರಕರಾವಳಿಯಲ್ಲಿ ಅಕ್ಕಿಯೇ ಪ್ರಧಾನ ಆಹಾರ ವಾಗಿದ್ದು, ಬೆಳ್ತಿಗೆ ಅಕ್ಕಿಯು ಸ್ವಲ್ಪಮಟ್ಟಿಗೆ ಬಳಕೆ ಯಾಗುತ್ತಿದೆ. ಬಗೆಬಗೆಯ ತಿಂಡಿಗಳಿಗೆ ಈ ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಅಕ್ಕಿ ಬಳಕೆಯಾಗುವುದು ಇಲ್ಲಿನ ಸಂಪ್ರದಾಯ.
ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಭತ್ತದ ತಳಿಯನ್ನು ಬಳಸುವುದಿದೆ. ಬಾಕ್ಯಾರು, ಕೊಳಂಬೆ, ನೀರಕೊಳಂಬೆ, ಮಜಲು, ಕಲ್ಲೊಟ್ಟೆ ಮಜಲು, ಹೊಸಕಂಡ ಹೀಗೆಲ್ಲ ಗದ್ದೆಗಳ ವೈವಿಧ್ಯಕ್ಕೆ ಅನುಗುಣವಾಗಿ ತಳಿಗಳ ಬಳಕೆ. ಬಾಕ್ಯಾರುನಂತ ದೊಡ್ಡ ಗದ್ದೆಗಳಲ್ಲಿ ಎತ್ತರಕ್ಕೆ ಬೆಳೆಯುವ ಕರಿಯದಡಿ, ಮಜಲುಗಳಲ್ಲಿ ಕಾಯಮೆ, ಸಣ್ಣ ಗದ್ದೆಗಳಲ್ಲಿ ಸಣ್ಣಕ್ಕೆ ಬೆಳೆಯುವ ಹೊಸ ತಳಿಗಳಾದ ಐಆರ್8, ಜಯ, ಪದ್ಮ ಇತ್ಯಾದಿ ತಳಿಗಳಿದ್ದರೆ ಈಗ ಕೃಷಿ ಸಂಶೋಧನ ಕೇಂದ್ರಗಳಿಂದ ಬಗೆಬಗೆಯ ಹೊಸ ಹೈಬ್ರಿಡ್ ತಳಿಗಳ ಉತ್ಪಾದನೆಯಾಗುತ್ತಿದೆ. ಅಂದಹಾಗೆ ಭತ್ತದ ತಳಿಗಳದ್ದೆ ಒಂದು ಅದ್ಭುತ ಕಥಾನಕ. ಗಂಧಸಾಲೆ ಎಂಬ ಬಹು ಪರಿಮಳದ ತಳಿಯು ಪರಾಗಸ್ಪರ್ಶಕ್ಕೆ ಇಲ್ಲಿನ ಗದ್ದೆಗಳಲ್ಲಿ ಕಾಣಿಸುವುದಿದೆ. ಭತ್ತದ ತಳಿಗಳ ಕೃಷಿಋಷಿ ಬಿರುದಾಂಕಿತ, ರಾಷ್ಟ್ರಪತಿಗಳಿಂದ ಮತ್ತು ಕೃಷಿ ಸಂಬಂಧಿತ ಎಲ್ಲ ಪುರಸ್ಕಾರ ಪಡೆದಿರುವ ಬೆಳ್ತಂಗಡಿ ಕಿಲ್ಲೂರಿನ ಕೆ. ದೇವರಾವ್ ಅವರ ಬಳಿ +250ಕ್ಕೂ ಹೆಚ್ಚು ಭತ್ತದ ತಳಿಗಳ ಸಂಗ್ರಹವಿರುವುದು ರಾಷ್ಟ್ರೀಯ ದಾಖಲೆ. ಮನೋಹರ ಪ್ರಸಾದ್