Advertisement
ದೇಶದಲ್ಲಿ ನಿರ್ಭಯಾ ಸೇರಿದಂತೆ ಇನ್ನಿತರ ಬಾಲಕಿಯರ ಮೇಲಾಗುತ್ತಿದ್ದ ಅತ್ಯಾಚಾರಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಅದರಂತೆ ಕರಾಟೆಯಲ್ಲಿನುರಿತ ತರಬೇತುದಾರರಿಂದ 2013-14ರಿಂದ ವಿದ್ಯಾರ್ಥಿನಿಯರಗೆ ಕರಾಟೆ ತರಬೇರಿಯನ್ನು ನೀಡಲು ಪ್ರಾರಂಭಿಸಲಾಯಿತು. ಇದರಿಂದ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನ ಸಬಲತೆ ಕಾಣುವಂತಾಗಿತ್ತು. ಸದ್ಯಕ್ಕೆ ತರಬೇತಿ ನಿಲ್ಲಿಸಿದ್ದು ಪ್ರಸ್ತುತ ಪ್ರೌಢ ಶಾಲಾ ವಿದ್ಯಾರ್ಥಿನಿಯರಲ್ಲಿ ಮತ್ತೆ ಆತಂಕ ಎದುರಾಗಿದೆ.
ಜಾರಿಗೆ ತರುವ ಕೆಲಸವನ್ನು ರಾಜ್ಯ ಸರಕಾರ ಮಾಡದೇ 2018-19ನೇ ಸಾಲಿನಲ್ಲಿ ಕರಾಟೆ ತರಬೇತಿ ಪ್ರಾರಂಭಿಸದಿರುವುದನ್ನು ರಾಜ್ಯ ಸರಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದರೆ ಕೇಂದ್ರದಿಂದ ಇನ್ನೂವರೆಗೂ ಹಣ ಬಾರದ ಕಾರಣ ಕರಾಟೆ ತರಬೇತಿ ಯೋಜನೆಯನ್ನು ನಿಲ್ಲಿಸಲಾಗಿದೆ ಎಂಬ ಬೇಜವಾಬ್ದಾರಿತ ಸ್ಪಷ್ಠನೆ ನೀಡುತ್ತಿದ್ದಾರೆ. ಕೇಂದ್ರ ಸರಕಾರದಲ್ಲಿ ಹಣವಿಲ್ಲವೇ?: ದೇಶದಲ್ಲಿ ನಾನಾ ಜನಪರ ಯೋಜನೆಗಳನ್ನು ತಂದಿರುವ ಕೇಂದ್ರ ಸರಕಾರದಲ್ಲಿ ಬೇಟಿ ಪಡಾವೊ,ಬೇಟಿ ಬಚಾವೊ ಒಂದಾಗಿದೆ. ಇಂತಹ ಯೋಜನೆಗಳಿಂದ ಬಹುತೇಕ ಎಲ್ಲ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವೂ ಹಾಗಿದೆ. ಅಲ್ಲದೇ ಇಂತಹ ಯೋಜನೆಗಳಿಗೆ ಕೇಂದ್ರದಲ್ಲಿ ಸಾಕಷ್ಟು ಹಣ ಇರುತ್ತದೆ. ಆದರೆ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಯೋಜನೆಗೆ ಮಾತ್ರ ಹಣವಿಲ್ಲ ಎನ್ನುವುದು ಯಾವ ನ್ಯಾಯ ಎಂದು ರಾಜ್ಯದ ಕರಾಟೆ ತರಬೇತುದಾರರ ಪ್ರಶ್ನೆಯಾಗಿದೆ.
ಪ್ರತಿಭಟನೆಗೆ ಸಜ್ಜು: ರಾಜ್ಯದ ಸರಕಾರಿ ಶಾಲೆಗಳಲ್ಲಿ ಕಲಿಕೆ ನಡೆಸಿರುವವರು ಬಹುತೇಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅಲ್ಲದೇ ಶೇ. 80ರಷ್ಟು ಗ್ರಾಮೀಣ ಪ್ರದೇಶದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು
ಕರಾಟೆ ತರಬೇತಿಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಸರಕಾರ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು.
Related Articles
Advertisement
ಪ್ರಸ್ತುತ ಸಾಲಿನಲ್ಲಿ ಹಣವಿಲ್ಲ ಎಂದು ತರಬೇತಿ ನಿಲ್ಲಿಸಿದ್ದು ಗ್ರಾಮೀಣ ಬಡ ವಿದ್ಯಾರ್ಥಿಗಳು ಕರಾಟೆ ಕಲಿಕೆಯಿಂದ ವಂಚಿತಗೊಳ್ಳುವಂತೆ ಮಾಡಿದೆ. ಇದರ ಬಗ್ಗೆ ಈಗಾಗಲೇ ಸರಕಾರದ ಪ್ರತಿಯೊಬ್ಬ ರಾಜಕೀಯ ವ್ಯಕ್ತಿಗಳಿಗೂ ತಿಳಿಸಿದ್ದು ಎಲ್ಲರೂ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಕ್ರಮ ಕೈಗೊಳ್ಳದಿರುವುದುವಿಷಾಧವಾಗಿದೆ.?
ಮೌನೇಶ ವಡ್ಡಟ್ಟಿ, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ, ಕೊಪ್ಪಳ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಕರಾಟೆ ತರಬೇತಿ ಪ್ರಾರಂಭಿಸಿದ್ದು ಸ್ವಾಗತಾರ್ಹವಾಗಿತ್ತು. ಸ್ವಯಂ ಪ್ರೇರಿತವಾಗಿ
ಸದೃಢರಾಗುವ ಕರಾಟೆ ತರಬೇತಿಯನ್ನೇ ಸರಕಾರ ನಿಲ್ಲಿಸಿದ್ದು ಖಂಡನೀಯ. ಕೂಡಲೇ ಇದನ್ನು
ಪ್ರಾರಂಭಿಸಬೇಕು. ಇಲ್ಲವಾದಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.
ಕಟ್ಟೇಸ್ವಾಮಿ, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ, ಬಳ್ಳಾರಿ ಕಳೆದ 3 ವರ್ಷಗಳಿಂದ ಸರಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆಗಾಗಿ ನೀಡುತ್ತಿದ್ದ ಕರಾಟೆ ತರಬೇತಿ ಮುಂದುವರಿಸುವಂತೆ ಸಾಕಷ್ಟು ಬಾರಿ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ. ಸರಕಾರವೂ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ತಿಳಿಸಿದೆ. ಆದರೆ ಕರಾಟೆ ತರಬೇತಿ ಯೋಜನೆ ಎಷ್ಟು ದಿನಗಳ ಮಟ್ಟಿಗೆ ಮುಂದೊಡುತ್ತದೆಯೋ ಅಷ್ಟೇ ಕರಾಟೆ ಕ್ರೀಡೆಯಿಂದ ವಂಚಿತ ವಿದ್ಯಾರ್ಥಿಗಳು ಹೆಚ್ಚಾಗುವುದನ್ನೂ ಗಮನಿಸಬೇಕಿದೆ.
ನಿತ್ಯಾನಂದ ಕೆಮ್ಮಣ್ಣು, ರಾಜ್ಯಾಧ್ಯಕ್ಷ, ರಾಜ್ಯ ಕರಾಟೆ ಶಿಕ್ಷಕರ ಸಂಘ ಶಿವಕುಮಾರ ಶಾರದಳ್ಳಿ