Advertisement
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಮಂಗಳೂರು ನಗರಾಭಿವೃದ್ಧಿ ಸಚಿವ ಸುರೇಶ್ ಬಲ್ಲಾಳ್, ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮೇಯರ್ ಕವಿತಾ ಸನಿಲ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶ್ರೀಕಾಂತ್ ರಾವ್ ಕೆ., ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಹರ್ ಪಿ. ಕಳಸ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯ್ಕ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಶೋಭಾ, ಸದಸ್ಯ ಕೇಶವ ಸನಿಲ್, ವಸಂತ ಬೆರ್ನಾಡ್, ಮುರಳಿ ಮೋಹನ್ ಸಾಲಿಯಾನ್, ರಾಧಾಕೃಷ್ಣ ಉಪಸ್ಥಿತರಿದ್ದರು.
ಕದ್ರಿ ಪಾರ್ಕ್‌ನಲ್ಲಿ ಕಳೆದ 5 ವರ್ಷಗಳಿಂದ ಓಡಾಟ ನಿಲ್ಲಿಸಿದ್ದ “ಬಾಲ ಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಉದ್ಘಾಟನೆ ಗೊಂಡರೂ, ರೈಲಿನಲ್ಲಿ ಮಕ್ಕಳು ಓಡಾಡಲು ಕೆಲ ಸಮಯಗಳ ಕಾಲ ಕಾಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹೊಸ ರೈಲಿಗೆ ಇತರ ಭಾಗಗಳ ಜೋಡಣೆಯೊಂದಿಗೆ ರೈಲ್ವೇ ಇಲಾಖೆಯಿಂದ ಟ್ರಾÂಕ್ ಪರಿಶೀಲನೆ ಕಾರ್ಯ ನಡೆಸಬೇಕಿದೆ. ಇದಾದ ಬಳಿಕವಷ್ಟೇ ರೈಲು ಓಡಾಟ ಆರಂಭವಾಗುತ್ತದೆ. 5 ವರ್ಷಗಳ ಅನಂತರ ಚಾಲನೆ
ಕಳೆದ ಐದು ವರ್ಷಗಳಿಂದ “ಬಾಲಮಂಗಳ ಎಕ್ಸ್ ಪ್ರಸ್’ ಪುಟಾಣಿ ರೈಲು ಚಾಲನೆ ಮಾಡುತ್ತಿರಲಿಲ್ಲ. ಕದ್ರಿ ಪಾರ್ಕ್‌ನಲ್ಲಿ 1983ರಿಂದ ತನ್ನ ಓಡಾಟ ಆರಂಭಿಸಿದ್ದ ರೈಲು 2012ರವರೆಗೆ ನಿರಂತರವಾಗಿ ಮಕ್ಕಳ ಮನೋರಂಜನೆಯ ಭಾಗವಾಗಿತ್ತು. ಆದರೆ ಈ ರೈಲು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಓಡಾಟ ನಡೆಸುತ್ತಿದ್ದದರಿಂದ ತೀರಾ ಹಳೆಯದಾಗಿತ್ತು. ಈ ಹಿನ್ನೆಲೆಯಲ್ಲಿ ಕದ್ರಿಪಾರ್ಕ್‌ನಲ್ಲಿ ಹೊಸ ರೈಲು ತರುವ ಉದ್ದೇಶದಿಂದ 2013ರಲ್ಲಿ ಪುಟಾಣಿ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು.