Advertisement

ಚರ್ಚೆಗೆ ಗ್ರಾಸವಾದ ಸಿಎಂ ಲವ್‌ ಲೆಟರ್‌ ಹೇಳಿಕೆ

11:32 PM Jul 19, 2019 | Team Udayavani |

ವಿಧಾನಸಭೆ: ಸದನದಲ್ಲಿ ವಿಶ್ವಾಸಮತ ನಿರ್ಣಯದ ಚರ್ಚೆ ವೇಳೆ ಮುಖ್ಯಮಂತ್ರಿಯವರು ರಾಜ್ಯಪಾಲರು ಕಳುಹಿಸಿದ ಎರಡನೇ ಪತ್ರವನ್ನು “ಎರಡನೇ ಲವ್‌ ಲೆಟರ್‌ ಎನ್ನಬೇಕೇ’ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಯಿತು.

Advertisement

ರಾಜ್ಯದ ಮುಖ್ಯಸ್ಥರಾದ ರಾಜ್ಯಪಾಲರು ನಿರ್ದೇಶನ ರೂಪದಲ್ಲಿ ನೀಡಿದ ಪತ್ರಕ್ಕೆ ಸದನದಲ್ಲಿ ಈ ರೀತಿ ಪ್ರತಿಕ್ರಿಯಿಸಿರುವುದು ಎಷ್ಟು ಸರಿ. ರಾಜ್ಯಪಾಲರು ಗುರುವಾರ ರಾತ್ರಿ ಒಂದು ಪತ್ರ ಕಳುಹಿಸಿದ್ದರು. ಇಂದು ಎರಡನೇ ಪತ್ರ ಕಳುಹಿಸಿದ್ದಾರೆ. ಇದನ್ನು ರಾಜ್ಯಪಾಲರು ಸರ್ಕಾರಕ್ಕೆ ಬರೆದಿರುವ ಎರಡನೇ ಲವ್‌ ಲೆಟರ್‌ ಎನ್ನಬೇಕೆ ಎಂದು ಅಪಹಾಸ್ಯ ಮಾಡುವ ಧಾಟಿಯಲ್ಲಿ ಹೇಳಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜತೆಗೆ, ರಾಜ್ಯಪಾಲರ ಪತ್ರದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆಯೂ ಹೇಳಿ, ಶಾಸಕರನ್ನು ಸೆಳೆಯಲು ಕುದುರೆ ವ್ಯಾಪಾರ ನಡೆದಿದೆ ಎಂಬ ದೂರುಗಳು ಬಂದಿವೆ ಎಂದಿದ್ದಾರೆ. 11 ಮಂದಿ ರಾಜೀನಾಮೆ ನೀಡಿದ ದಿನವೇ ರಾಜ್ಯಪಾಲರು ತಮ್ಮ ಜವಾಬ್ದಾರಿ ಸ್ಥಾನದಿಂದ ಎಚ್ಚರಿಕೆ ಕೊಡಬೇಕಿತ್ತು.

ರಾಜ್ಯಪಾಲರಿಗೆ ಈಗ ಜ್ಞಾನೋದಯವಾಗಿದೆ ಎಂದು ಹೇಳಿದ್ದಾರೆ. ಇದು ಸಹ ಒಂದು ರೀತಿಯಲ್ಲಿ ರಾಜಭವನದ ಜತೆ ಸಂಘರ್ಷಕ್ಕೆ ಬಿದ್ದಂತೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಯವರ ಶಬ್ದ ಬಳಕೆ ಅವರ ಸ್ಥಾನ, ಗೌರವಕ್ಕೆ ಚ್ಯುತಿ ತರುವಂತದ್ದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next