ನಾರಾಯಣಮಂಗಲ: ವ್ಯಾಪಕವಾಗಿ ಕನ್ನಡದ ಅವಗಣನೆ ನಡೆಯುತ್ತಿರುವ ವೇಳೆಯಲ್ಲಿ ಶತಮಾನೋತ್ಸವವನ್ನು ಕಂಡ ಶಾಲೆಯ ವಾರ್ಷಿಕೋತ್ಸವವು ಈ ನಾಡಿನ ಉತ್ಸವವಾಗಿದೆ. ಗ್ರಾಮೀಣ ಭಾಗದಿಂದ ದೇಶ ಸೇವೆಗೆ ಅನೇಕ ಪ್ರತಿಭೆಗಳನ್ನು ನೀಡಿದ, ಊರಿನಲ್ಲಿ ಸಂಸ್ಕೃತಿಯನ್ನು ಉಳಿಸಿದ ಕನ್ನಡದ ಶಾಲೆಗಳನ್ನು ಮುಂದಿನ ಜನಾಂಗಕ್ಕೆ ನೀಡಬೇಕಾದರೆ ಎಲ್ಲರ ಸಹಭಾಗಿತ್ವ ಅತೀ ಅಗತ್ಯ ಎಂದು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಹೇಳಿದರು.
ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ವ್ಯವಸ್ಥಾಪಕ ಡಾ|ಕೆ.ವಿ.ತೇಜಸ್ವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಶಾಲೆಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿಯನ್ನು ಅರಿತು ನಾವು ಮುಂದುವರಿಯಬೇಕಿದೆ. ಶಾಲೆಯ ಬೆಳವಣಿಗೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗುವುದು. ಊರವರು ತಮ್ಮ ಮಕ್ಕಳನ್ನು ಇಂತಹ ಗ್ರಾಮೀಣ ಶಾಲೆಗಳಿಗೆ ಸೇರಿಸುವ ಮೂಲಕ ಸಹಕರಿಸಬೇಕು ಎಂದರು. ಆರ್ಯ ಕಲಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ಹಳೆವಿದ್ಯಾರ್ಥಿ ಡಾ|ಸರ್ವೇಶ್ವರ ಭಟ್ ಪರೋಪಕಾರೀ ಮನೋಭಾವದಿಂದ ಇತರರ ಜತೆ ಸಂತಸದ ಜೀವನವನ್ನು ಕಳೆಯಬೇಕು ಎಂದರು. ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್ , ಕುಂಬಳೆ ಗ್ರಾಮಪಂಚಾಯತ್ ವಾರ್ಡ್ ಸದಸ್ಯ ಮುರಳೀಧರ ಯಾದವ್ ನಾಯ್ಕಪು ಮೊದಲಾದವರು ಶುಭಹಾರೈಸಿದರು.
ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ. ಮಾತನಾಡುತ್ತಾ ಕನ್ನಡವು ಈ ನೆಲದ ಸಂಸ್ಕೃತಿಯಾಗಿದೆ. ಭಾಷೆ, ಸಂಸ್ಕೃತಿ, ಜೀವನದ ಶೈಲಿಯನ್ನು ಉಳಿಸುವುದಕ್ಕೆ ನಾವು ಹೋರಾಡಬೇಕಾದ ಅನಿವಾರ್ಯಇದೆ. ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಮಾತನಾಡುತ್ತಾ ಅಧ್ಯಾಪಕ ನಿರಂತರವಾಗಿ ವಿದ್ಯಾರ್ಥಿಯಾಗಿದ್ದಾಗ ಮಾತ್ರ ಆತನಿಗೆ ವಿದ್ಯೆಯನ್ನು ಕಲಿಸಲು ಸಾಧ್ಯವಿದೆ. ತಂದೆ, ತಾಯಿ, ಗುರುಗಳನ್ನು ಪ್ರೀತಿಸುವ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಹಜತೆಯನ್ನು ನೀಡುವ ಪ್ರಕೃತಿಯ ಮಡಿಲಲ್ಲಿರುವ ಶಾಲೆಗಳಲ್ಲಿ ಆಡಿ, ಪಾಡಿ ಬೆಳೆದ ಮಕ್ಕಳು ಜೀವನದಲ್ಲಿ ಗೆಲುವನ್ನು ಕಾಣಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ¤ರಾಗಲಿರುವ ಅಧ್ಯಾಪಕರುಗಳಾದ ಉಷಾದೇವಿ ಕೆ. ಮತ್ತು ಶಾಲಾ ಮುಖ್ಯೋಪಾಧ್ಯಾಯ ಕೆ. ಗೋಪಾಲಕೃಷ್ಣ ಭಟ್ ಕಬೆಕ್ಕೋಡು ಅವರನ್ನು ಸಮ್ಮಾನಿಸಲಾಯಿತು. ಅಧ್ಯಾಪಿಕೆಯರಾದ ಸುಪ್ರೀತಾ, ಜಯಶ್ರೀ ಅಭಿನಂದನಾ ಪತ್ರ ಓದಿದರು.
ಕುಂಬಳೆ ಉಪಜಿಲ್ಲಾ ವಿದ್ಯಾ ಕಾರಿ ಕೈಲಾಸಮೂರ್ತಿ, ಬಿಆರ್‌ಸಿ ಟ್ರೈನರ್ ಮೀನಾಕ್ಷಿ, ಎಸ್.ಎಂ.ಸಿ.ಅಧ್ಯಕ್ಷ ಐತ್ತಪ್ಪ, ನಿವೃತ್ತ ಅಧ್ಯಾಪಿಕೆ ಜಯಲಕ್ಷಿ$¾à, ಹಳೆವಿದ್ಯಾರ್ಥಿ ಸಂಘದ ಪ್ರತಿನಿ ಧಿ ಜಯಪ್ರಕಾಶ ನಾರಾಯಣಮಂಗಲ, ಪಿಟಿಎ ಅಧ್ಯಕ್ಷ ಗೋಪಾಲಕೃಷ್ಣ, ಮಾತೃ ಸಂಘದ ಅಧ್ಯಕ್ಷೆ ಹೇಮಲತ ಶುಭಹಾರೈಸಿದರು.
ಶಾಲಾಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಕೆ. ಸ್ವಾಗತಿಸಿದರು. ಆರ್ಯ ಕಲಾಭಿವರ್ಧಕ ಸಂಘದ ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ವಂದಿಸಿದರು. ಅಧ್ಯಾಪಿಕೆ ಮೇಬಲ್ ಡಿ’ಸೋಜ ನಿರೂಪಿಸಿದರು.
ಹಳೆ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು.