Advertisement
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಜನತಾ ಬಜಾರ್‌ನಲ್ಲಿ ಗುಣಮಟ್ಟದ ಉತ್ಪನ್ನ ಸಿಗಲಿದೆ. ಅದರ ಸದ್ಭಳಕೆಯನ್ನು ಗ್ರಾಹಕರು ಮಾಡಿಕೊಳ್ಳುವಂತಾಗಬೇಕು. ವಾರ್ಷಿಕ ಮಹಾಸಭೆಗಳು ಲಾಭ-ನಷ್ಟಗಳ ಬಗ್ಗೆ ಸಭೆಯಾಗಬಾರದು. ರೈತರಿಗೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಬಗ್ಗೆ ಚರ್ಚೆ ಆಗಬೇಕು ಎಂದರು.
Related Articles
Advertisement
ಸಂಘಗಳಿಂದ ಉತ್ತಮ ಸೌಲಭ್ಯ: ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಮುನೇಗೌಡ ಮಾತನಾಡಿ, ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನ ಪ್ರತಿ ರೈತರಿಗೂ ಸಹಕಾರ ಸಂಘಗಳಿಂದ ಉತ್ತಮ ಸೌಲಭ್ಯ ಸಿಗುತ್ತಿದೆ. ಸಹಕಾರ ತತ್ವದ ಅಡಿಯಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಿ. ಪಟಾಲಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ. ಮಂಜುನಾಥ್, ಹಾಪ್ಕಾಮ್ಸ… ನಿರ್ದೇಶಕ ಶ್ರೀನಿವಾಸ್, ಪುರಸಭಾ ಅಧ್ಯಕ್ಷೆ ಗೋಪಮ್ಮ, ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಸಿ.ಮುನಿರಾಜು, ತಾಲೂಕು ಸೊಸೈಟಿ ಉಪಾಧ್ಯಕ್ಷ ಈರಪ್ಪ, ಜಿ.ಎ.ರವೀಂದ್ರ, ಗಂಗಾಧರ್, ಚನ್ನಕೃಷ್ಣಪ್ಪ, ಕೆ.ರಮೇಶ್, ರಾಮಮೂರ್ತಿ, ಸಿ.ಮುನಿರಾಜು, ಯರ್ತಿಗಾನಹಳ್ಳಿ ಶಿವಣ್ಣ, ಮುನಿರಾಜು, ಆರ್. ಚಂದ್ರಶೇಖರ್, ಕೆ.ಮಂಜುನಾಥ್, ಬಿ.ಸಿ.ಭಾಗ್ಯಮ್ಮ, ಕಾಂತಮ್ಮ, ಎನ್. ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಚಂದ್ರೇಗೌಡ,ಚಿಕ್ಕನಾರಾಯಣಸ್ವಾಮಿ, ವೀರಪ್ಪ, ಮುನಿರಾಜು, ಮೀನಾಕ್ಷಿ ಹಾಗೂ ಮುಖಂಡರು ಇದ್ದರು. ಸಂಘದ ಅಭಿವೃದ್ಧಿಗೆ ಒತ್ತು ನೀಡಿ: ನಾರಾಯಣಸ್ವಾಮಿ
2.40 ಲಕ್ಷ ಜನಸಂಖ್ಯೆ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿ ಸಹಕಾರ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ಸರ್ವ ಸದಸ್ಯರು, ಆಡಳಿತ ಮಂಡಳಿ ಒಮ್ಮತದಿಂದ ಸಂಘದ ಏಳಿಗೆಗೆ ಶ್ರಮಿಸಬೇಕು. ಹಲವಾರು ಅಧ್ಯಕ್ಷರು ಈ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗಾಗಲೇ ಹೊಸಕೋಟೆಯಲ್ಲಿನ ಸಹಕಾರ ಸಂಘ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಹ ಸಂಘವು ಹೆಚ್ಚು ಅಭಿವೃದ್ಧಿಗೊಳ್ಳಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು. ಸಂಘಕ್ಕೆ 38.80 ಲಕ್ಷ ರೂ. ನಿವ್ವಳ ಲಾಭ: ದೇವರಾಜ್
ಸಹಕಾರ ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಂಘವು 2021-22ನೇ ಸಾಲಿಗೆ 38.80 ಲಕ್ಷ ರೂ.ಗಳ ನಿವ್ವಳ ಲಾಭದಲ್ಲಿದೆ. ಸಹಕಾರ ಸಂಘದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ. ರೈತರಿಗೆ ಅನುಕೂಲ ಆಗಲು ಸಾಕಷ್ಟು ಯೋಜನೆ ಕಲ್ಪಿಸಿ ಕೊಡಲಾಗಿದೆ. ರೈತರಿಗೆ ಕ್ರಿಮಿನಾಶಕ, ಇತರೆ ವ್ಯಾಪಾರ ವಹಿವಾಟು ಮಾಡಲಾಗುವುದು ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ದೇವರಾಜ್ ಹೇಳಿದರು.