ನವದೆಹಲಿ: ವಿದ್ಯುತ್ ಅಭಾವ ಮತ್ತು ಕಲ್ಲಿದ್ದಲು ಕೊರತೆಯ ಸುದ್ದಿಯನ್ನು ದೆಹಲಿ ಸರ್ಕಾರ ಸೃಸ್ಟಿಸುತ್ತಿದೆ ಮತ್ತು ಪ್ರಸ್ತುತ ಇರುವ ಕಲ್ಲಿದ್ದಲು ಬಿಕ್ಕಟ್ಟನ್ನು ಮುಂದೆ ಸರಿದೂಗಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಹೇಳಿದ್ದಾರೆ.
ವಿದ್ಯುತ್ ಸರಬರಾಜು ಕಂಪನಿಗಳಾದ ಬಿಎಸ್‌ಇಎಸ್ ಮತ್ತು ಎನ್‌ಟಿಪಿಸಿ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಆರ್.ಕೆ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿದರು.
ಶನಿವಾರ ಸಂಜೆ ದೆಹಲಿ ಲೆಪ್ಟಿನೆಂಟ್ ಗವರ್ನರ್ ಮಾತನಾಡಿ ಹೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬರೆದಿರುವ ಪತ್ರದ ಬಗ್ಗೆ ತಿಳಿಸಿದ್ದಾರೆ ಎಂದರು. ದೆಹಲಿ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಅಂತಹ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದೇನೆ ಎಂದು ಸಚಿವ ಆರ್.ಕೆ ಸಿಂಗ್ ತಿಳಿಸಿದರು.
ಇದನ್ನೂ ಓದಿ:- ಶಿಕ್ಷಣ ನೀತಿ ಒಂದು ಜಾತಿ-ಧರ್ಮಕ್ಕೆ ಸೀಮಿತವಲ್ಲ :ಸಚಿವ ಡಾ. ಅಶ್ವಥ್ ನಾರಾಯಣ
ಈ ಘಟನೆಯ ಬಗ್ಗೆ ವಿವರಿಸಿದ ಸಚಿವ ಆರ್.ಕೆ ಸಿಂಗ್, ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್) ಡಿಸ್ಕಾಂ ಜೊತೆಗೆ ಗ್ಯಾಸ್ ಸಪ್ಲೈ ಮಾಡುವ ಒಪ್ಪಂದದ ಸಮಯ ಕೊನೆಗೊಂಡ ಕಾರಣ ಡೆಸ್ಕಾಂ ಕೆಲ ದಿನಗಳ ಕಾಲದ ನಿರ್ವಹಣೆಗಾಗಿ ವಿದ್ಯುತ್ ವಿವೇಚನೆಯಿಂದ ಬಳಸುವಂತೆ ಸಂದೇಶ ಕಳುಹಿಸಿತ್ತು. ಈ ಎಲ್ಲಾ ಕಾರಣಗಳಿಂದ ಈ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎಂದು ಸ್ಪಷ್ಟಪಡಿಸಿದರು.
ಭಾರತೀಯ ಅನಿಲ ಪ್ರಾಧಿಕಾರದ ಜೊತೆಗೂ ಮಾತನಾಡಿದ್ದು, ಅವರು ಅನಿಲ ಪೂರೈಕೆಯನ್ನು ಮುಂದುವರಿಸಲು ಒಪ್ಪಿದ್ದಾರೆ ಮತ್ತು ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಅಗತ್ಯವಿರುವ ವಿದ್ಯುತ್ ಸರಬರಾಜು ಒಪ್ಪಂದಗಳನ್ನು ನಿರ್ವಹಿಸಲಾಗುವುದು ಮತ್ತು ಟಾಟಾ ಪವರ್ ಕಂಪನಿಗೆ ವಿದ್ಯುತ್ ಕಡಿತದ ಬಗ್ಗೆ ಗೊಂದಲಮಯ ಸಂದೇಶಗಳನ್ನು ಜನರಿಗೆ ಕಳುಹಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.