ಬೆಂಗಳೂರು: ಕಳೆದ ಕೆಲ ದಿನಗಳಿಂದ ರೈತರ ಸಾಲ ಮನ್ನಾ ಮಾಪಬೇಕೆಂಬ ಕೂಗಿಗೆ ಮಣಿದ ಸರ್ಕಾರ ಕೊನೆಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ 50 ಸಾವಿರ ರೂಪಾಯಿ ವರೆಗಿನ ಸಾಲ ಮನ್ನಾ ಘೋಷಣೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಸಭೆಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿರುವುದಾಗಿ ಘೋಷಿಸಿದರು.
ಸರ್ಕಾರ ಈ ನಿರ್ಧಾರದಿಂದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ತಿಲಿದು ಬಂದಿದೆ. ಜೂನ್ 20 ರ ವರೆಗಿನ ರೈತರ ಸಾಲ ಮನ್ನಾವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
ಏಷ್ಟು ಮನ್ನಾವಾಗಲಿದೆ?
ರೈತರು ಪಡೆದಿರುವ ಸಾಲದಲ್ಲಿ 50 ಸಾವಿರ ರೂಪಾಯಿ ಮಾತ್ರ ಮನ್ನಾವಾಗಲಿದೆ.ಸರ್ಕಾರದ ನಿರ್ಧಾರ ಸಾಲ ಪಡೆದಿರುವ 22,27,506 ರೈತರಿಗೆ ಅನುಕೂಲವಾಗಿದೆ ಎಂಬ ಅಂಕಿ ಅಂಶಗಳು ಲಭ್ಯವಾಗಿದೆ.
ಕಳೆದ ಕೆಲ ದಿನಗಳಿಂದ ವಿಪಕ್ಷ ಬಿಜೆಪಿ, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ರೈತರ ಸಾಲ ಮನ್ನಾ ಮಾಡುವಂತೆ ತೀವ್ರವಾಗಿ ಸರ್ಕಾರವನ್ನು ಒತ್ತಾಯಿಸಿದ್ದವು.