Advertisement

ಪಾಲಿಟೆಕ್ನಿಕ್ ಅಭಿವೃದ್ಧಿಗೆ ಟಾಟಾಗೆ ಸಿಎಂ ಮನವಿ

10:58 AM Oct 05, 2021 | Team Udayavani |

ಬೆಂಗಳೂರು: ಪಾಲಿಟೆಕ್ನಿಕ್‌ಗಳಲ್ಲಿ ಪಠ್ಯಕ್ರಮ ಹಾಗೂ ಇತರ ಮೂಲಸೌಕರ್ಯ ಕಲ್ಪಿಸಲು ಸಹಯೋಗ ನೀಡುವಂತೆ ಟಾಟಾ ಟೆಕ್ನಾಲಜೀಸ್‌ ಸಂಸ್ಥೆಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

Advertisement

ಟಾಟಾ ಟೆಕ್ನಾಲಜೀಸ್‌ ಅಧ್ಯಕ್ಷ ಆನಂದ್‌ ಬಢೆ ಅವರು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ರಾಜ್ಯದಲ್ಲಿ 150 ಸರ್ಕಾರಿ ಐಟಿಐಗಳ ಉನ್ನತೀಕರಣವನ್ನು ಟಾಟಾ ಟೆಕ್ನಾಲಜೀಸ್‌ ಸಂಸ್ಥೆ ಇತರ ಕಾರ್ಪೊರೇಟ್‌ ಸಂಸ್ಥೆಗಳ ಸಹಯೋಗದೊಂದಿಗೆ ಕೈಗೆತ್ತಿಕೊಂಡಿದ್ದು, ಮೂಲ ಸೌಕರ್ಯ ಉನ್ನತೀಕರಣ ಬಹುತೇಕ ಪೂರ್ಣಗೊಂಡಿದೆ.

ಜೊತೆಗೆ ಐಟಿಐ ಬೋಧಕ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಮುಖ್ಯಮಂತ್ರಿಯವರು ಐಟಿಐಗಳಒಟ್ಟಾರೆ ಅಭಿವೃದ್ಧಿಗೆ, ವಿದ್ಯಾರ್ಥಿಗಳಿಗೆ ಕಾಲಕ್ಕೆ ತಕ್ಕ ತರಬೇತಿ, ಶಿಕ್ಷಣ, ಮಾರ್ಗದರ್ಶನ ಹಾಗೂ ಉದ್ಯೋಗಾವಕಾಶಕಲ್ಪಿಸುವ ನಿಟ್ಟಿನಲ್ಲಿ ಒಂದೊಂದು ಬೃಹತ್‌

ಕೈಗಾರಿಕಾ ಸಂಸ್ಥೆಯವರು ಒಂದೊಂದು ಜಿಲ್ಲೆಯ ಐಟಿಐಗಳ ಅಭಿವೃದ್ಧಿಗೆ ಸಹಯೋಗ ನೀಡಬೇಕೆಂದು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಕೃಷಿ ವಲಯದಲ್ಲಿ ಸಂಶೋಧನೆ ಮತ್ತು ನಾವಿನ್ಯತಾ ಕೇಂದ್ರ ವನ್ನು ಪ್ರಾರಂಭಿಸಲು ಟಾಟಾ ಟೆಕ್ನಾಲಜೀಸ್‌ ಸಂಸ್ಥೆಯವರು ಉತ್ಸುಕತೆ ತೋರಿದರು.

ರೈತರಿಗೆ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸುವುದರ ಜತೆಗೆ, ಕೊಯ್ಲೋತ್ತರ ನಿರ್ವಹಣೆ, ಕೃಷಿ ಉತ್ಪನ್ನಗಳ ವೈಜ್ಞಾನಿಕ ಸಂಗ್ರಹಣೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next