ಮಾಗಡಿ: ಸಹಕಾರ ಸಂಘಗಳು ರೈತರ ಏಳಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಬಿಸ್ಕೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಧನ್ಯಕುಮಾರ್ ತಿಳಿಸಿದರು.
ತಾಲೂಕಿನ ಬಿಸ್ಕೂರು ವಿಎಸ್‌ಎಸ್‌ಎನ್ ನಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಗ್ರಾಮೀಣ ಭಾಗದ ರೈತರ ಆರ್ಥಿಕವಾಗಿ ಸಬಲೀಕರಣಕ್ಕೆ ನಿರಂತರವಾಗಿ ಸೇವೆಯಲ್ಲಿ ಸಂಘ ಮಾದರಿಯಾಗಿದೆ.
ಇದಕ್ಕೆ ಸರ್ವ ಸದಸ್ಯರು ಸಹ ಸಹಕಾರ ಪ್ರೋತ್ಸಾಹ ನೀಡುತ್ತಿರುವುದರಿಂದ ಸಂಘವು ಉತ್ತಮವಾಗಿ ಆಡಳಿತ ನಡೆಸುತ್ತಿದೆ ಎಂದರು. ಸದಸ್ಯರ ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರು ಲೆಕ್ಕಪತ್ರಗಳನ್ನು ಓದಿ ಹೇಳಲಾಗು ತ್ತದೆ. ಈ ವೇಳೆ ಸಮಸ್ಯೆ, ಲೋಪದೋಷಗಳು ಕಂಡುಬಂದರೆ ಸದಸ್ಯರು ಅದರ ಬಗ್ಗೆ ಅರಿತು, ಸಮಸ್ಯೆ ತಮ್ಮಲ್ಲಿರುವ ಅನುಮಾನ ಬಗೆಹರಿಸಿ ಕೊಳ್ಳಬೇಕಿದೆ. ಸಂಘದ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯದರ್ಶಿ ಎಸ್.ಗಂಗಣ್ಣ ಮಾತನಾಡಿ, ಸಂಘದ ವ್ಯಾಪ್ತಿಗೆ 10 ಗ್ರಾಮ ಸೇರುತ್ತದೆ. ಒಟ್ಟು 1,190 ಸದಸ್ಯರಿದ್ದಾರೆ. 40 ಲಕ್ಷ ರೂ. ಷೇರು ಬಂಡವಾಳ, ಸರ್ಕಾರದ ಷೇರು 82 ಸಾವಿರ ರೂ. ಕೆಸಿಸಿ ಸಾಲವಾಗಿ 499 ಮಂದಿಗೆ 3.58 ಕೋಟಿ ರೂ. ನೀಡಲಾಗಿದೆ. ಕೃಷಿ ಯೇತರ ಸಾಲವಾಗಿ 16 ಮಂದಿಗೆ 8 ಲಕ್ಷ, ಚಿನ್ನಾಭರಣ ಸಾಲವನ್ನಾಗಿ 4 ಲಕ್ಷ, ಅಂಗಡಿ ಸಾಲವನ್ನಾಗಿ 8 ನೀಡಲಾಗಿದೆ ಎಂದರು.
ಕೃಷಿ ಸಲಕರಣೆ ಮಾರಾಟ: ವ್ಯಾಪಾರ ಲಾಭವಾಗಿ 2.92 ಲಕ್ಷ ರೂ. ಲಾಭದಲ್ಲಿದೆ. ಕಳೆದ 30 ವರ್ಷಗಳಿಂದ ನಷ್ಟದಲ್ಲಿದ್ದ ಸಂಘವು ಇತ್ತೀಚಿನ ವರ್ಷದಲ್ಲಿ ಲಾಭಾಂಶದಲ್ಲಿ ನಡೆಯುತ್ತಿದ್ದು, ಇದಕ್ಕೆಲ್ಲ ಸಂಘದ ಸದಸ್ಯರ ಸಹ ಕಾರವೇ ಪ್ರಗತಿ ಸಾಧಿಸುತ್ತಿದೆ. ರಸಗೊಬ್ಬರ, ಪಡಿತರ ಆಹಾರ, ಕೃಷಿ ಸಲಕರಣೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಶು ಆಹಾರ ಮಾರಾಟ ಮಾಡಲು ಆಡಳಿತ ಮಂಡಲಿ ಚಿಂತಿಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಜಯಲಕ್ಷಮ್ಮ, ನಿರ್ದೇಶಕ ಡಿ.ಜಿ. ವೆಂಕಟೇಶ್, ಗೋವಿಂದಯ್ಯ, ಡಿ. ಸುರೇಶ್, ಬಿ.ಟಿ. ವೆಂಕಟೇಶ್, ಬಿ.ಕೆಂಪಯ್ಯ, ಸಂಜೀವಯ್ಯ, ಆರ್.ನಾರಾಯಣ, ರಂಗ ಸ್ವಾಮಯ್ಯ, ನರಸಿಂಹಮೂರ್ತಿ, ಬಸವ ರಾಜು, ಟಿ.ಎಸ್.ರಮ್ಯಾ, ಮುನಿರಾಜಮ್ಮ, ಭಾಗ್ಯಮ್ಮ, ಮುಖಂಡ ಕುಮಾರ್, ಬಿ.ಎಸ್. ಸುಹೇಲ್ ಹಾಗೂ ಇತರರು ಇದ್ದರು.