Advertisement
ಬಿಜೆಪಿಯಿಂದ ರವಿವಾರ ಹಮ್ಮಿಕೊಂಡಿದ್ದ “ಕರ್ನಾಟಕ ಜನಸಂವಾದ’ ವರ್ಚುವಲ್ ರ್ಯಾಲಿಯಲ್ಲಿ ಪಾಲ್ಗೊಂಡು ದಿಲ್ಲಿಯಿಂದಲೇ ಮಾತನಾಡಿದ ಅವರು, ಕೋವಿಡ್-19 ಪರಿಸ್ಥಿತಿಯನ್ನು ದೇಶ ಮತ್ತು ಕರ್ನಾಟಕ ಸಮರ್ಥವಾಗಿ ಎದುರಿಸಿದೆ ಎಂದರಲ್ಲ, ಪಕ್ಷದ ಕಾರ್ಯಕರ್ತರ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾ ಸಿದರು.
Related Articles
Advertisement
ಆತ್ಮ ನಿರ್ಭರ ಭಾರತ ಸವಾಲಿನ ಸಾಧನೆಕೋವಿಡ್-19 ಪರಿಸ್ಥಿತಿಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾತ್ರವಲ್ಲದೆ ವಿವಿಧ ದೇಶಗಳು ಭಾರತದ ಸಾಧನೆಯನ್ನು ಮೆಚ್ಚಿಕೊಂಡಿವೆ. ಆತ್ಮನಿರ್ಭರ ಭಾರತ ಪ್ಯಾಕೇಜ್ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ದಾರಿಯಾಗಲಿದೆ. ಕೋವಿಡ್-19 ಸವಾಲು ನಮ್ಮ ಸಾಧನೆಯ ಹಾದಿಯಾಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ 6 ವರ್ಷದ ಸಾಧನೆಗಳು ಅದಕ್ಕೆ ಹಿಂದಿನ 60 ವರ್ಷದ ಸಾಧನೆಗಳಿಗೆ ಸಮ. ಕೋವಿಡ್-19 ವೇಳೆ ಪ್ರಧಾನಿ ದೃಢ ತೀರ್ಮಾನ ಮತ್ತು ಸಕಾಲದಲ್ಲಿ ಲಾಕ್‌ಡೌನ್ ಘೋಷಿಸಿ ಕೋವಿಡ್-19 ನಿಯಂತ್ರಣದಲ್ಲಿದೆ ಎಂದರು. ದಿನಕ್ಕೆ 6 ಲಕ್ಷ ಪಿಪಿಇ ಕಿಟ್
ಭಾರತದಲ್ಲಿ ಪ್ರತಿ ದಿನ ಆರು ಲಕ್ಷ ಪಿಪಿಇ ಕಿಟ್ ತಯಾರಾಗುತ್ತಿದೆ. ಕೋವಿಡ್-19 ಆರಂಭದ ವೇಳೆ ದೇಶದಲ್ಲಿ ಒಂದೇ ಒಂದು ಕಿಟ್ ಉತ್ಪಾದನೆಯಾಗುತ್ತಿರಲಿಲ್ಲ. ಈಗ ಜಗತ್ತಿನ ಮುಂದೆ ಭಾರತದ ಶಕ್ತಿ ಅನಾವರಣಗೊಂಡಿದೆ. ಕೋವಿಡ್-19 ಕಾಣಿಸಿಕೊಂಡ ಆರಂಭದಲ್ಲಿ 3 ದಿನಗಳಲ್ಲಿ ಸೋಂಕು ದ್ವಿಗುಣಗೊಳ್ಳುತ್ತಿತ್ತು. ಈಗ 14 ದಿನಕ್ಕೆ ದ್ವಿಗುಣವಾಗುತ್ತಿದೆ. ದೇಶಾದ್ಯಂತ 1,000 ಕೋವಿಡ್ ಆಸ್ಪತ್ರೆಗಳು ಸೇವೆ ಸಲ್ಲಿಸು ತ್ತಿವೆ. ಟೆಸ್ಟಿಂಗ್ ಸಂಖ್ಯೆ 1,500ರಿಂದ 1.50 ಲಕ್ಷಕ್ಕೆ ಏರಿದೆ. 20 ಸಾವಿರ ಐಸೊ ಲೇಷನ್ ಬೆಡ್‌ಗಳಿವೆ ಎಂದರು. ಕಾಂಗ್ರೆಸ್ ವಿರುದ್ಧ ವಾಗ್ಧಾಳಿ
ದೇಶ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾಗ ಕಾಂಗ್ರೆಸ್ ರಾಜಕಾರಣ ಮಾಡುತ್ತಿತ್ತು. ದೇಶದಲ್ಲಿ ಸಂಕಷ್ಟ ಇದ್ದಾಗ ಸರಕಾರದ ಜತೆ ವಿಪಕ್ಷಗಳು ಕೈಜೋಡಿಸಬೇಕು. ವಿಪಕ್ಷ ಹೇಗಿರಬೇಕು ಎಂಬುದು ಗೊತ್ತಿಲ್ಲದಿದ್ದರೆ ನಮ್ಮ ಬಳಿಗೆ ಬನ್ನಿ, ಪಾಠ ಹೇಳುತ್ತೇವೆ ಎಂದು ನಡ್ಡಾ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ಗೆ ದೇಶದ ಹಿತಕ್ಕಿಂತ ರಾಜಕೀಯವೇ ದೊಡ್ಡದಾಗಿದೆ. ಅಸಹಿಷ್ಣುತೆ ದೇಶದ ಡಿಎನ್‌ಎ ಆಗಿದೆ ಎಂದು ಈಗ ಹೇಳುವಿರಾದರೆ ನಿಮಗೆ ಅದರ ಚಿಂತೆ ಬೇಡ. ಕಾಂಗ್ರೆಸ್ ಡಿಎನ್‌ಎ ಬದಲಾಯಿಸುವ ಬಗ್ಗೆ ಚಿಂತಿಸಿ ಎಂದು ಜೆ.ಪಿ. ನಡ್ಡಾ ಅವರು ರಾಹುಲ್ ಗಾಂಧಿಯವರಿಗೆ ಟಾಂಗ್ ನೀಡಿದರು. ಮೋದಿ ಸರಕಾರದ ಗಟ್ಟಿ ನಿರ್ಧಾರ
ಕಾಶ್ಮೀರವನ್ನು ಭಾರತದೊಳಗೆ ವಿಲೀನಗೊಳಿಸಿ, 370ನೇ ವಿಧಿಯಿಂದ ಕಾಶ್ಮೀರಕ್ಕೆ ಮುಕ್ತಿ ನೀಡಲಾಗಿದೆ. ಸಿಎಎ ಕಾಯ್ದೆಯನ್ನೂ ಸರಕಾರ ತರುತ್ತಿದೆ. ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ರಾಮಮಂದಿರ ನಿರ್ಮಾಣವನ್ನು ಮೋದಿ ಸರಕಾರ ಸಾಕಾರ ಮಾಡಿದೆ. ಸದ್ಯದಲ್ಲೇ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ಜನ್‌ಧನ್, ಉಜಾಲ, ಉಜ್ವಲಾ ಯೋಜನೆಗಳ ಮೂಲಕ ಮೋದಿ ಸರಕಾರ ದೇಶದ ಜನಮಾನಸವನ್ನು ತಲುಪಿದೆ ಎಂದು ಜೆ.ಪಿ. ನಡ್ಡಾ ಪ್ರತಿಪಾದಿಸಿದರು. ಕೋವಿಡ್-19 ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಸೇವೆಯೇ ನಮ್ಮ ಮೂಲ ಮಂತ್ರವಾಗಿರಬೇಕು. ಪಕ್ಷಕ್ಕಿಂತ ದೇಶ ಮೊದಲು. ದೇಶದ ಜತೆಗೆ ಸೇವೆಯ ಮೂಲಕ ಸದಾ ಸ್ಪಂದಿಸುತ್ತಿರಬೇಕು. ಇದಕ್ಕಾಗಿ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ, ಸೌಲಭ್ಯ ಮನೆ ಮನೆಗೆ ತಲುಪಿಸಬೇಕು.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕ್ರಾಂತಿಕಾರಿ ಪರಿವರ್ತನೆ
ಹೊಸದಿಲ್ಲಿ: ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಸಹಿತ ಹಲವಾರು ಕ್ರಾಂತಿ ಕಾರಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಜನ ಸಂವಾದ ವರ್ಚುವಲ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಶ್ರೀಕಾರ ಹಾಕಲಾಗಿದೆ ಎಂದಿದ್ದಾರೆ. ಭಾರತ ಈಗ ಬಲಹೀನ ರಾಷ್ಟ್ರವಲ್ಲ. ಅದರ ಸೇನಾ ಶಕ್ತಿ ಈಗ ಅಗಾಧವಾಗಿ ಹೆಚ್ಚಾಗಿದೆ. ಅದನ್ನು ಭಾರತ ತನ್ನ ರಕ್ಷಣೆಗಾಗಿ ಬಳಸುತ್ತದೆಯೇ ವಿನಾ ಇತರ ರಾಷ್ಟ್ರಗಳನ್ನು ಕೆಣಕಲು ಎಂದೂ ಉಪಯೋಗಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.