Advertisement

ಸಿಎಂ ಎಚ್‌ಡಿಕೆ ಕುಕ್ಕೆ ಭೇಟಿ ;ಮಹಾ ಮಳೆಯಿಂದ ಪರದಾಟ; ಮಾರ್ಗವೇ ಬದಲು

10:06 AM Aug 14, 2018 | Team Udayavani |

ಸುಬ್ರಹ್ಮಣ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಕರಾವಳಿಯಲ್ಲಿ  ಸುರಿಯುತ್ತಿರುವ ಭಾರೀ ಮಳೆ ಸಂಕಷ್ಟ ತಂದಿಟ್ಟಿದ್ದು ,ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾರ್ಗ ಬದಲಿಸಿ ತೆರಳಬೇಕಾಯಿತು. 

Advertisement

ಧರ್ಮಸ್ಥಳದಲ್ಲಿ ತಂಗಿದ್ದ ಸಿಎಂ ಕುಟುಂಬ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿ ಮೂಲಕ ತೆರಳಬೇಕಿತ್ತು. ಆದರೆ ಕಡಬದ ಹೊಸ ಮಠ ಸೇತುವೆ ಸಂಪೂರ್ಣ ಮುಳುಗಡೆಯಾದ ಹಿನ್ನಲೆಯಲ್ಲಿ ಪೂತ್ತೂರಿಗೆ ತೆರಳಿ ಜಾಲ್ಸೂರು, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಯಿತು. 

ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಿ ಮುಖ್ಯಮಂತ್ರಿಗಳಿದ್ದ ಕಾರು ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. 

ಸಿಎಂ ಎಚ್‌ಡಿಕೆ ಅವರು ನಾಗರ ಪಂಚಮಿಯ ಮುನ್ನಾದಿನ ಒಣ ದ್ರಾಕ್ಷಿ  ತುಲಾಭಾರ, ಆಶ್ಲೇಷ ಬಲಿ, ಪಂಚಾಭಿಷೇಕ ಸೇವೆ ಸಲ್ಲಿಸಲಿದರು . ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.

Advertisement

ಎಚ್‌ಡಿಕೆ ಅವರೊಂದಿಗೆ ಪತ್ನಿ ಅನಿತಾ ಕುಮಾಸ್ವಾಮಿ, ತಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ತಾಯಿ ಚೆನ್ನಮ್ಮ ಅವರು ಪೂಜಾ ವಿಧಿ ವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ.

ಕುಕ್ಕೆಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next