Advertisement
ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಯುವಿಸಿಇ ಅಧ್ಯಕ್ಷ ಬಿ.ಮುತ್ತುರಾಮನ್ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಕೆಐಟಿಗೆ ಆಯ್ಕೆಯಾಗಿರುವ ಪ್ರತಿ ಸಂಸ್ಥೆಗೂ ನಿರ್ದಿಷ್ಟ ಗುರಿಗಳುಳ್ಳ ಸಮಿತಿಯನ್ನು ರಚಿಸಬೇಕು. ಮೌಲ್ಯ ಹಾಗೂ ನೈತಿಕತೆಯ ಆಧಾರದ ಮೇಲೆ ಸಂಸ್ಥೆಗಳನ್ನು ಕಟ್ಟಬೇಕು. ಆಯಾ ಪ್ರದೇಶದಲ್ಲಿ ಈ ಸಂಸ್ಥೆಗಳು ದೂರಗಾಮಿ ಪರಿಣಾಮವನ್ನು ಉಂಟು ಮಾಡಬೇಕೆಂದು ತಿಳಿಸಿದರು.
Related Articles
ಬೆಂಗಳೂರು ದೇಶದಲ್ಲಿಯೇ ಅತಿ ಹೆಚ್ಚು ಸ್ಟಾರ್ಟ್‍ಅಪ್ ಮತ್ತು ಯೂನಿಕಾರ್ನ್‍ಗಳನ್ನು ಹೊಂದಿರುವ ನಗರವಾಗಿದ್ದು, ಅದನ್ನು ಪ್ರತಿಬಿಂಬಿಸಲು ಹಾಗೂ ಉತ್ತೇಜಿಸಲು ನಗರದ ಪ್ರಮುಖ ಸ್ಥಳ ಗುರುತಿಸಿ ಯೂನಿಕಾರ್ನ್ ಚಿಹ್ನೆಯನ್ನು ಸ್ಥಾಪಿಸಲು ಸೂಚಿಸಿದರು.
Advertisement
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಉಪಸ್ಥಿತರಿದ್ದರು.