ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಜಾಗೃತಿ ಬಗ್ಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆ ಮುನಿರಾಬಾದ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಹರಿಡಿರುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಎಂ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಎಲ್ಲರೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಆರೋಗ್ಯ ಇಲಾಖೆ, ವೈದ್ಯರ ಸಲಹೆ ಪಡೆದು ವಾರದಲ್ಲಿ ಹತೋಟಿಗೆ ತರಬೇಕಿದೆ ಎಂದರು.
ನಾನು ಸಚಿವನಾದಾಗಿನಿಂದ ರಾಜ್ಯದ ನೀರಾವರಿ ಸಮಸ್ಯೆ ಪರಿಶೀಲಿಸುತ್ತಿದ್ದೇನೆ. ಈ ಭಾಗದ ಸಮನಾಂತರ ಜಲಾಶಯ ನಿರ್ಮಾಣ ಬಗ್ಗೆ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ನವಲಿ ಡ್ಯಾಂ ನಿರ್ಮಾಣದ ಡಿಪಿಆರ್ ಗೆ 20 ಕೋಟಿ ನೀಡಲಾಗಿದೆ. ತುಂಗಭದ್ರಾ ಡ್ಯಾಂನ 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಆಗಿದೆ. ಇದು ಹೊರ ಹೋಗದಂತೆ ತಡೆಯಲು ಸಮನಾಂತರ ಡ್ಯಾಂ ಅನಿವಾರ್ಯವಾಗಿದೆ ಎಂದರು.
ಇನ್ನೂ ನಮ್ಮದು ಬಿಜೆಪಿ. ಕಾಂಗ್ರೆಸ್ ಮುಗಿದುಹೋದ ಅಧ್ಯಯನ. ಸತೀಶ್ ಜಾರಕಿಹೊಳಿ ತಲೆ ಸರಿಯಿಲ್ಲ ಹಾಗಾಗಿ ನನ್ನ ಬಗ್ಗೆ ಏನೆನೋ ಹೇಳ್ತಾರೆ. ನಮ್ಮ ಸಹೋದರರ ಬಗ್ಗೆ ಯಾಕೆ ಗೊಂದಲ ಸೃಷ್ಟಿ ಮಾಡ್ತೀರಿ? ಎಂದ ರಮೇಶ್ ಅವರು ಅಭಿವೃದ್ಧಿ ಬಗ್ಗೆ ಮಾತನಾಡೋಣ ಎಂದರು.
ರಾಜಕೀಯ ಬಗ್ಗೆ ಮಾತನಾಡೋದಾದ್ರೆ ಹೊರಗಡೆ ಮಾತನಾಡೋಣ. ಇಡೀ ರಾಜ್ಯದ ರೈತರು ನಮ್ಮವರು ಎಲ್ಲರಿಗೂ ನ್ಯಾಯ ಕೊಡಿಸುವಂತಹ ಕೆಲಸ ಮಾಡೋಣ. ನಾನು ಮಂತ್ರಿ ಆದ ಕೂಡಲೇ ರಿಸಲ್ಟ್ ನೋಡಿದ್ದೀರಿ, ಮುಂದೆ ಕಾದು ನೋಡಿ ಎಲ್ಲಾ ನೀರಾವರಿ ಯೋಜನೆಗಳಿಗೆ ಪರಿಹಾರ ಸಿಗಲಿದೆ ಎಂದರು.