ಬೆಂಗಳೂರು: ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಗರಿಕರೊ ಬ್ಬರಿಗೆ “ಏಯ್ ಥೂ’ ಎಂದು ಉಗಿದ ವೀಡಿಯೋವನ್ನು ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡಿವೆ.
ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಜತೆ ಸಿದ್ದರಾಮಯ್ಯ ನಡೆದು ಬರುತ್ತಿರುವಾಗ ವ್ಯಕ್ತಿಯೊ
ಬ್ಬರು “ಸಾಹೇಬ್ರೇ ಬೆಳಗಾವಿ ಜಿಲ್ಲೆಗೆ ಮೂರು ಡಿಸಿ ಬದಲಾದರೂ ನಮ್ಮ ಕೆಲಸ ಆಗಿಲ್ಲ’ ಎಂದರು. ಸಿಟ್ಟಿಗೆದ್ದ ಸಿದ್ದರಾಮಯ್ಯ “ಏಯ್ ಥೂ’ ಎಂದು ಉಗಿದು ದೇವಸ್ಥಾನದಲ್ಲೂ ಇದೇ ಕೆಲಸಾನಾ? ಎಂದು ಗದರಿ ಮುಂದೆ ಹೋದರು.
ಮತ ಭಿಕ್ಷೆ ಕೇಳುವಾಗ ಮತ ದಾರನನ್ನು ದೇವರೆಂದು ಹೇಳಿ, ಈಗ ದೇವರ ಸನ್ನಿಧಾನದಲ್ಲಿ ಥೂ ಎಂದು ಉಗಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿಟ್ಯಾಕೆ… ಸಿಡುಕ್ಯಾಕೆ… ಸಿದ್ದಣ್ಣ…? ಜೈಕಾರ ಹಾಕಿದಾಗ ಒಳಗೊಳಗೆ ಸಂತಸ. ಸಮಸ್ಯೆ ಹೇಳಿದಾಗ ಥೂ.. ಥೂ…! ನಿಮ್ಮ ಹುದ್ದೆಗೆ ಇದು ಶೋಭೆಯಲ್ಲ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಇದುವೆಯಾ ನಾಡಿನ ಮುಖ್ಯಮಂತ್ರಿ ಪ್ರಜೆಗಳನ್ನು ನಡೆಸಿಕೊಳ್ಳಬೇಕಾದ ರೀತಿ? ಇದುವೆಯಾ ಬಡವರು, ರೈತರು ಮೇಲೆ ಒಬ್ಬ ಮುಖ್ಯಮಂತ್ರಿಗೆ ಇರಬೇಕಾದ ಸಹನೆ, ಸಹಾನುಭೂತಿ, ಸಂವೇದನೆ? ಕಷ್ಟ ಹೇಳಿಕೊಳ್ಳಲು ಬಂದವರಿಗೆ ಒಬ್ಬ ಮುಖ್ಯಮಂತ್ರಿ ಸ್ಪಂದಿಸುವ ಪರಿ ಇದಾ? ತಾಯಿ ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲೇ ಇಂತಹ ದುರ್ನಡತೆ ಪ್ರದರ್ಶನ ಮಾಡಿದ್ದಾರಲ್ಲ, ಆ ತಾಯಿ ಯಲ್ಲಮ್ಮ ಮೆಚ್ಚುತ್ತಾಳಾ? ಅದು ಹೋಗಲಿ, ಇಂತಹ ದುರ್ನಡತೆಯನ್ನು ಮುಖ್ಯಮಂತ್ರಿಗಳ “ಆತ್ಮಸಾಕ್ಷಿ’ಯಾದರೂ ಒಪ್ಪುತ್ತದೆಯಾ?
– ಆರ್.ಅಶೋಕ್, ವಿಧಾನಸಭಾ ವಿಪಕ್ಷ ನಾಯಕ