ಗೋರಖ್‌ಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿರತೆ ಮರಿಗೆ ಹಾಲುಣಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಶಹೀದ್ ಅಶ್ಫಾಕುಲಾ ಖಾನ್ ಝೂಲಾಜಿಕಲ್ ಪಾರ್ಕ್ ಮತ್ತು ಪಶುವೈದ್ಯ ಆಸ್ಪತ್ರೆ, ಗೋರಖ್‌ಪುರದಲ್ಲಿ ನಡೆದ ವನ್ಯಜೀವಿ ಆಚರಣೆ ಕಾರ್ಯಕ್ರಮದ್ದಾಗಿದೆ.
ಸಿಎಂ ಯೋಗಿ ಅವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಈ ಹಿಂದೆಯೂ ಸಿಎಂ ಯೋಗಿ ಗೋವುಗಳನ್ನು ಮುದ್ದಿಸುತ್ತಿರುವ ಹಲವು ವಿಡಿಯೋಗಳು ಬಂದಿದ್ದವು.
ಸಿಎಂ ಯೋಗಿ ಅವರು ಗೋವುಗಳ ಮತ್ತು ಕರುಗಳ ವಿಶೇಷ ಕಾಳಜಿ ಹೊಂದಿದ್ದು ಅವುಗಳಿಗೆ ಮೇವು ನೀಡುವ, ಆಹಾರ ನೀಡುವ ವಿಡಿಯೋಗಳು ಬಂದಿದ್ದವು. ಈಗ ವೈದ್ಯಾಧಿಕಾರಿಗಳ ಸಮ್ಮುಖ ಚಿರತೆಯ ಮರಿಯನ್ನು ತಾವೇ ಖುದ್ದು ಕೈಯಲ್ಲಿ ಯಾವುದೇ ಅಂಜಿಕೆಯಿಲ್ಲದೆ ಹಿಡಿದು ಹಾಲು ಕುಡಿಸಿದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.