Advertisement

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

12:58 AM Jul 05, 2024 | Team Udayavani |

ಬೆಂಗಳೂರು: ವಾಲ್ಮೀಕಿ ನಿಗಮದ ಪ್ರಕರಣದ ಜತೆಗೆ ಮುಡಾ ಹಗರಣ ಕೂಡ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸರಕಾರದ ವಿರುದ್ಧ ವಿಪಕ್ಷಗಳ ಕೈಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಇದರ ಬೆನ್ನಲ್ಲೇ ತನ್ನದೇನೂ ತಪ್ಪಿಲ್ಲವೆಂದು ಸಂಪುಟ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಪಟ್ಟಿದ್ದಾರೆ.

Advertisement

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 30ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಚರ್ಚೆ ನಡೆದು ಅನುಮೋದನೆ ಕೊಡಲಾಯಿತು. ಇದೇ ಸಭೆಯಲ್ಲಿ ಮುಡಾ ಹಗರಣದ ಬಗ್ಗೆ ಯಾರೂ ಕೇಳದಿದ್ದರೂ ಸಿಎಂ ಸಿದ್ದರಾಮಯ್ಯ ಸ್ವಯಂನಿವೇದನೆ ಮಾಡಿಕೊಂಡಿದ್ದು, ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟು ತಪ್ಪು ತಮ್ಮದಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ನನ್ನ ಭಾವಮೈದುನನ ಹೆಸರಿನಲ್ಲಿ ಇದ್ದ 3.16 ಎಕರೆಯನ್ನು ನನ್ನ ಪತ್ನಿ ಪಾರ್ವತಿಯ ಹೆಸರಿಗೆ ಉಡುಗೊರೆಯಾಗಿ ಕೊಟ್ಟಿದ್ದ. ಅದನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಬಡಾವಣೆ ಅಭಿವೃದ್ಧಿಗೆ ಬಳಸಿಕೊಂಡು ನಿವೇಶನಗಳನ್ನು ನಿರ್ಮಿಸಿದ್ದಾರೆ. ಕಾನೂನಿನ ಪ್ರಕಾರ ಅದಕ್ಕೆ ಬದಲಿ ಜಮೀನನ್ನು ಪರಿಹಾರವಾಗಿ ಕೊಡಬೇಕಿತ್ತು. 2021ರಲ್ಲಿ ಬಿಜೆಪಿಯವರದ್ದೇ ಸರಕಾರ ಅಧಿಕಾರದಲ್ಲಿದ್ದಾಗ ಯಾರದ್ದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದರೆ ಅದರಲ್ಲಿ ಶೇ. 50ರಷ್ಟು ನಿವೇಶನವನ್ನು ಭೂಮಾಲಕರಿಗೆ ಕೊಡುವ ಕಾನೂನು ತಂದರು. ಅದರ ಪ್ರಕಾರ ನಮಗೆ ಕೊಟ್ಟಿದ್ದಾರೆ. ಜಮೀನಿನ ಬೆಲೆ ಕೋಟ್ಯಂತರ ರೂ. ಆಗಲಿದೆ. ಅದರಲ್ಲೂ ಅನ್ಯಾಯ ಆಗಿತ್ತು. ಆದರೂ ನಾನು ಕೇಳಲು ಹೋಗಿರಲಿಲ್ಲ. ಆಗ ನಾವೇನು ಅಧಿಕಾರದಲ್ಲಿ ಇರಲಿಲ್ಲ ಎಂದರು.

ಮಾಜಿ ಸಚಿವರಾದ ಸಾ.ರಾ. ಮಹೇಶ್‌, ಜಿ.ಟಿ. ದೇವೇಗೌಡ ಕೂಡ 50:50ರ ಅನುಪಾತದಲ್ಲಿ ನಿವೇಶನ ಪಡೆದಿದ್ದಾರೆ. ಬಿಜೆಪಿ ಜತೆ ಸೇರಿಕೊಂಡಿರುವುದರಿಂದ ಅದರ ಬಗ್ಗೆ ಅವರ್ಯಾರೂ ಮಾತನಾಡುತ್ತಿಲ್ಲ ಎಂಬುದನ್ನೂ ಸಿಎಂ ಉಲ್ಲೇಖೀಸಿದ್ದಾರೆ.
ವಾಲ್ಮೀಕಿ ನಿಗಮ ಪ್ರಕರಣ:
ಬೇರಾರೂ ಪ್ರತಿಕ್ರಿಯಿಸಬೇಡಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದ ವಿಚಾರದಲ್ಲಿ ಎಲ್ಲರೂ ಪ್ರತಿಕ್ರಿಯಿಸುವುದು ಬೇಡ ಎಂದಿದ್ದಾರೆ.

ತಪ್ಪು ಎನ್ನುವುದಾದರೆ ಪರಿಹಾರ ಕೊಡಲಿ
ಮುಡಾ ಪ್ರಕರಣ ಸಿಬಿಐ ತನಿಖೆಗೆ ಕೊಡುವ ಆವಶ್ಯಕತೆ ಕಾಣುತ್ತಿಲ್ಲ. 50:50ರ ಅನುಪಾತದಲ್ಲಿ ನಿವೇಶನ ನೀಡುವುದನ್ನು ರದ್ದು ಮಾಡಿ ನಮ್ಮದೇ ಸರಕಾರ 2023ರಲ್ಲಿ ಆದೇಶಿಸಿರುವುದು ನಿಜ. ಅದು ಈಗ, ಆಗಲ್ಲ. ಅಲ್ಲಿ ನಮಗೆ ಸೇರಿದ 3.16 ಎಕರೆ ಜಾಗವಿತ್ತು. ಇದರ ಮಾರುಕಟ್ಟೆ ದರ 62 ಕೋಟಿ ರೂ. ಒಂದು ಎಕರೆ ಎಂದರೆ ಸುಮಾರು 44 ಸಾವಿರ ಚದರ ಅಡಿ ವಿಸ್ತೀರ್ಣ. ನಮಗೆ 14 ನಿವೇಶನ ಮಾತ್ರ ಕೊಟ್ಟಿದ್ದಾರೆ. ಅಂದರೆ 38,264 ಚದರಡಿಯನ್ನಷ್ಟೇ ನಮಗೆ ಕೊಟ್ಟಂತಾಗಿದೆ. ಅದು ತಪ್ಪು ಎನ್ನುವುದಾರೆ ನಮಗೆ 62 ಕೋಟಿ ರೂ. ಪರಿಹಾರ ಕೊಟ್ಟು, ಆ ಜಾಗವನ್ನು ಮುಡಾದವರೇ ಇಟ್ಟುಕೊಳ್ಳಲಿ ಎಂದು ಸಿಎಂ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next