Advertisement

ಕುರಿಗಾಹಿಗಳ ಕೈ ಹಿಡಿದ ಸಿಎಂ

05:47 AM May 17, 2020 | Suhan S |

ಬೀದರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ರೈತರು, ಕುರಿಗಾಹಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿದ್ದು ಬೋನಸ್‌ ನೀಡಿದಂತಾಗಿದೆ ಎಂದು ಸಚಿವ ಪ್ರಭು ಚವ್ಹಾಣ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಬಜೆಟ್‌ನಲ್ಲಿ ಕುರಿ-ಮೇಕೆಗಳು ಆಕಸ್ಮಿಕ ಅಪಘಾತ ಹಾಗೂ ರೋಗದಿಂದ ಮೃತಪಟ್ಟರೆ ಪರಿಹಾರ ನೀಡಬೇಕೆಂದು ಸಿಎಂ ಅವರಿಗೆ ಕೋರಲಾಗಿತ್ತು. ಅಲ್ಲದೆ ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಕುರಿ ಸಾಕಾಣಿಕೆದಾರರಿಂದ ಇದೇ ಕೋರಿಕೆ ಕೇಳಿ ಬಂದಿತ್ತು. ಆಗಲೂ ವೈಯಕ್ತಿಕವಾಗಿ ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡಲಾಗಿತ್ತು. ಇಂದು 500 ಕೋಟಿ ರೂ. ಪ್ಯಾಕೇಜ್‌ನಲ್ಲಿ ಕುರಿಗಾಹಿಗಳಿಗೆ ನೈಸರ್ಗಿಕ ವಿಕೋಪದಲ್ಲಿ ಕುರಿ-ಮೇಕೆಗಳು ಸತ್ತರೆ 5000 ರೂ. ಪರಿಹಾರ ಧನ ಘೋಷಿಸಿದ್ದಕ್ಕೆ ಸಿಎಂಗೆ ಅಭಿನಂದಿಸುವುದಾಗಿ ಹೇಳಿದ್ದಾರೆ.

ಪಶುಗಳಿಗೆ ಆಹಾರದಲ್ಲಿ ಮೆಕ್ಕೆ ಜೋಳ ಪ್ರಮುಖವಾಗಿದ್ದು, ಮೆಕ್ಕೆ ಜೋಳ ಬೆಳೆಗಾರರಿಗೂ ಈ ಸಮಯದಲ್ಲಿ 5000 ರೂ. ಘೋಷಿಸಿದ್ದು ಪರೋಕ್ಷವಾಗಿ ಪಶು ಪಾಲಕರು-ಪಶುಗಳಿಗೆ ಸಹಾಯ ಮಾಡಿದಂತಾಗಿದ್ದು, ಕಷ್ಟದ ಸಮಯದಲ್ಲಿ ಸಮಯೋಚಿತವಾಗಿ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next