Advertisement

ಸಿಎಂ ಕಾರ್ಯಕ್ರಮ: ಸ್ಥಳ ಪರಿಶೀಲಿಸಿದ ಸಚಿವ

04:47 PM Dec 07, 2018 | Team Udayavani |

ಪಾಂಡವಪುರ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲೂಕಿನ ಅರಳಕುಪ್ಪೆ-ಸೀತಾಪುರ ಬಯಲು ಪ್ರದೇಶಕ್ಕೆ ಶುಕ್ರವಾರ ಭತ್ತದ ಕೊಯ್ಲು ಮಾಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಗುರುವಾರ ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಮಧ್ಯಾಹ್ನ 3.30ಕ್ಕೆ ಅರಳಕುಪ್ಪೆ-ಸೀತಾಪುರ ಹಳೇಗದ್ದೆ ಬಯಲಿನ ಭತ್ತದ ಗದ್ದೆಗೆ ಭೇಟಿಕೊಟ್ಟು ಸಿದ್ದತೆಗಳನ್ನು ಪರಿಶೀಲಿಸಿ ಪೊಲೀಸ್‌ ಹಾಗೂ ನೀರಾವರಿ ಅಧಿಕಾರಿಗಳೊಂದಿಗೆ ಭದ್ರತೆ ಕುರಿತು ಸಮಾಲೋಚನೆ ನಡೆಸಿದ ಸಚಿವರು, ಭತ್ತದ ಕೊಯ್ಲಿಗೆ ಚಾಲನೆ ನೀಡಿದ ಬಳಿಕ ಭತ್ತದ ಗದ್ದೆಯ ಪಕ್ಕದಲ್ಲಿಯೇ ನಿರ್ಮಿಸಿರುವ ಕಣದಲ್ಲಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಅಧಿಕಾರಿಗಳು, ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

ಮೇಲ್ಸೇತುವೆಗೆ ಗುದ್ದಲಿಪೂಜೆ: ಭತ್ತ ಕಟಾವು ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗದ ಜನರ ಬಹುದಿನದ ಬೇಡಿಕೆಯಾಗಿರುವ ಅರಳುಕುಪ್ಪೆ-ಸೀತಾಪುರ ಹಳೇ ಗದ್ದೆ ಬಯಲು ಪ್ರದೇಶದಿಂದ-ಮೈಸೂರಿಗೆ ಸಂಪರ್ಕ ಕಲ್ಪಿಸುವ 78 ಕೋಟಿ ರೂ. ವೆಚ್ಚದ ಕಾವೇರಿ ನದಿ ಮೇಲ್ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೇವೇರಿಸುವರು. ಇದಾದ ಬಳಿಕ ವದೇಸಮುದ್ರ ಗ್ರಾಮಕ್ಕೆ ತೆರಳುವ ಕುಮಾರಸ್ವಾಮಿ, ಕನಗನಮರಡಿ ಬಳಿ ಬಸ್‌
ದುರಂತದಲ್ಲಿ ಮೃತಪಟ್ಟ 30 ಮಂದಿಗೂ ಪರಿಹಾರ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವು, ಸದಸ್ಯ ವಿಶ್ವನಾಥ್‌, ಟಿಎಂಪಿಸಿಎಂಎಸ್‌ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಹೊನಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿಂಡಬೋಗನಹಳ್ಳಿ ನಾಗಣ್ಣ ಸೇರಿದಂತೆ ಹಲವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next