Advertisement

ಸಹಕಾರ ಸಂಘಗಳು ಸರ್ವರ ಉದ್ಧಾರದ ಸಂಜೀವಿನಿ

09:25 PM Sep 25, 2019 | Lakshmi GovindaRaju |

ಕೆ.ಆರ್‌.ನಗರ: ಸಹಕಾರ ಸಂಘಗಳಲ್ಲಿ ಕೆಲಸ ನಿರ್ವಹಿಸುವವರು ವೈಮನಸ್ಸು ಮರೆತು ಅಭಿವೃದ್ಧಿ ಮತ್ತು ಸಂಘಟನೆಯನ್ನು ಪ್ರಮುಖವಾಗಿ ಪರಿಗಣಿಸಿ ದುಡಿಯಬೇಕು ಎಂದು ಪಟ್ಟಣದ ಕಾಗಿನೆಲೆ ಕನಕ ಗುರುಪೀಠದ ಕಿರಿಯ ಶ್ರೀಗಳಾದ ರೇವಣಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.

Advertisement

ಪಟ್ಟಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮತನಾಡಿದ ಅವರು, ಸಹಕಾರ ಸಂಘಗಳು ಸರ್ವರ ಉದ್ಧಾರದ ಸಂಜೀವಿನಿಯಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಹೇಳಿದರು.

ಆರ್ಥಿಕವಾಗಿ ಸಬಲರಾಗಿರುವವರು ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟರೆ ಆ ಹಣವು ಸಂಘದ ಸದಸ್ಯರು ಮತ್ತು ವ್ಯವಹಾರ ಮಾಡುವವರಿಗೆ ಅನುಕೂಲವಾಗಲಿದ್ದು, ಈ ವಿಚಾರದಲ್ಲಿ ಹಣವಂತರು ಚಿಂತಿಸಬೇಕು ಎಂದು ಸಲಹೆ ನೀಡಿದ ಶ್ರೀಗಳು, ಸಂಘಟನೆಯಿಂದ ಎಲ್ಲವೂ ಸಾಧ್ಯವಾಗಲಿದೆ ಎಂದರು.

ತಾಲೂಕು ಮಟ್ಟದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಹೆಸರು ಗಳಿಸಿರುವ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿಯೂ ತನ್ನ ಶಾಖೆಗಳನ್ನು ಆರಂಭಿಸಿ ಒಳ್ಳೆಯ ಹೆಸರು ಮಾಡಲಿ ಎಂದು ಶುಭ ಹಾರೈಸಿದ ರೇವಣಸಿದ್ದೇಶ್ವರಸ್ವಾಮಿಗಳು ಸಂಘದ ಏಳಿಗೆಗೆ ತಾವೂ ಸಹಾಯ ಮತ್ತು ಸಹಕಾರ ನೀಡುವುದಾಗಿ ಘೋಷಿಸಿದರು.

ಸಂಘದ ಅಧ್ಯಕ್ಷ ಕೆ.ಹೆಚ್‌.ಕೃಷ್ಣೇಗೌಡ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಸಂಘವು ಸರ್ವ ಸದಸ್ಯರ ಪರವಾಗಿ ಕೆಲಸ ಮಾಡುತ್ತಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು. ಜಿಪಂ ಸದಸ್ಯ ಡಿ.ರವಿಶಂಕರ್‌, ಕಾಂಗ್ರೆಸ್‌ ಮುಖಂಡರಾದ ಐಶ್ವರ್ಯಮಹದೇವ್‌ ಮಾತನಾಡಿ, ಸಂಘದ ಏಳಿಗೆ ಮತ್ತು ಉನ್ನತಿಗೆ ಪರಸ್ಪರ ಸಹಕಾರ ಅಗತ್ಯವಿದ್ದು, ಆಡಳಿತ ಮಂಡಳಿ ಮತ್ತು ಸದಸ್ಯರು ಇದನ್ನು ಮನಗಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಜಿಪಂ ಮಾಜಿ ಸದಸ್ಯ ಜಿ.ಆರ್‌.ರಾಮೇಗೌಡ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎಂ.ಮಾಲೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಸಂಘದ ಉಪಾಧ್ಯಕ್ಷ ನಟರಾಜು, ನಿರ್ದೇಶಕರಾದ ರವಿ, ಜಿ.ಎಂ.ಲೋಹಿತ್‌, ಜೆ.ಮಂಜುನಾಥ್‌, ಎಂ.ಎಸ್‌.ಹರೀಶ್‌, ಕುಮಾರ, ಕೆ.ಎನ್‌.ಪ್ರಸನ್ನಕುಮಾರ, ಪ್ರೇಮಕುಮಾರ, ಮುಬೀನಾಬಾನು, ಮಂಜುಳ, ಮಹೇಶ್‌ಗೌಡ, ಕೆ.ಬಿ.ಭಾಸ್ಕರ, ಎಸ್‌.ಎಂ.ಯೋಗೇಶ್‌, ಪಿ.ಎಸ್‌.ದೇವರಾಜು, ಸಿಇಒ ಕೆ.ಎಸ್‌.ಕೃಷ್ಣಪ್ರಸಾದ್‌ ಸೇರಿದಂತೆ ಷೇರುದಾರ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next