Advertisement
ನ್ಯಾಯಾಲಯಗಳ ಸಂಕೀರ್ಣದ ಆವರಣದ ವಕೀಲರ ಸಂಘದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿದ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ 21 ಕೋರ್ಟ್‌ಗಳಿವೆ. ಸಂಘದಲ್ಲಿ ಸುಮಾರು 2 ಸಾವಿರ ವಕೀಲರಿದ್ದಾರೆ. ಕೋರ್ಟ್ ಸಂಕೀರ್ಣದ ಕಟ್ಟಡವನ್ನು 142 ಕೋಟಿ ರೂ. ವೆಚ್ಚದಲ್ಲಿ ಅತ್ಯುತ್ತಮವಾಗಿ ನಿರ್ಮಿಸಿದ್ದಾರೆನೋ ಸರಿ. ಆದರೆ ವಕೀಲರ ಸಂಘದಿಂದ ನ್ಯಾಯಾಲಯ ಸಂಕೀರ್ಣಕ್ಕೆ ಹೋಗಲು ತುಂಬಾ ಸಮಯವಾಗುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಕೋರ್ಟ್‌ಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ. ಇವೆರಡು ಕಟ್ಟಡ ಸಂಪರ್ಕಿಸಲು ಪಾದಚಾರಿ ಸೇತುವೆ, ಇಲೆಕ್ಟ್ರಾನಿಕ್ ಎಸ್ಕಿಲೇಟರ್ ಅವಶ್ಯವಿದೆ. ಲಿಫ್ಟ್ ನಿರುಪಯುಕ್ತವಾಗಿದ್ದು, ಅದು ಯಾವಾಗ ಕೈಕೊಡುತ್ತದೋ ಗೊತ್ತಿಲ್ಲ. ಈ ಬಗ್ಗೆ ಪಿಐಎಲ್ ಹಾಕಲು ಯೋಚಿಸಲಾಗಿತ್ತು ಎಂದು ಹೇಳಿದರು.
ನ್ಯಾಯಾಧೀಶರಾದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯದ ಎಸ್.ಬಿ. ಹಂದ್ರಾಳ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಇಂದಿರಾ ಮೇಲಸ್ವಾಮಿ ಚೆಟ್ಟಿಯಾರ, ಕಾರ್ಮಿಕ ನ್ಯಾಯಾಲಯದ ಮಾರುತಿ ಬಾಗಡೆ, ಇಂಡಸ್ಟ್ರಿಯಲ್ ಟ್ರಿಬ್ಯುನಲ್ ನ್ಯಾಯಾಲಯದ ಜಿ.ಎ. ಮೂಲಿಮನಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯದ ಆರ್. ಎಸ್. ಚಿನ್ನಣ್ಣವರ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ರಾಘವೇಂದ್ರ ಆರ್., 2ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಗಣಪತಿ ಪ್ರಶಾಂತ ಎಂ., 3ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಪ್ರೀತಿ ಕೆ., ಪ್ರಧಾನ ದಿವಾಣಿ ನ್ಯಾಯಾಲಯದ ರಾಜಶೇಖರ ತಿಳಿಗಂಜಿ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ನಾಗೇಶ ನಾಯ್ಕ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಮೊದಲಾದವರಿದ್ದರು.
ಭಾಗ್ಯಶ್ರೀ ಅರಬಟ್ಟಿ ಪ್ರಾರ್ಥಿಸಿದರು. ಎಸ್.ಜಿ. ಅರಗಂಜಿ ಸ್ವಾಗತಿಸಿದರು. ಲೋಕೇಶ ಕೆ.ಎಂ. ನಿರೂಪಿಸಿದರು. ಜಿ.ಎಫ್. ಹಿರೇಗೌಡ್ರ ವಂದಿಸಿದರು.
ಪ್ರಕರಣಗಳ ತ್ವರಿತ ವಿಲೇವಾರಿಗೆ ಕಾನೂನು ಪ್ರಕಾರವಾಗಿ ವಕೀಲರಿಗೆ ಯಾವೆಲ್ಲ ಪರಸ್ಪರ ಸಹಕಾರಬೇಕೋ ಅದನ್ನು ನೀಡಲು ನ್ಯಾಯಾಧೀಶರು ಸಿದ್ಧ. ಅದೇರೀತಿ ವಕೀಲರು ಸಹಿತ ಹಳೆಯ ಪ್ರಕರಣಗಳ ವಿಲೇವಾರಿ, ಲೋಕ ಅದಾಲತ್, ಕಾನೂನಾತ್ಮಕ ಕಾರ್ಯಕ್ರಮಗಳ ವಿಷಯದಲ್ಲಾಗಲಿ ನ್ಯಾಯಾಧೀಶರೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು. –ಪರಮೇಶ್ವರ ಪ್ರಸನ್ನ ಬಿ., 1ನೇಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ