Advertisement

ಸಿಪಿಐ ರಮೇಶ ಹಾನಾಪುರಗೆ ಮುಖ್ಯಮಂತ್ರಿ ಚಿನ್ನದ ಪದಕ

06:09 PM Apr 29, 2022 | Team Udayavani |

ಬಾದಾಮಿ: ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದನ್ನು ಗುರುತಿಸಿ ಸರಕಾರ ಸಿಪಿಐ ರಮೇಶ ಹಾನಾಪುರ ಅವರಿಗೆ ಸಿಎಂ ಚಿನ್ನದ ಪದಕ ನೀಡಿರುವುದು ಶ್ಲಾಘನೀಯ ಎಂದು ತಹಶೀಲ್ದಾರ್‌ ಜೆ.ಬಿ. ಮಜ್ಜಗಿ ಹೇಳಿದರು.

Advertisement

ಪಟ್ಟಣದ ಪೊಲೀಸ್‌ ವಸತಿಗೃಹಗಳ ಆವರಣದಲ್ಲಿ ಬಾದಾಮಿ ಪೊಲೀಸ್‌ ಠಾಣಾ ಮತ್ತು ಸಿಬ್ಬಂದಿ ವತಿಯಿಂದ ಸಿಎಂ ಚಿನ್ನದ ಪದಕ ಪಡೆದ ಸಿಪಿಐ ರಮೇಶ ಹಾನಾಪೂರ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಮತ್ತು ಪೊಲೀಸ್‌ ಇಲಾಖೆಗಳು ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಅಭಿನಾಭಾವ ಸಂಬಂಧ ಇವೆ ಎಂದರು.

ಸಿಎಂ ಚಿನ್ನದ ಪದಕ ವಿಜೇತ ಬಾದಾಮಿ ಸಿಪಿಐ ರಮೇಶ ಹಾನಾಪುರ, ಬಾಗಲಕೋಟೆ ಸಿಪಿಐ ಪ್ರಭುಗೌಡ ಹಿರೇಹಳ್ಳಿ, ಡಿವೈಎಸ್‌ಪಿ ವಿಜಯ ಗುರಗುಂಡಿ ಮಾತನಾಡಿದರು. ಗದಗ ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಪ್ರಕಾಶ ಪೂಜಾರ, ಗುಳೇದಗುಡ್ಡ ಪಿಎಸ್‌ ಐ.ಎಂ.ದುಡಸಿ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಮಹಿಳಾ ಪಿಎಸ್‌ಐ ಎಂ.ಎಸ್‌.ಘಂಟಿ, ಬೆಟಗೇರಿ ಪಿಎಸ್‌ಐ ಪ್ರಕಾಶ ಬಣಕಾರ, ತಾಲೂಕು ಆರೋಗ್ಯ ಆಧಿಕಾರಿ ಡಾ| ಎಂ.ಬಿ.ಪಾಟೀಲ, ಸುಹಾಸ
ಇಂಗಳೆ, ಜಮಖಂಡಿ ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ, ಅಬಕಾರಿ ಸಹಾಯಕ ನಿರೀಕ್ಷಕ ಮಂಜುನಾಥ ಸಿಕ್ಕಲಗಾರ, ಕಾನಿಪ ಅಧ್ಯಕ್ಷ ಉಮೇಶ ಭಿಕ್ಷಾವತಿಮಠ, ನಗರ ಯೋಜನಾ ಪ್ರಾ ಧಿಕಾರದ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ ಹಾಜರಿದ್ದರು.

ಅಧ್ಯಕ್ಷತೆ ವಹಿಸಿದ್ದ ಪಿಎಸ್‌ಐ ನೇತ್ರಾವತಿ ಪಾಟೀಲ ಮಾತನಾಡಿದರು. ನಂತರ ತಾಲೂಕಾಡಳಿತ, ಪೊಲೀಸ್‌ ಸಿಬ್ಬಂದಿ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ಥಳೀಯರು ಸಿಎಂ ಚಿನ್ನದ ಪದಕ ವಿಜೇತ ಮತ್ತು ವರ್ಗಾವಣೆಯಾಗಿರುವ ಸಿಪಿಐ ರಮೇಶ ಹಾನಾಪುರ ಅವರನ್ನು ಸನ್ಮಾನಿಸಿದರು. ಸದಾಶಿವ ಮರಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next