Advertisement
ಇಂಧನ ಸಚಿವ ಡಿ.ಕೆ.ಶಿವಕುಮಾರೂ ಗೊತ್ತು. ಸಚಿವರೆಲ್ಲ ನಂಗೆ ಪರಿಚಯ, ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ಸಂಚಾಲಕ….. ಹೀಗಂತ ಹೇಳಿಕೊಂಡು ಪಶು ಸಂಗೋಪನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರುವ ಜೆ.ಮಂಜುನಾಥ ವಿಧಾನಸೌಧದಲ್ಲಿ ತಿರುಗಾಡುತ್ತಾ ಜನರನ್ನು ವಂಚಿಸುತ್ತಿದ್ದಾನೆ.
ವಿಧಾನಸೌಧದಲ್ಲಿ ಯಾವುದೇ ತೊಂದರೆ ಇಲ್ಲದೇ ತಿರುಗಾಡಿಕೊಂಡಿದ್ದಾನೆ. ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ವಸತಿ ಸಚಿವ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ ಹಾಗೂ ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್‌ಆಯುಕ್ತರಾಗಿರುವ ಸುನೀಲ್ ಕುಮಾರ್ ಅವರೊಂದಿಗೂ ಫೋಟೋ ತೆಗೆಸಿಕೊಂಡಿರುವ ಮಂಜುನಾಥ, ಆ ಫೋಟೋಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅಮಾಯಕರಿಗೆ ವಂಚಿಸಿದ್ದಾನೆ. ಈ ರೀತಿ ನಾಯಕರೊಂದಿಗಿದ್ದಾಗ ಫೋಟೋ ತೆಗೆಯಲೆಂದೇ ಒಬ್ಬ ಸಹಾಯಕನನ್ನೂಇಟ್ಟುಕೊಂಡಿದ್ದಾನೆ. ಜೆ. ಮಂಜುನಾಥ್ ತಮ್ಮ ಸ್ನೇಹಿತ ಎಸ್.ಪಿ ವರದರಾಜು ಎನ್ನುವವರ ಬಳಿ 2013ರಲ್ಲಿ 3 ಲಕ್ಷ ರೂ. ಕೈ ಸಾಲ ಪಡೆದು, ಹಣ ಇಲ್ಲದ ಬ್ಯಾಂಕ್‌ನ ಚೆಕ್ ನೀಡಿದ್ದ. ಆ ಚೆಕ್ ಬೌನ್ಸ್ ಆಗಿ ಬೆಂಗಳೂರಿನ 12ನೇ ಎಸಿಎಂಎಂ ನ್ಯಾಯಾಲಯವು 3 ಲಕ್ಷ ಅಸಲು, 15 ಸಾವಿರ ದಂಡ ಹಾಗೂ ಎರಡು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿತ್ತು. ಇನ್ನೊಂದು ಪ್ರಕರಣದಲ್ಲಿ ಚಿಂತಾಮಣಿಯ ನಾಗರಾಜ್ ರೆಡ್ಡಿ ಎನ್ನುವವರಿಗೆ ಪಿಡಿಒ ಕೆಲಸ ಕೊಡಿಸುವುದಾಗಿ ಹೇಳಿ 12 ಲಕ್ಷ ರೂ.ಗೆ ಡೀಲ್ ಕುದುರಿಸಿ ಆರು ಲಕ್ಷ ರೂ. ಮುಂಗಡವಾಗಿ ಪಡೆದಿದ್ದ. ಕೆಲಸ ಕೊಡಿಸಲು ಸಾಧ್ಯವಾಗದೆ ಹಣ ವಾಪಸ್ ನೀಡುವಾಗ ಹಣವೇ ಇಲ್ಲದ ಬ್ಯಾಂಕ್‌ನ ಚೆಕ್ ನೀಡಿದ್ದ. ಆ ಚೆಕ್ಕೂ ಬೌನ್ಸ್ ಆಗಿ ಚಿಂತಾಮಣಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement
ಈ ರೀತಿ ಮಂಜುನಾಥನಿಂದ ಮೋಸ ಹೋದವರೆಲ್ಲಾ ನೌಕರರ ಸಂಘಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವದಿಂದಲೇ ಮಂಜುನಾಥನನ್ನು ವಜಾಗೊಳಿಸಲಾಗಿದೆ. ಅಲ್ಲದೇ ಅವರ ಮೇಲೆ ಕೆಸಿಎಸ್‌ಆರ್ ಹಾಗೂ ಸಿಸಿಎ ಕಂಡಕ್ಟ್ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಇಲಾಖೆ ವಿಚಾರಣೆ ನಡೆದಿಲ್ಲ: ಸರ್ಕಾರಿ ನೌಕರರ ವಿರುದಟಛಿ ಯಾವುದೇ ಆರೋಪ ಕೇಳಿ ಬಂದ ತಕ್ಷಣ ಸರ್ಕಾರ ಅವರ ವಿರುದಟಛಿ ಸಿಸಿಎ ನಿಯಮದ ಪ್ರಕಾರ ಇಲಾಖಾ ತನಿಖೆಗೆ ಆದೇಶಿಸಿ, ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತಿನಲ್ಲಿಡಲಾಗುತ್ತದೆ. ಆದರೆ ಮಂಜುನಾಥ ಪ್ರಕರಣದಲ್ಲಿ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ದೊಡ್ಡವರೊಂದಿಗಿನ ಫೋಟೊಗಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕ್ಲರ್ಕ್‌ಗೆ ನಿಜವಾಗಲೂ ದೊಡ್ಡವರ ಆಶೀರ್ವಾದ ಇದೆಯಾ ಎನ್ನುವ ಮಾತು ಸರ್ಕಾರಿ ನೌಕರರ ವಲಯದಲ್ಲಿ ಚರ್ಚಿತವಾಗುತ್ತಿದೆ.