Advertisement

ಸಿಎಂಗೆ ಟೆನ್ಷನ್‌, ಶಾಂತಿ ಬಯಸಿ ರೆಸಾರ್ಟ್‌ಗೆ ಹೋಗಿದ್ದಾರೆ

09:09 AM May 11, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉದ್ವೇಗಕ್ಕೊಳಾಗಿದ್ದು, ಶಾಂತಿ ಬಯಸಿ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌,ಎಲ್ಲರೂ ಮನುಷ್ಯರಲ್ವೇ , ರಿಲ್ಯಾಕ್ಸ್‌ ಮಾಡಿಕೊಳ್ಳಲು, ಟೆನ್ಷನ್‌ನಿಂದ ಹೊರ ಬರಲು, ಮನದ ಬೇಗುದಿ ಕಳೆದುಕೊಳ್ಳಲು ದೇವಸ್ಥಾನ, ಶಾಂತಿ ಕೊಡುವ ಸ್ಥಳಕ್ಕೆ, ನೆಮ್ಮದಿ ಕೊಡುವ ಸ್ಥಳಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿ ರೆಸಾರ್ಟ್‌ಗೆ ಹೋಗುವುದು ದೊಡ್ಡ ವಿಚಾರವೇನಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಚುನಾವಣೆ ಮುಗಿದ ಬಳಿಕ ಸಿಎಂ ಎಚ್‌ಡಿಕೆ ಉಡುಪಿಯ ಕಾಪುವಿನಲ್ಲಿಪ್ರಕೃತಿ ಚಿಕಿತ್ಸೆ ಪಡೆದಿದ್ದರು. ಈಗ ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next