Advertisement

Muda Case; ಪ್ರಾಸಿಕ್ಯೂಷನ್‌ ಅನುಮತಿ ಬೆನ್ನಲ್ಲೇ ಎಲ್ಲಾ ಸಚಿವರಿಗೆ ಸಿದ್ದರಾಮಯ್ಯ ಬುಲಾವ್

12:05 PM Aug 17, 2024 | Team Udayavani |

ಬಳ್ಳಾರಿ: ಮುಡಾ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಕೊಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎಲ್ಲಾ ಸಚಿವರಿಗೆ ಬುಲಾವ್‌ ನೀಡಿದ್ದಾರೆ. ಕೂಡಲೇ ಎಲ್ಲರೂ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ.

Advertisement

ಶನಿವಾರ (ಆ.17) ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆಗೆ ಬರುವಂತೆ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಸಚಿವ ಜಮೀರ್‌ ಅಹಮದ್‌ ಅವರು ಮಧ್ಯಾಹ್ನ ನಿಗದಿಯಾಗಿ ಕೆಡಿಪಿ ಸಭೆ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಡಿದ್ದಾರೆ. ಹೀಗಾಗಿ ಜಮಿರ್ ಬಳ್ಳಾರಿ ಉಸ್ತುವಾರಿ ಸಚಿವರಾದ ಮೇಲೆ ಆಯೋಜನೆಯಾಗಿದ್ದ ಮೊದಲ ಕೆಡಿಪಿ ಸಭೆ ರದ್ದಾಗಿದೆ. ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಬೆಂಗಳೂರಿಗೆ ಹೊರಟಿದ್ದಾರೆ.

ಈ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂದರು.

ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ. ಅದರ ಅಗತ್ಯತೆ ಇಲ್ಲ. ಸಿದ್ದರಾಮಯ್ಯ ಅವರ ತಪ್ಪಿಲ್ಲ, ರಾಜೀನಾಮೆ ಕೊಡುವ ಅಗತ್ಯವಿಲ್ಲ. ರಾಜ್ಯಪಾಲರ ಮೇಲೆ ರಾಜಕೀಯ ಒತ್ತಡವಿದೆ. ಹೀಗಾಗಿ ಪ್ರಾಸುಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಸಚಿವ ಜಮೀರ್ ಅಹಮದ್‌ ಖಾನ್‌ ಹೇಳಿದರು.

Advertisement

ಬಿಜೆಪಿ ಪಾದಯಾತ್ರೆಗೆ ಇಂಪ್ಯಾಕ್ಟ್ ತೋರಿಸಬೇಕಲ್ವವೇ.. ಇದಕ್ಕಾಗಿ ರಾಜಕೀಯ ಒತ್ತಡದಿಂದ ಅನುಮತಿ ನೀಡಲಾಗಿದೆ. ಇದೇ ವಿಚಾರ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲ – ಜಮೀರ್.

ಬಿಜೆಪಿ ಅವರು ಪಾದಯಾತ್ರೆ ಮಾಡಿದ್ದರು. ಆದರೂ ಏನೂ ಪ್ರಯೋಜನ ಆಗಿಲ್ಲವೆಂದು ಇದೀಗ ರಾಜ್ಯಪಾಲರು ಹೀಗೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ಸೈಟ್ ಕೊಟ್ಟಿದ್ದರು. ಇದು ಬಿಜೆಪಿ ಅವರು ಮಾಡಿದ ಷಡ್ಯಂತ್ರ ಎಂದರು.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಬಹಳಷ್ಟು ಜನರು ಲೋಕಸಭೆ ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ನಿಲ್ಲಿಸಲು ಒತ್ತಡ ಹಾಕಿದ್ದರು. ಅದರೆ ಜ‌ನಪರವಾಗಿರುವ ಗ್ಯಾರಂಟಿ ನಿಲ್ಲಲು ಸಾಧ್ಯವಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಜಮೀರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next