Advertisement
ನಗರದಲ್ಲಿ ಚಾತ್ ಪೂಜೆ ಉದ್ಘಾಟಿಸಿದ ನಂತರ ಮಾತನಾಡಿದ ಬ್ಯಾನರ್ಜಿ, ಚುನಾವಣಾ ಸಂದರ್ಭದಲ್ಲಿ ಕೇವಲ ಭಾಷಣ ಮಾಡುವ ಬಗ್ಗೆ ನಮ್ಮ ಸರ್ಕಾರಕ್ಕೆ ನಂಬಿಕೆ ಇಲ್ಲ ಎಂದು ಇತ್ತೀಚೆಗೆ ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿರುವ ಬಿಜೆಪಿ ಮುಖಂಡರ ಹೆಸರನ್ನು ಉಲ್ಲೇಖಿಸದೇ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
Related Articles
Advertisement
2021ರ ಏಪ್ರಿಲ್, ಮೇ ತಿಂಗಳಿನಲ್ಲಿ ಪಶ್ಚಿಮಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈಗಾಗಲೇ “ ಬಿಜೆಪಿಯಿಂದ ಸುರಕ್ಷಿತವಾಗಿ ದೂರವಿರಿ” ಎಂಬ ಡಿಜಿಟಲ್ ಪ್ರಚಾರವನ್ನು ಆರಂಭಿಸಿದೆ. ಮಂಗಳವಾರದಿಂದ ಈವರೆಗೆ ಈ ಅಭಿಯಾನಕ್ಕೆ ಹತ್ತು ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಟಿಎಂಸಿ ತಿಳಿಸಿದೆ.
ಬಿಜೆಪಿ ಜನರನ್ನು ಹೇಗೆ ತಪ್ಪು ದಾರಿಗೆ ಎಳೆಯುತ್ತಿದೆ ಎಂಬುದದ ಬಗ್ಗೆ ಜನರಿಗೆ ಮಾಹಿತಿ ನೀಡುವ ಅಭಿಯಾನವನ್ನು ಟಿಎಂಸಿ ಅಕ್ಟೋಬರ್ 23ರಿಂದ ಆರಂಭಿಸಿತ್ತು. ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಐ-ಪಿಎಸಿ(ಇಂಡಿಯನ್ ಪಾಲಿಟಿಕಲ್ ಆ್ಯಕ್ಷನ್ ಕಮಿಟಿ) ತಂಡ ಮಮತಾ ಬ್ಯಾನರ್ಜಿಗೆ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿರುವುದಾಗಿ ವರದಿ ತಿಳಿಸಿದೆ.
ಒಂದು ವರ್ಷದ ಹಿಂದೆ ಪ್ರಶಾಂತ್ ಕಿಶೋರ್ ತಂಡ “ದೀದಿ ಕೇ ಬೋಲೋ” ಎಂಬ ಪ್ರಚಾರ ಕಾರ್ಯ ಆರಂಭಿಸಿತ್ತು. ಈ ಮೂಲಕ ಜನಸಾಮಾನ್ಯರು ಸಹಾಯವಾಣಿ ನಂಬರ್ ಅಥವಾ ವಾಟ್ಸಪ್, ಫೇಸ್ ಬುಕ್ ಮೂಲಕ ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಅಷ್ಟೇ ಅಲ್ಲ ಮಾರ್ಚ್ ತಿಂಗಳಿನಲ್ಲಿ “ದೀದಿ ಬಂಗಾಳದ ಹೆಮ್ಮೆ” ಎಂಬ ಪ್ರಚಾರವನ್ನು ಆರಂಭಿಸಿತ್ತು.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಮತ್ತೆ ದಾಳಿ, ಯೋಧ ಹುತಾತ್ಮ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ರಣತಂತ್ರ:
ಪಶ್ಚಿಮಬಂಗಾಳದಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿರುವ ಭಾರತೀಯ ಜನತಾ ಪಕ್ಷ ಪಕ್ಷದ ಕಮಲದ ಚಿಹ್ನೆ ಮೂಲಕ ಪ್ರತಿಯೊಂದು ಬೂತ್ ಮಟ್ಟದಲ್ಲಿಯೂ ರಣತಂತ್ರ ರೂಪಿಸುತ್ತಿದೆ ಎಂದು ವರದಿ ಹೇಳಿದೆ. ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಪಶ್ಚಿಮಬಂಗಾಳದಲ್ಲಿ ಟಿಎಂಸಿಯಿಂದ ಅಧಿಕಾರ ಕಿತ್ತುಕೊಳ್ಳಲು ಬೇಕಾದ ಎಲ್ಲಾ ರೀತಿಯ ರಣತಂತ್ರವನ್ನು ಬಿಜೆಪಿ ಸಿದ್ದಪಡಿಸುತ್ತಿರುವುದಾಗಿ ವರದಿ ವಿವರಿಸಿದೆ. ಚುನಾವಣೆ ಮುಗಿಯುವವರೆಗೂ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲು ಬಿಜೆಪಿ ಹಿರಿಯ ಮುಖಂ, ಕೇಂದ್ರ ಗೃಹ ಸಚಿವ ಅಮತ್ ಶಾ ನಿರ್ಧರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬೇಕಾದ ಬೂತ್ ಮಟ್ಟದ 23 ಅಂಶಗಳ ಪಟ್ಟಿ ಶಾ ಅವರ ಕೈಯಲ್ಲಿರುವುದಾಗಿ ವರದಿ ವಿವರಿಸಿದೆ.