Advertisement

ತರಬೇತುದಾರರಿಗೂ ನಗದು ಪುರಸ್ಕಾರ

12:35 PM Aug 30, 2018 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಗೆಲ್ಲುವ ನಿಟ್ಟಿನಲ್ಲಿ ತರಬೇತಿ ನೀಡುವ ತರಬೇತಿದಾರರಿಗೂ ನಗದು ಪುರಸ್ಕಾರ ನೀಡುವ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಕರ್ನಾಟಕ ಕ್ರೀಡಾ ಪ್ರಾಧಿಕಾರದ 34ನೇ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಕ್ರಿಯಾ ಯೋಜನೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ರೀತಿಯ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುವಿನ ಗೆಲುವಿನ ಹಿಂದೆ ತರಬೇತುದಾರರ ಶ್ರಮ ಇರುತ್ತದೆ. ಹೀಗಾಗಿ ಕ್ರೀಡಾ ಇಲಾಖೆಯಿಂದ ನೇಮಕಗೊಳ್ಳುವ ತರಬೇತುದಾರರಿಗೂ ನಗದು ಬಹುಮಾನ ನೀಡುವುದು ಸೂಕ್ತ. ಚಿನ್ನ ಗೆದ್ದರೆ ತರಬೇತುದಾರರಿಗೆ 10 ಲಕ್ಷ ಬಹುಮಾನ ನೀಡಲು ನಿಯಮದಲ್ಲಿ ಬದಲಾವಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿರುವ ಫ‌ುಟ್‌ಬಾಲ್‌ ಅಂಕಣವನ್ನು ಅಭಿವೃದ್ಧಿ ಪಡಿಸಿರುವ ಜಿಂದಾಲ್‌ ಸಂಸ್ಥೆಗೆ ನೀಡಿರುವ ಗುತ್ತಿಗೆಯನ್ನು ಕೇವಲ ಒಂದು ವರ್ಷ ಮುಂದುವರಿಸುವಂತೆ ಸೂಚಿಸಿದ್ದು, ವರ್ಷದ ನಂತರ ಸರ್ಕಾರದ ವಶಕ್ಕೆ ಪಡೆದು, ಮೈದಾನವನ್ನು ರಿಯಾಯ್ತಿ ದರದಲ್ಲಿ ನೀಡಬಹುದು ಎಂದು ಪರಮೇಶ್ವರ್‌ ಅಭಿಪ್ರಾಯ ಪಟ್ಟಿದ್ದಾರೆ.  ಇದಲ್ಲದೆ ಕ್ರೀಡಾ ಇಲಾಖೆಗೆ 16 ಕೋಟಿ ರೂ. ನೀಡುವಂತೆ ಹಣಕಾಸು ಇಲಾಖೆಗೆ ಸೂಚಿಸಿದರು. ಸಭೆಯಲ್ಲಿ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next