ತಾಲೂಕಿನಲ್ಲಿ ಕೇಳಿಬಂದಿಲ್ಲ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾ.9ರಂದು ಬಿಜೆಪಿ ಸೇರ್ಪಡೆ ಅಧಿ ಕೃತವೆಂದು ಗೊತ್ತಾದ ಬಿಜೆಪಿಯಲ್ಲಿ ಒಗ್ಗಟ್ಟಿನ
ಮಂತ್ರ ಪಠಿಸಲಾಗಿದೆ.
Advertisement
ರಾಜ್ಯ ನಾಯಕರ ಕರೆಯ ಹಿನ್ನೆಲೆಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಿಗಿರಿ ಜಿಲ್ಲೆಯ ಶಾಸಕರು ಹಾಗೂ ನಾಯಕರು ಕುರುಬ ಸಮುದಾಯದ ಪ್ರಭಾವಿ ಮುಖಂಡರೊಬ್ಬರ ಬಿಜೆಪಿ ಸೇರ್ಪಡೆಗೆ ಉತ್ಸಾಹ ತೋರಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಮುಖಂಡರು ಬಹಿರಂಗವಾಗಿ ಯಾವುದೇ ಅಪಸ್ವರ ಎತ್ತದೇ ನೇರವಾಗಿ ರಾಜಧಾನಿ ದಾರಿ ಹಿಡಿದಿದ್ದಾರೆ.
Related Articles
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಚರ್ಚೆಯಾಗಿ ಬಿಜೆಪಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಯಾರೊಬ್ಬರೂ ಆಕ್ಷೇಪ ಎತ್ತಿಲ್ಲ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಲ್ಲಾಶೇಷಗಿರಿರಾವ್, ಜಾಲಿಹಾಳ ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ರಾಗಲಪರ್ವಿ ಜಿಪಂ ಸದಸ್ಯ ಎನ್. ಶಿವನಗೌಡ ಗೋರೆಬಾಳ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರೆಲ್ಲ ಬೆಂಗಳೂರಿಗೆ ದೌಡಾಯಿಸಿದ್ದಾರೆ.
Advertisement
ಮಸ್ಕಿ ಎಲೆಕ್ಷನ್ ಟಾರ್ಗೆಟ್: ಬಿ.ವೈ. ವಿಜಯೇಂದ್ರ ಅವರಿಗೆ ಮಸ್ಕಿ ಉಪಚುನಾವಣೆ ಉಸ್ತುವಾರಿ ನೀಡಿದ ನಂತರ ಸ್ವತಃ ಹೈಕಮಾಂಡ್ ಪಕ್ಷಕ್ಕೆ ಅನುಕೂಲವಾಗುವ ಎಲ್ಲ ಕ್ರಮ ಅನುಸರಿಸುವಂತೆ ಸಂದೇಶ ನೀಡಿದೆ. ಅದನ್ನು ಬಳಸಿಕೊಂಡ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರು, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪರನ್ನು ಬಿಜೆಪಿಗೆ ಸ್ವಾಗತಿಸುವ ಹಾದಿ ಸುಗಮಗೊಳಿಸಿದ್ದಾರೆ. ರಾಜ್ಯ ಹೈಕಮಾಂಡ್ ಹಂತದಲ್ಲೇ ಈ ಚರ್ಚೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂಈ ಬಾರಿ ಬಿಜೆಪಿಯವರೇ ಸ್ವಾಗತಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದರು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮುಕ್ತ ಮನಸ್ಸಿನಿಂದ ಕಮಲದ ಬಾವುಟ ಹಿಡಿಯಲು ರಾಜಧಾನಿ ತಲುಪಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ ಮೇಲೆ ಬೇರೆ ವಿಚಾರಗಳಿಗೆ ಆಸ್ಪದವಿಲ್ಲ. ಹೈಕಮಾಂಡ್ ಆಹ್ವಾನ, ಸೂಚನೆ ಪ್ರಕಾರ ಎಲ್ಲರೂ ಬೆಂಗಳೂರಿಗೆ ತೆರಳುತ್ತಿದ್ದು, ಯಾರೊಬ್ಬರೂ ಪಕ್ಷಕ್ಕೆ ಸೇರಿಸಿಕೊಳ್ಳಲು ಬೇಡ ಎಂದಿಲ್ಲ.
ಹನುಮೇಶ ಸಾಲಗುಂದಾ,
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರು, ಸಿಂಧನೂರು ಯಮನಪ್ಪ ಪವಾರ