Advertisement

ಕೆರೆ ತುಂಬಿಸುವ ಯೋಜನೆಗೆ ಸಿಎಂ ಹಸಿರು ನಿಶಾನೆ

09:47 AM Aug 05, 2019 | Team Udayavani |

ಬ್ಯಾಡಗಿ: ಜನರ ಹಾಗೂ ರೈತರ ಬಹು ದಿನಗಳ ಬೇಡಿಕೆಯಾಗಿದ್ದ ಆಣೂರ ಹಾಗೂ ಬುಡಪಹಳ್ಳಿ ಕೆರೆ ತುಂಬಿಸುವ ಒಟ್ಟು 369 ಕೋಟಿ ರೂ.ಯೋಜನೆಗೆ ಮುಖ್ಯಮಂತ್ರಿ ಬಿಎಸ್‌ವೈ ಗ್ರೀನ ಸಿಗ್ನಲ್ ನೀಡಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಆದೇಶ ಪ್ರತಿ ನೀಡಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

Advertisement

ಆಣೂರ ಹಾಗೂ ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಎರಡು ಬೃಹತ್‌ ಯೋಜನೆಗೆ ಅನುದಾನ ಬಿಡುಗಡೆ ಹಾಗೂ ಕಾಮಗಾರಿ ಆರಂಭಿಸುವ ಆದೇಶ ಪ್ರತಿ ನೀಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಡಗಿ ಕ್ಷೇತ್ರದ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಈಡೇರುವ ಕಾಲ ಸನ್ನಿಹಿತವಾಗಿದೆ. ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿವಂತೆ ನೀರಾವರಿ ಸಚಿವರಾಗಿದ್ದ ಡಿಕೆಶಿ ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮನವಿ ಮಾಡಿದ್ದೆ. ಆದರೆ, ತಾರತಮ್ಮ ನೀತಿ ಅನುಸರಿಸಿದ ಸಮ್ಮಿಶ್ರ ಸರಕಾರ ಯೋಜನೆಗೆ ಅಸ್ತು ಎನ್ನದೆ ತಾಲೂಕಿನ ಜನರಿಗೆ ಮೋಸ ಮಾಡಿತ್ತು ಎಂದು ಆರೋಪಿಸಿದರು.

ತಾಲೂಕಿನ ಆಣೂರ ಕೆರೆಗೆ ಮೂಲ ನಕ್ಷೆಯಂತೆ ನೀರು ತುಂಬಿಸುವ ಯೋಜನೆಗೆ 212 ಕೋಟಿ, ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಗೆ 157 ಕೋಟಿ ರೂ. ಸೇರಿದಂತೆ ಒಟ್ಟು 369 ಕೋಟಿ ಮೊತ್ತದ ಎರಡು ಬೃಹತ್‌ ಯೋಜನೆಗಳಿಗೆ ಮುಖ್ಯಮಂತ್ರಿಗಳು ಗ್ರೀನ್‌ ಸಿಗ್ನಲ್ ನೀಡಿ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿದ್ದಾರೆ ಎಂದರು.

ಕೇತ್ರದ ಅಭಿವೃದ್ಧಿಯೇ ನಮ್ಮ ಮುಖ್ಯ ಧ್ಯೇಯ. ಸಮ್ಮಿಶ್ರ ಸರಕಾರದ ತಾರತಮ್ಯ ಧೋರಣೆಯಿಂದ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿರಲಿಲ್ಲ. ಇದೀಗ ನಮ್ಮದೇ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಸಾಕಷ್ಟು ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಶೀಘ್ರವೇ ಮುಖ್ಯ ರಸ್ತೆ ಅಗಲೀಕರಣ: ಪಟ್ಟಣದ ಜನತೆಯ ಇನ್ನೊಂದು ಪ್ರಮುಖ ಬೇಡಿಕೆಯಾದ ಮುಖ್ಯ ರಸ್ತೆ ಅಗಲೀಕರಣಕ್ಕೂ ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದ್ದು, ಮುಂದಿನ ಹದಿನೈದು ದಿನದಲ್ಲಿ ಆದೇಶ ಪ್ರತಿ ಸಿಗಲಿದೆ. ಅಲ್ಲದೇ ತಾಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿ ಹಾಗೂ ಶಿಥಿಲಾವಸ್ಥೆ ತಲುಪಿರುವ ವಿವಿಧ ಶಾಲೆಗಳ ದುರಸ್ತಿ ಹಾಗೂ ನೂತನ ಕಟ್ಟಡಗಳಿಗೆ ಒಟ್ಟು 20 ಕೋಟಿ ಕೇಂದ್ರ ಸರಕಾರದಿಂದ ಅನುದಾನ ಸಿಗಲಿದೆ ಎಂದ ಅವರು, ಜಿಲ್ಲೆಯ ತೋಟಗಾರಿಕೆ ಕೃಷಿ ವಿದ್ಯಾಲಯಕ್ಕೂ ಶೀಘ್ರದಲ್ಲೆ ಅನುದಾನ ದೊರೆ ಯುವ ವಿಶ್ವಾಸ ವ್ಯಕ್ತ ಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next