Advertisement

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್

02:12 PM Sep 22, 2024 | Team Udayavani |

ಕೊಪ್ಪಳ: ರಾಜ್ಯಪಾಲರು ಅರ್ಕಾವತಿ ವರದಿ ಕೇಳಿದ ವಿಚಾರಕ್ಕೆ ಸಂಬಂಧಿಸಿ ಬರೆದಿರುವ ಪತ್ರವನ್ನು ನಾನಿನ್ನು ಗಮನಿಸಿಲ್ಲ. ಅರ್ಕಾವತಿ ಬಡಾವಣೆ ಬಗ್ಗೆ ವರದಿ ಕೇಳಿರುವ ವಿಚಾರ ಪತ್ರಿಕೆಯಲ್ಲಿ ಓದಿರುವೆ. ಆರ್ಕಾವತಿ ಬಡಾವಣೆ ವಿಚಾರದಲ್ಲಿ ರಿಡೂ ಅಂತ ಹೇಳಿದ್ದು ನಾನಲ್ಲ, ಸುಪ್ರೀಂ ಕೋರ್ಟ್ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ

Advertisement

ಕೊಪ್ಪಳ ತಾಲೂಕಿನ ಗಿಣಗೇರಾ ವಿಮಾನ ನಿಲ್ದಾಣ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಪಾಲರ ಕಚೇರಿಯಿಂದಲೇ ಪತ್ರಗಳ ಸೊರಿಕೆಯಾಗಿರಬಹುದು. ಪತ್ರಗಳು ಸೋರಿಕೆಯಾಗಿದ್ದರೇ ತನಿಖೆಯಾಗಲಿ ಎಂದರು.

ಶಾಸಕ ಮುನಿರತ್ನ ವಿರುದ್ಧ ಎಸ್ ಐಟಿ ತನಿಖೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮುನಿರತ್ನನಿಗೆ ಅಪರಾಧ ಮಾಡು ಅಂತ ನಾವು ಹೇಳಿದ್ವಾ ? ಮುನಿರತ್ನ ಮೇಲೆ ಮೂರು ಪ್ರಕರಣ ದಾಖಲಾಗಿವೆ. ನಾವು ಕ್ರಮ ಕೈಗೊಳ್ಳೋದು ಬಿಡಬೇಕಾ? ಎಂದು ಪ್ರಶ್ನಿಸಿದರು.

ನಾವು ಯಾರ ವಿರುದ್ದವೂ ದ್ವೇಷೇದ ರಾಜಕಾರಣ ಮಾಡುತ್ತಿಲ್ಲ. ಮುನಿರತ್ನ ವಿಚಾರದಲ್ಲಿ ಅವರ ಆಪ್ತರಿಗೆ ಬೆದರಿಕೆ ಹಾಕಿದೆ ಎನ್ನುವುದು ಸುಳ್ಳು, ನಾವು ಅಂಥ ಕೆಲಸ ಮಾಡಲ್ಲ ಎಂದರು.

ತುಂಗಭದ್ರಾ ಡ್ಯಾಂ ಗೇಟ್ ಮುರಿದಾಗ ಗೇಟ್ ರಿಪೇರಿಯಾಗಿ ಮತ್ತೆ ಡ್ಯಾಂ ತುಂಬುತ್ತದೆ ಎಂದಿದ್ದೆ,  ಮಳೆಯ ಕೃಪೆಯಿಂದ ಮತ್ತೆ ಜಲಾಶಯ ತುಂಬಿದೆ. ಮುಂಗಾರಿನ ಬೆಳೆಗೆ ನೀರು ದೊರೆಯುತ್ತದೆ. ಹಿಂಗಾರು ಬೆಳೆಗೂ ನೀರು ಲಭಿಸುವ ಭರವಸೆಯಿದೆ. ಕನ್ನಯ್ಯ ನಾಯ್ಡು ಹಾಗೂ ಅಧಿಕಾರಿಗಳ ತಂಡ ತುಂಬಾ ಕಾಳಜಿ ವಹಿಸಿ ಗೇಟ್ ದುರಸ್ಥಿ ಮಾಡಿದೆ. ಹಿಂದುಸ್ಥಾನ್ ಇಂಜಿನಿಯರಿಂಗ್ ಸೇರಿ ಮೂರು ಸಂಸ್ಥೆಗಳ ಸಹಾಯದಿಂದ ಗೇಟ್ ದುರಸ್ಥಿ ಕಾರ್ಯ ಯಶಸ್ವಿಯಾಯಿತು. ಇದರಿಂದಾಗಿ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

Advertisement

ಗೇಟ್ ಮುರಿದಾಗ ರೈತರಿಗೆ ತುಂಬಾ ಆತಂಕವಿತ್ತು. ಡ್ಯಾಂ ನಿಂದ 20 ಟಿಎಂಸಿಗೂ ಹೆಚ್ಚಿನ ನೀರು ಹರಿದು ಹೋಗಿತ್ತು. ಇದು ರೈತರಲ್ಲಿ ಆತಂಕ ಮೂಡಿಸಿತ್ತು. ಮತ್ತೆ ಮಳೆ ಬಂದು ತುಂಗಭದ್ರೆ ತುಂಬಿದ್ದರಿಂದ ರೈತರಲ್ಲಿ ಸಂತಸ ತಂದಿದೆ. ಮಳೆರಾಯನಿಗೆ ಸರಕಾರದ ಪರವಾಗಿ ಧನ್ಯವಾದ ಹೇಳುವೆ ಎಂದರು.

ಎಲ್ಲ ಕ್ರಸ್ಟ್ ಗೇಟ್ ಗಳನ್ನು ಬದಲಿಸುವ ವಿಚಾರ, ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 70 ವರ್ಷ ಕಳೆದಿದೆ. 50 ವರ್ಷ ಯಾವುದೇ ಗೇಟ್ ಗಳಿಗೆ ಹಾನಿಯಾಗಿರಲಿಲ್ಲ. ಆದರೆ, ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿ ಈಚೆಗೆ ಗೇಟ್ ಮುರಿದಿತ್ತು. ಗೇಟ್ ಬದಲಾಗಣೆ ವಿಚಾರದಲ್ಲಿ ಎಕ್ಸ್ ಫರ್ಟ್ ಕಮಿಟಿ ನೀಡಿದ ವರದಿ ಅನುಸಾರ ಕ್ರಮ ವಹಿಸಲಾಗುವುದು ಎಂದರು.

ಕೊಪ್ಪಳ ಜಿಲ್ಲೆಯ ರಸ್ತೆಗಳು ಹಾನಿಯಾದ ವಿಚಾರ, ಈ ಹಿಂದೆ ಬಿಜೆಪಿ, ಸಮ್ಮಿಶ್ರ ಸರಕಾರದಲ್ಲಿ ರಸ್ತೆಗಳಾಗಿದ್ದವು. ಈಗ ಮಳೆಯಾಗಿ ಅವು ದುರಸ್ತಿಗೊಂಡಿವೆ. ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕಲ್ಯಾಣ ಕರ್ನಾಟಕ ಸಚಿವ ಸಂಪುಟದಲ್ಲಿ 56 ವಿಷಯಗಳ ಕುರಿತು ಚರ್ಚೆ ಮಾಡಿದ್ದೇವೆ. ಇದರಲ್ಲಿ 46 ಕಲ್ಯಾಣ ಕರ್ನಾಟಕದ್ದಾಗಿವೆ.

ಹಾಲಿನ ದರ ಹೆಚ್ಚಳದ ವಿಚಾರ, ಮಾಗಡಿಗೆ ತೆರಳಿದ ವೇಳೆ, ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹಾಲಿನ ಪ್ರೋತ್ಸಾಹ ಧನ ಕಡಿಮೆಯಿದೆ ಎಂದು ಮನವಿ ಮಾಡಿದ್ದರು. ಅವರ ಬೇಡಿಕೆಯಂತೆ ಹಾಲಿನ ದರ ಹೆಚ್ಚಳ ಮಾಡಿ, ಬರುವ ಆದಾಯವನ್ನು ರೈತರಿಗೆ ಕೊಡೊಣ ಎಂದಿರುವೆ. ಈ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದರೆ ಆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next