Advertisement
ಇಲ್ಲಿನ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿ. ಅವರ ಮೇಲೆ ಆಪಾದನೆ ಬಂದಿದೆ. ರಾಜ್ಯದಲ್ಲಿ 135 ಸ್ಥಾನ ಪಡೆದಿರುವ ಕಾಂಗ್ರೆಸ್ ಒಳ್ಳೆಯ ಆಡಳಿತ ನೀಡಲಿ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ರಾಜೀನಾಮೆ ಕೊಡಲಿ. ಆರೋಪದಿಂದ ಮುಕ್ತರಾದ ನಂತರ ಮತ್ತೆ ಆಡಳಿತ ನಡೆಸಲಿ ಎಂದರು.
ಸಿದ್ದರಾಮಯ್ಯ ಫಲಾಯನ ಮಾಡಬಾರದು ಎಂದರು. ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಸದಾನಂದ ಭಟ್ ಮಾತನಾಡಿ ಸಿದ್ದರಾಮಯ್ಯ 14 ಬಜೆಟ್ ಮಂಡಿಸಿದವರು. ಅರ್ಥಿಕ ಖಾತೆ ಅವರ ಬಳಿಯೇ ಇದೆ. ಆದರೂ ಅವರಿಗೆ ವಾಲ್ಮೀಕಿ ನಿಗಮದ ಹಗರಣ ಗೊತ್ತಾಗಲಿಲ್ಲ ಎಂಬುದು ಸೋಜಿಗ. ಮುಡಾ ಹಗರಣ ಸಹ ಅವರ ಕೊರಳಿಗೆ ಬಿದ್ದಿದೆ. ಈ ವಿಚಾರದಲ್ಲಿ ರಾಜ್ಯಪಾಲರ ವಿರುದ್ಧ ಸಚಿವ ಸಂಪುಟ ನಿರ್ಣಯ ಮಾಡಿದ್ದು ಸರಿಯಲ್ಲ. ಇದು
ಸಂವಿಧಾನಕ್ಕೆ ತೋರಿದ ಅಗೌರವ ಎಂದರು.
Related Articles
ಅನುಸರಿಸಬೇಕು. ಆರೋಪ ಕೇಳಿಬಂದಾದ ರಾಜೀನಾಮೆ ನೀಡಿದ ಅನೇಕ ಉದಹಾರಣೆಗಳಿವೆ. ಹಾಗೆಯೇ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಅಪರಾಧ ಸಾಬೀತಾಗದಿದ್ದರೆ ಮತ್ತೆ ಅಧಿಕಾರಕ್ಕೆ ಬರಲಿ. ತಾವು ಇಲ್ಲದೆ ಇದ್ದರೆ ಕಾಂಗ್ರೆಸ್ ಇರಲ್ಲ ಎಂಬುದನ್ನು ಬಿಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣ ಬಳಸಿಕೊಂಡರು. ನಾವು ರಾಜೀನಾಮೆ ಕೇಳಿದರೆ, ಇಡೀ
ಪ್ರಕರಣವನ್ನು ಮತ್ತೂಂದೆಡೆಗೆ ತಿರುಗಿಸಿದರು ಎಂದು ಆರೋಪಿಸಿದರು.
Advertisement
ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ನ ಸಚಿವ ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ಐವನ್ಡಿಸೋಜಾ ಅವರು ಮಾತನಾಡಿದ್ದು ಅಕ್ಷಮ್ಯ. ಇವರಿಗೆಲ್ಲ ರಾಜ್ಯಪಾಲ ಹುದ್ದೆಯ ಮಹತ್ವವೇ ತಿಳಿದಿಲ್ಲ ಎಂಬುದು ಅವರ ಹೇಳಿಕೆಗಳಿಂದ ಸಾಬೀತಾಗಿದೆ ಎಂದರು. ಜಗದೀಶ್ ನಾಯಕ, ಸುಭಾಷ್ ಗುನಗಿ, ಕಿಶನ್, ಬಿಜೆಪಿ ಪದಾಧಿಕಾರಿಗಳು, ಮುಂತಾದವರು ಉಪಸ್ಥಿತರಿದ್ದರು. ಹತ್ತು ದಿನದ ನಂತರವೂ ಸಿಎಂ ಮಾತಿಗೆ ಬದ್ಧರಾಗಿರಲಿ
ಬಿಜೆಪಿ ಆರೋಪ ಮಾಡಿದೆ. ಅದಕ್ಕೆ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಪ್ರಕರಣ ಹೈಕೋರ್ಟ್ ನಲ್ಲಿದೆ. ಹತ್ತು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಈಗ ಸಿದ್ದರಾಮಯ್ಯ ಸತ್ಯಮೇವ ಜಯತೆ ಎಂದಿದ್ದಾರೆ. ಹತ್ತು ದಿನಗಳ ನಂತರ ಬರುವ ತೀರ್ಮಾನವನ್ನೂ ಅವರು ಒಪ್ಪಿಕೊಳ್ಳಬೇಕು. ಸತ್ಯಮೇವ ಜಯತೆ ಎಂಬ ಮಾತಿಗೆ ಬದ್ಧರಾಗಿರಬೇಕು ಎಂದು ಬಿಜೆಪಿ ವಕ್ತಾರ ಸದಾನಂದ ಭಟ್ ಹೇಳಿದರು.