Advertisement

ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ; ಗೃಹ ಖಾತೆ ಯಾರಿಗೆ?

11:06 AM Jun 01, 2017 | Team Udayavani |

ಮೈಸೂರು : ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಯಾರಿಗೂ ಅಸಮಧಾನ ಇಲ್ಲ. ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. 

Advertisement

ಮುಂದಿನ ಚುನಾವಣೆ ನಾಯಕತ್ವವನ್ನು ನನಗೆ ನೀಡಲಾಗಿದೆ. ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿ ಎಂದು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದರು. 

ಇಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿದ ಕುರಿತು ಪ್ರತಿಕ್ರಿಯಿಸಿದ ಸಿಎಂ  ಚುನಾವಣೆ ವೇಳೆ ಒಬ್ಬರೇ ರಾಜ್ಯಾದ್ಯಂತ ಓಡಾಡುವುದು ಕಷ್ಟ ,ಹೀಗಾಗಿ ಇಬ್ಬರಿಗೆ ಹುದ್ದೆ ನೀಡಲಾಗಿದೆ.ಡಿ.ಕೆ.ಶಿವಕುಮಾರ್‌ ಸೇರಿದಂತೆ ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ ಎಂದರು. 

ನನ್ನ ಬಳಿ ಚರ್ಚಿಸಿಲ್ಲ!
ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿರುವ ಡಾ.ಜಿ.ಪರಮೇಶ್ವರ್‌ ಅವರು ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ನನ್ನ ಬಗೆ ಚರ್ಚಿಸಿಲ್ಲ. ಅವರ ಜೊತೆ ಮಾತನಾಡುತ್ತೇನೆ.ಅವರೇ ರಾಜೀನಾಮೆ ನೀಡುತ್ತಾರೆ. ಅವರು ರಾಜೀನಾಮೆ ಸಲ್ಲಿಸಿದ ಬಳಿಕ ಗೃಹ ಖಾತೆ ಯಾರಿಗೆ ಎಂದು ನಾನೇ ನಿರ್ಧಾರ ಮಾಡುತ್ತೇನೆ.ಖಾತೆ ಯಾರಿಗೆ ನೀಡುತ್ತೇನೆ ಎಂದು ನಿಮ್ಮ ಬಳಿ ಹೇಳಲು ಸಾಧ್ಯವಿಲ್ಲ  ಎಂದರು. 

ವಿಧಾನಸಭಾ ಮಳೆಗಾಲದ ಅಧಿವೇಶನ ಬಳಿಕ ಸಂಪುಟವನ್ನು ವಿಸ್ತರಣೆ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದರು. 

Advertisement

ಕೆಪಿಸಿಸಿ ಹಾಲಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರು ಅಧ್ಯಕ್ಷ ರಾಗಿ ಮುಂದುವರಿಯಲಿದ್ದು, ಅವರು ತತ್‌ಕ್ಷಣದಿಂದ ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. 

ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಎಸ್‌.ಆರ್‌. ಪಾಟೀಲ್‌ ಅವರನ್ನು ಕಾರ್ಯಾಧ್ಯಕ್ಷರ ನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಉತ್ತರ ಕರ್ನಾಟಕದ ಜವಾಬ್ದಾರಿ ನೀಡಲಾಗಿದೆ. ಇನ್ನೊಬ್ಬ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ದಕ್ಷಿಣ ಕರ್ನಾಟಕದ ಉಸ್ತುವಾರಿ ನೀಡಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು 2018ರ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರ ನ್ನಾಗಿ ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next