Advertisement
ತಾಲೂಕಿನ 7 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾರ್ಯ ದರ್ಶಿಗಳು ಎಂಟು ವರ್ಷಗಳಿಂದ ಸಂಘಗಳ ಲೆಕ್ಕ ಪರಿಶೋಧನೆ (ಆಡಿಟ್) ಮಾಡಿಸಿಲ್ಲ. ಅಲ್ಲದೇ ರೈತರ ಹೆಸರಿನ ಮೇಲೆ ಅನೇಕ ಅಕ್ರಮ ಖಾತೆ ಸೃಷ್ಟಿಸಿ ಸಾಲ ಮನ್ನಾ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ತಾಲೂಕಿನಲ್ಲಿ 8800 ರೈತರ ಬೆಳೆ ಸಾಲ ಮನ್ನಾ ಆಗಿದೆ. ಇದರಲ್ಲಿ 5300 ರೈತರ ಖಾತೆಗೆ ಹಣ ಜಮೆ ಆಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಳೆದ 10 ವರ್ಷ ಗಳಿಂದ ಲೆಕ್ಕ ಪರಿಶೋಧನೆ ಮಾಡಿಸಿಲ್ಲ. ಕೆಲವು ಸಂಘಗಳಿಗೆ ಕಲಬುರಗಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸೇಡಂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಸಂಘದ ಕಾರ್ಯದರ್ಶಿಗಳು ಮಾತ್ರ ಈ ಕುರಿತು ಮಾಹಿತಿ ನೀಡುತ್ತಿಲ್ಲವೆಂದು ರೈತರಾದ ವಿಜಯಕುಮಾರ ರೊಟ್ಟಿ, ಗೌಸೋದ್ದೀನ ಹೂಡಾ, ಇಬ್ರಾಹಿಮ್, ಗೋಪಾಲರಾವ ಕಟ್ಟಿಮನಿ ದೂರಿದ್ದಾರೆ.
ತಾಲೂಕಿನ ಐನಾಪುರ ಸಹಕಾರ ಸಂಘದಲ್ಲಿ ರೈತರ ಬೆಳೆ ಸಾಲ ಮನ್ನಾ ಹಣವನ್ನು ರೈತರ ಖಾತೆಗೆ ಜಮಾ ಮಾಡದೇ ಅಲ್ಲಿನ ಕಾರ್ಯದರ್ಶಿಗಳು ವಂಚನೆ ಮಾಡಿದ್ದಾರೆ. ರೈತರ ಸಹಿ ಇಲ್ಲದೇ ಹಣ ಡ್ರಾ ಮಾಡಿಕೊಳ್ಳಲಾಗಿದೆ ಎಂದು ರೈತ ಹೋರಾ ಟಗಾರ ಶಿವಾನಂದ ಪಾಟೀಲ ಐನಾಪುರ ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ. ಚಿಂಚೋಳಿ ತಾಲೂಕಿನ ಶಾದೀಪುರ ಮತ್ತು ಐನೋಳಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಚೇರಿಗೆ ಬೀಗ ಹಾಕಿರುವುದು.