ನವದೆಹಲಿ: ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ಕೋಲ್ (Coal India) ಲಿಮಿಟೆಡ್ ನಿಗದಿತ 189.2 ಮೆಟ್ರಿಕ್ ಟನ್ ಗಿಂತ ಶೇ.8ರಷ್ಟು ಹೆಚ್ಚಿನ ಪ್ರಮಾಣದ ಕಲ್ಲಿದ್ದಲು ಉತ್ತಾದಿಸಿರುವುದಾಗಿ ಕಂಪನಿ ಘೋಷಿಸಿದೆ.
ಇದನ್ನೂ ಓದಿ:Uttar Pradesh: ಹಾವಿನ ದ್ವೇಷ…45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದರೂ ಬದುಕುಳಿದ ವ್ಯಕ್ತಿ!
2024ನೇ ಸಾಲಿನ ತ್ರೈಮಾಸಿಕ ಲೆಕ್ಕಾಚಾರದಲ್ಲಿ ಕಂಪನಿಯ ಕಲ್ಲಿದ್ದಲು ಉತ್ಪಾದನೆ 13.08 ಮಿಲಿಯನ್ ಮೆಟ್ರಿಕ್ ಟನ್ ಗಳಿಗೆ ಏರಿಕೆಯಾಗಿದ್ದು, ಉತ್ಪಾದನೆಯ ಎಲ್ಲಾ ಹಂತಗಳಲ್ಲೂ ಕಂಪನಿ ಧನಾತ್ಮಕ ಬೆಳವಣಿಗೆ ಹೊಂದಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.
ಅಲ್ಲದೇ ಕೋಲ್ ಇಂಡಿಯಾ ಲಿಮಿಟೆಡ್ ವರದಿಯಂತೆ, 2024ರ ಏಪ್ರಿಲ್ ನಿಂದ ಜೂನ್ ವರೆಗೆ ಕಲ್ಲಿದ್ದಲು ಸರಬರಾಜು ಶೇ.6ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ 198.4 ಮಿಲಿಯನ್ ಟನ್ ಗಳಷ್ಟು ಕಲ್ಲಿದ್ದಲು ಉತ್ಪಾದಿಸಲಾಗಿದೆ.
ರಾಜಧಾನಿಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಕಲ್ಲಿದ್ದಲು ಗಣಿಗಾರಿಕೆಯವರು ಕಲ್ಲಿದ್ದಲು ಸರಬರಾಜನ್ನು ಹೆಚ್ಚಳಗೊಳಿಸಿದ್ದು, ಕಂಪನಿ ದಾಖಲೆಯ ಶೇ.4ರಷ್ಟು ಬೆಳವಣಿಗೆ ಕಂಡಿದ್ದು, ವಾರ್ಷಿಕವಾಗಿ 160 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಕಲ್ಲಿದ್ದಲು ಉತ್ಪಾದಿಸಿರುವುಛದಾಗಿ ವರದಿ ತಿಳಿಸಿದೆ.