ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆದ ನಂತರ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದರು. ಆದರೆ ಅವರನ್ನು ಸ್ವಾಗತಿಸಲು ಪ್ರೊಟೊಕಾಲ್ ನಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಮಾನ ನಿಲ್ದಾಣದಲ್ಲಿ ಆಗಮಿಸಿರಲಿಲ್ಲ. ಈ ವಿಚಾರದಲ್ಲಿ ಬಿಜೆಪಿ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದು, ವಿವಾದದ ರೂಪ ಪಡೆದಿದೆ.
ಪಿಎಂ ಮೋದಿ ಅವರು ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸದಂತೆ “ಉದ್ದೇಶಪೂರ್ವಕವಾಗಿ ನಿರ್ಬಂಧಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿಕೊಂಡಿದೆ, ಇದು ಶಿಷ್ಟಾಚಾರದ ಪ್ರಮುಖ ಉಲ್ಲಂಘನೆಯಾಗಿದೆ ಎಂದು ಟೀಕೆ ಮಾಡಿದೆ.
ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ಪ್ರಧಾನಿ ಮೋದಿ ಅವರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿಸಿ ಮಾತನಾಡುತ್ತಾ ಸ್ಪಷ್ಟನೆ ನೀಡಿದರು. “ನಾನು ಬೆಂಗಳೂರಿಗೆ ಯಾವಾಗ ತಲುಪುತ್ತೇನೆ ಎಂದು ನನಗೆ ತಿಳಿದಿಲ್ಲದ ಕಾರಣ, ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ನನ್ನನ್ನು ಸ್ವೀಕರಿಸಲು ಇಷ್ಟು ಬೇಗ ಬಂದು ತೊಂದರೆ ತೆಗೆದುಕೊಳ್ಳಬೇಡಿ ವಿನಂತಿಸಿದೆ” ಎಂದು ಹೇಳಿದರು.
ಇದನ್ನೂ ಓದಿ:Dev Kohli: 100ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡು ಬರೆದಿದ್ದ ಗೀತರಚನೆಕಾರ ದೇವ್ ಕೊಹ್ಲಿ ನಿಧನ
ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ “ತಮಗಿಂತ ಮೊದಲು ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಿದ್ದಕ್ಕಾಗಿ ಅವರು ಕರ್ನಾಟಕದ ಸಿಎಂ ಮತ್ತು ಉಪಮುಖ್ಯಮಂತ್ರಿಗಳ ಬಗ್ಗೆ ತುಂಬಾ ಸಿಟ್ಟಿಗೆದ್ದಿದ್ದಾರೆ, ಅವರು ಸಿಎಂ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸದಂತೆ ನಿರ್ಬಂಧಿಸಿದ್ದಾರೆ. ಪ್ರೋಟೋಕಾಲ್ ವಿರುದ್ಧ ಹೋಗುತ್ತಿದೆ. ಇದು ಕ್ಷುಲ್ಲಕ ರಾಜಕೀಯವಲ್ಲದೆ ಬೇರೇನೂ ಅಲ್ಲ” ಎಂದು ಟೀಕೆ ಮಾಡಿದ್ದಾರೆ.
“ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಚಂದ್ರಯಾನ-I ಯಶಸ್ವಿ ಉಡಾವಣೆಯ ನಂತರ ಅಕ್ಟೋಬರ್ 22, 2008 ರಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರಕ್ಕೆ ಮುಖ್ಯಮಂತ್ರಿಯಾಗಿದ್ದ ಮೋದಿ ಭೇಟಿ ನೀಡಿದ್ದನ್ನು ಪ್ರಧಾನಿ ಮೋದಿ ಮರೆತಿದ್ದಾರೆಯೇ?” ಎಂದು ಜೈರಾಮ್ ರಮೇಶ್ ಹೇಳಿದರು.
ಚಾಮರಾಜನಗರದಲ್ಲಿ ಈ ವಿಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮೋದಿ ಭೇಟಿ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿಯನ್ನೇ ನೀಡಿಲ್ಲ. ಆರ್ ಅಶೋಕ್‌ಗೆ ಪ್ರಧಾನಿ ಭೇಟಿಯ ಸರಿಯಾದ ಮಾಹಿತಿಯೇ ಇಲ್ಲ! ಪ್ರಧಾನಿ ಕಾರ್ಯಕ್ರಮಕ್ಕೆ ಯಾರನ್ನು ಕರೆದಿದ್ದಾರೆ ಅನ್ನೋ ಮಾಹಿತಿನೆ ಇಲ್ಲಿನ ಬಿಜೆಪಿ ನಾಯಕರಿಗೆ ಇಲ್ಲ. ಸಿಎಂ, ಡಿಸಿಎಂ, ರಾಜ್ಯಪಾಲರು ಬರುವುದದು ಬೇಡವೆಂದು ಪ್ರಧಾನ ಮಂತ್ರಿ ಹೇಳುತ್ತಾರೆ. ಆದರೆ ಇಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲವೆಂದು ಅಶೋಕ್ ಹೇಳುತ್ತಿದ್ದಾರೆ. ಏನೋ ಪ್ರಚಾರಕ್ಕೆ ಮಾತಾಡಬೇಕು ಅಂತ ಮಾಧ್ಯಮದವರ ಮುಂದೆ ಸುಖಾಸುಮ್ಮನೆ ಮಾತನಾಡಿದ್ದಾರೆ ಅಷ್ಟೇ. ನಾವು ಕಾಂಗ್ರೆಸ್ ನವರು ಎಲ್ಲಾ ರೀತಿಯ ಪ್ರೋಟೊಕಾಲ್ ಪಾಲಿಸುತ್ತೇವೆ ಎಂದರು.