Advertisement

ಕುಷ್ಟಗಿ ಕ್ಷೇತ್ರಕ್ಕೆ ರೆಡ್ಡಿ ಪಕ್ಷದಿಂದ ಸಿ.ಎಂ.ಹಿರೇಮಠ ಅಭ್ಯರ್ಥಿಯಾಗುವುದು ಬಹುತೇಕ ಖಚಿತ

07:14 PM Feb 01, 2023 | Team Udayavani |

ಕುಷ್ಟಗಿ: ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸಿ.ಎಂ.ಹಿರೇಮಠ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

Advertisement

ಜೆಡಿಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿರುವ ಸಿ.ಎಂ. ಹಿರೇಮಠ ಅವರು ಕಳೆದ ಸೋಮವಾರ ಪಂಚರತ್ನ ರಥಯಾತ್ರೆ ಹಾಗೂ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ‌ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇದು ಅವರ ಜೆಡಿಎಸ್ ಪಕ್ಷದ ಕೊನೆಯ ಕಾರ್ಯಕ್ರಮವಾಗಿತ್ತು.

ಸಾಮೂಹಿಕ ರಾಜಿನಾಮೆ

ನಿವೃತ್ತ ತಹಶೀಲ್ದಾರ ಸಿ.ಎಂ. ಹಿರೇಮಠ ಅವರು ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಫೆ.3 ರಂದು ಅಧಿಕೃತವಾಗಿ ಗಾಲಿ ಜನಾರ್ದನ ರಡ್ಡಿ ಅವರ ಹೊಸ ಪಕ್ಷ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸೇರುವುದಾಗಿ ತಿಳಿಸಿದರು.

ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ತುರ್ತು ಸುದ್ದೀಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಿಂದ ಜೆಡಿಎಸ್ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನನಗೆ ಸ್ಥಳೀಯ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶರಣಪ್ಪ ಕುಂಬಾರ ನಡಾವಳಿಕೆಯಿಂದಾಗಿ ಕಡೇಗಾಣಿಸಲಾಗಿದೆ. ಈ ಬಗ್ಗೆ ಮಾಜಿ ಸಿಎಂ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಾಗ್ಯೂ ಆ ವ್ಯಕ್ತಿ ನಡವಳಿಕೆ ಬದಲಿಸಿಕೊಳ್ಳದೇ ಅದೇ ವೃತ್ತಿ ಮುಂದುವರಿಸಿರುವುದು ಮನಸ್ಸಿಗೆ ನೋವಾಗಿದೆ. ಈ ಒಂದು ಕಾರಣದಿಂದ ಜೆಡಿಎಸ್ ಪಕ್ಷ ತೊರೆಯುತ್ತಿದ್ದು 16 ವರ್ಷವರೆಗೂ ಅಧಿಕಾರ ಇರಲಿ, ಇರದೇ ಇರಲಿ ಅತ್ಯಂತ ಶಿಸ್ತಿನಿಂದ ಪಕ್ಷ ಸಂಘಟನೆಯಲ್ಲಿರುವ ನನಗೆ, ಇದೀಗ ಪಕ್ಷ ತೊರೆಯುವುದಕ್ಕೆ ಮನಸ್ಸು ಭಾರವೆನಿಸುತ್ತದೆ ಎಂದು ಗದ್ಗದಿತರಾದರು.

Advertisement

ನನ್ನೊಂದಿಗೆ ಹಿಂದುಳಿದ ವರ್ಗದ ಜೆಡಿಎಸ್ ಘಟಕದ ಅಧ್ಯಕ್ಷ ಶಿವಶಂಕರಪ್ಪ ಕುರಿ, ಯುವ ಘಟಕದ ಶಶಿಧರ ಕುಂಬಾರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಬರ್ ನದಾಫ್, ಎಸ್ಸಿ ಘಟಕದ ಕೃಷ್ಣ ಕಲ್ಲಭಾವಿ, ರಾಜಾಸಾಬ್ ಕಲಾಲಬಂಡಿ ಮತ್ತೀತರರು ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದು, ಸದರಿ ರಾಜಿನಾಮೆ ಪತ್ರಗಳನ್ನು ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರಿಗೆ ಸಲ್ಲಿಸಿರುವುದಾಗಿ ತಿಳಿಸಿದರು. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ಜೆಡಿಎಸ್ ತಾಲೂಕಾ ಮಾಜಿ ಅಧ್ಯಕ್ಷ ಬಸವರಾಜ್ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಕುಂಬಾರ ಅವರು ಸಹ ರಾಜಿನಾಮೆ ನೀಡಿ ಕೆಆರ್ ಪಿಪಿ ಸೇರಲಿದ್ದಾರೆ ಎಂದು ಸಿ.ಎಂ. ಹಿರೇಮಠ ತಿಳಿಸಿದರು.

ಇವರೊಂದಿಗೆ ಈಗಾಗಲೇ ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ನಾಯಕ ರಾಜೀನಾಮೆ ನೀಡಿದ್ದು, ಜಿಲ್ಲಾ ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ ಎ.ಅಮರೇಗೌಡ ಪಾಟೀಲ ಅವರು ಸಹ ಕೆಆರ್ ಪಿಪಿ ಸೇರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next