Advertisement

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಎಂ ಸಾವಂತ್ ರಕ್ಷಣೆಗೆ ಯತ್ನ : ಆಪ್ ನಾಯಕ ವಾಲ್ಮೀಕಿ

06:10 PM Nov 14, 2021 | Team Udayavani |

ಪಣಜಿ: ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಾಲಯಕ್ಕೆ ಬರೆದ ಪತ್ರದ ಪ್ರತಿ ಗೋವಾದ ರಾಜಭವನದಲ್ಲಿ ಇಲ್ಲ ಎಂಬುದು ಮಾಧ್ಯಮ ವರದಿಯೊಂದರಿಂದ ಬೆಳಕಿಗೆ ಬಂದಿದ್ದು, ಇದರಿಂದಾಗಿ ಬೃಹತ್ ಪ್ರಮಾಣದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರನ್ನು ರಕ್ಷಿಸರು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ವಾಲ್ಮೀಕಿ ನಾಯ್ಕ ಆರೋಪಿಸಿದ್ದಾರೆ.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರನ್ನು ಸಂಪರ್ಕಿಸಿ ಅವರಿಂದ ಈ ಪತ್ರದ ಪ್ರತಿಯನ್ನು ಗೋವಾ ರಾಜಭವನಕ್ಕೆ ತರಿಸಿಕೊಳ್ಳುವುದು ಸಾರ್ವಜನಿಕ ಮಾಹಿತಿ ಅಧಿಕಾರಿಯ(ಪಿಐಒ) ಕರ್ತವ್ಯವಾಗಿದೆ. ಆದರೆ ತಮ್ಮ ಕರ್ತವ್ಯವನ್ನು ನಿಭಾಯಿಸುವ ಬದಲು ಪತ್ರ ಲಭ್ಯವಿಲ್ಲ ಎಂಬ ಕಾರಣವನ್ನು ಪಿಐಒ ನೀಡಿದರು. ಈ ಪತ್ರದಲ್ಲಿರುವ ವಿಷಯವನ್ನು ಮುಚ್ಚಿಡುವ ಪ್ರಯತ್ನ ಇದಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾಲ್ಮಿಕಿ ನಾಯ್ಕ ಹೇಳಿದರು.

ಹೀಗೆ ಹೇಳುವ ಬದಲು ಪಿಐಒ ರವರು ಮಾಜಿ ರಾಜ್ಯಪಾಲರನ್ನು ಸಂಪರ್ಕಿಸಬಹುದಿತ್ತು. ಮುಖ್ಯಮಂತ್ರಿಗಳ ಸೂಚನೆಯ ಅನುಸಾರ ಪಿಐಒ ರವರು ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ರವರ ಪತ್ರವನ್ನು ಅಡಗಿಸಿಟ್ಟಿದ್ದಾರೆ ಎಂದು ವಾಲ್ಮೀಕಿ ನಾಯ್ಕ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next