Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದೆ. ಹಾಗಾಗಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ನೀಡಬೇಕು. ಜತೆಗೆ ಮುಡಾ ಹಗರಣದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದರೆ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು ಮಾತು ಮಾತಿಗೂ ತಮ್ಮದು 40 ವರ್ಷಗಳ ಕಳಂಕ ರಹಿತ ರಾಜಕಾರಣ ಎನ್ನುತ್ತಾರೆ. ಹಾಗಾದರೆ ರೀಡೂ ಪಿತಾಮಹ ಯಾರು? ರೀಡೂ ಹೆಸರಿನಲ್ಲಿ 884 ಎಕರೆ ಡಿನೋಟಿಫೈಕೇಷನ್ ಮಾಡಿರುವುದು ಅಕ್ರಮ ಅಲ್ಲವೇ ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ತಮ್ಮ ನೈತಿಕತೆ ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು. ಮುಡಾ ಹಾಗೂ ವಾಲ್ಮೀಕಿ ನಿಗಮದ ಅಕ್ರಮಗಳು ಕೂಡ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಕಪ್ಪು ಚುಕ್ಕೆಯಾಗಿವೆ. ರಾಜ್ಯ ಸರ್ಕಾರ ಈಗ ಸರ್ಕಾರದ ಪ್ರತಿ ಹುದ್ದೆಗೂ ರೇಟ್ ಕಾರ್ಡ್ ನಿಗದಿ ಮಾಡಿ ವರ್ಗಾವಣೆ ಮಾಡುತ್ತಿರುವುದೂ ಕಪ್ಪುಚುಕ್ಕೆ ಅಲ್ಲವೇ ? ಇದೆಲ್ಲವು ತಮ್ಮ ಆಡಳಿತದ ಕಳಂಕ ಅಲ್ವಾ ? ಬೆಂಗಳೂರಿನಲ್ಲಿ ಪ್ರತಿ ಅಡಿಗೂ 100 ರೂ. ಲಂಚ ಕೊಡಬೇಕು.
Related Articles
Advertisement
ನೀವು ಅಮಾಯಕರಲ್ಲ:ಮುಡಾ ಮತ್ತು ವಾಲ್ಮೀಕಿ ನಿಗ ಮದ ಹಗ ರಣ ವಿಚಾರದಲ್ಲಿ ನೀವು ಅಮಾಯಕರಲ್ಲ. ಕೆಸರೆ ಸರ್ವೇ ನಂಬರ್ 464ರ ಜಾಗ 1997ರಲ್ಲಿ ನೋಟಿಫಿಕೇಷನ್ ಆಗಿತ್ತು. 1998ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು ? ನೋಟಿಫಿಕೇಷನ್ ಆಗಿರುವ ಜಾಗ ಡಿನೋಟಿಫೈ ಆಗಲ್ಲ. ಡಿನೋಟಿಫಿಕೇಷನ್ ಮಾಡಿದ ಪ್ರಭಾವಿ ಯಾರು ? ನನ್ನ ಪ್ರಕಾರ ನೀವೇ ಆ ಪ್ರಭಾವಿ ವ್ಯಕ್ತಿ. ಆಗ ನೀವು ಉಪಮುಖ್ಯಮಂತ್ರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಿರಿ. ನೀವು ಪ್ಲ್ಯಾನ್ ಮಾಡಿಯೇ ಅಭಿವೃದ್ಧಿ ಆಗಿರುವ ಜಾಗ ಡಿನೋಟಿಫಿಕೇಷನ್ ಮಾಡಿಸಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ದೂರಿದರು. ಆರ್‌ಟಿಐ ಕಾರ್ಯಕರ್ತ ಅಬ್ರಾಹಂ ನಿಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ತಕ್ಷಣ, ಅಬ್ರಾಹಂ ಅವರ ಮೇಲೆ ಈ ಹಿಂದೆ ಇದ್ದ ಪ್ರಕರಣಗಳಿಗೆ ಜೀವ ನೀಡುವ ಕೆಲಸ ಮಾಡಲಾಗಿದೆ. ಇದರಿಂದ ನೀವು ಹೆದರಿವುದು ಗೊತ್ತಾಗಿದೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಟಿ.ಎ ಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಎಂ.ಜಿ.ಮಹೇಶ್, ಫಣೀಶ್, ದಯಾನಂದ ಪಟೇಲ್, ಕೇಬಲ್ ಮಹೇಶ್ ಇತರರು ಇದ್ದರು. ಸಿದ್ದರಾಮಯ್ಯ ನೀವು ಭ್ರಷ್ಟಾಚಾರದ ಪೋಷಕ
ಇದೆಲ್ಲವನ್ನು ನೋಡಿದರೆ ನೀವು ಸ್ವತ್ಛ ಅಲ್ಲ. ಮುಡಾ ಹಗರಣದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿ ರುವ ನೀವು ಭ್ರಷ್ಟಾಚಾರದ ಪೋಷಕ. ಜತೆಗೆ ಫಲಾನುಭವಿವೂ ಹೌದು. ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇದ್ದರೆ ಪ್ರತಿಪಕ್ಷಗಳ ಆರೋಪಕ್ಕೆ ಸದನದಲ್ಲೇ ಉತ್ತರಿಸಬೇಕಿತ್ತು. ಆದರೆ, ನೀವು ನಮ್ಮ ಪ್ರಶ್ನೆ ಮತ್ತು ಆರೋಪಗಳನ್ನು ಕೇಳಲು ಸಿದ್ಧರಿರಲಿಲ್ಲ. ಇದೀಗ ಸದನದಿಂದ ಹೊರ ಬಂದು ಜನಾಂದೋಲ ಮಾಡುತ್ತಿದ್ದಾರೆ. ನಿಮಗೆ ಧೈರ್ಯ ಇದ್ದಿದ್ದರೆ ಅಲ್ಲೇ ಉತ್ತರ ನೀಡಬೇಕಿತ್ತು. ಆದರೆ, ಧೈರ್ಯ ಇಲ್ಲದೆ ಪಲಾಯನ ಮಾಡ್ತಾ ಇರಲಿಲ್ಲ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು. “ನಾವು ಮುಡಾ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಗಳ ವಿರುದ್ಧ ಪಾದಯಾತ್ರೆ ಆರಂಭಿಸಿದ್ದೇವೆ. ಇದೊಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಇದನ್ನು ಕಂಡು ಕಾಂಗ್ರೆಸ್ ಸರ್ಕಾರ ಭಯಗೊಂಡಿದೆ. ನಮ್ಮ ಪಾದಯಾತ್ರೆ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ, ವಾಲ್ಮೀಕಿ ನಿಗಮದಲ್ಲಿ ಲೂಟಿ ಮಾಡಿರುವುದರ ವಿರುದ್ಧ ಹಾಗೂ ಮುಡಾ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ. – ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ