Advertisement
ವನಮಹೋತ್ಸವ -2017 ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಮಾತ್ರ ಇದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ.ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿಗಳು ಮತ್ತು ಸಚಿವ ರೈ ಕೆಂಡಾಮಂಡಲವಾಗಿದ್ದಾರೆ.
Related Articles
Advertisement
ವನಮಹೋತ್ಸವ ಕಾರ್ಯಕ್ರಮಕ್ಕಾಗಿ ಮರವೊಂದನ್ನು ಕಡಿದು ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಶಾಂತಿ ಕಾಪಾಡಿ
ಸಮಾರಂಭದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕೋಮು ಸಂಘರ್ಷ ಆಗಬಾರದು.ಯಾರೇ ಆಗಲಿ ಪ್ರಚೋದನ ಕಾರಿ ಆಗಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಜಿಲ್ಲೆಯ ಎಲ್ಲರಿಗೂ ಮನವಿ ಮಾಡುವುದೆಂದರೆ ಶಾಂತಿ ಕಾಪಾಡಿ. ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ . ಕರಾವಳಿಯಲ್ಲಿ ನೂರಾರು ವರ್ಷಗಳಿಂದ ಸರ್ವ ಧರ್ಮ ಸಮನ್ವಯಗಳಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂದರು.
ಇದೇ ವೇಳೆ ಕರಾವಳಿಯಲ್ಲಿ ಕ್ರೈಸ್ತ ಮೆಷಿನರಿಗಳಿಲ್ಲವೆ, ಅವರು ಬಂದು ಎಷ್ಟು ವರ್ಷವಾಯಿತು ಹೇಳಿ ಎಂದು ಪ್ರಶ್ನಿಸಿದರು.