Advertisement

ಕಾಯ್ದೆಯಲ್ಲಿ ಬದಲಾವಣೆಗೆ ಒಪ್ಪದ ಸಿಎಂ: ರೈತರ ಜೊತೆ ಸಭೆ ವಿಫಲ, ಸೆ.28ರಂದು ಬಂದ್ ಖಚಿತ

04:43 PM Sep 25, 2020 | keerthan |

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆ ವಿಫಲವಾಗಿದೆ.

Advertisement

ಕಾಯ್ದೆಯಲ್ಲಿ ಬದಲಾವಣೆ ಮಾಡಲು ಒಪ್ಪದ ಸಿಎಂ ಯಡಿಯೂರಪ್ಪ, ರೈತ ಮುಖಂಡರನ್ನೇ ಮನವರಿಕೆ ಮಾಡಲು ಪ್ರಯತ್ನ ಮಾಡಿದರು. ಜಮೀನು ಹೊಂದುವ ಮಿತಿ ಕಡಿಮೆ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದರಾದರೂ, ರೈತರು ಇದಕ್ಕೊಪ್ಪಲಿಲ್ಲ. ಹೀಗಾಗಿ ಸೆ. 28 ಕರ್ನಾಟಕ ಬಂದ್ ಗೆ ಪ್ರತಿಭಟನಾಕಾರರು ತೀರ್ಮಾನ ಮಾಡಿದ್ದಾರೆ

ಸಿಎಂ ಸಮಜಾಯಿಶಿ ಒಪ್ಪಲು ಸಾಧ್ಯವಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯ ಮಾಡಿದ್ದೇವೆ. ಅವರು ನಮಗೆ ಉಪದೇಶ ಮಾಡಲು ಬಂದಿದ್ದರು ಅದನ್ನು ನಾವು ಒಪ್ಪಿಕೊಂಡಿಲ್ಲ ಎಂದು ಮಾರುತಿ ಮಾನ್ಪಡೆ ಹೇಳಿದರು.

ಇದನ್ನೂ ಓದಿ: ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ನಾವು ಅವರ ಮನವಿಗೆ ಸ್ಪಂದಿಸಿಲ್ಲ. ನಾನು 28 ರ ಬಂದ್ ಮಾಡೇ ಮಾಡುತ್ತೇವೆ. ಪ್ರತಿ ಊರಲ್ಲಿ ಬಿಜೆಪಿ.ಸರ್ಕಾರದ ವಿರುದ್ಧವಾಗಿ ಮನೆ ಮನೆಯಿಂದ ಹೋರಾಟ ಆರಂಭ ಮಾಡುತ್ತೇವೆ ಎಂದು ರೈತ ಸಂಘದ ಕೊಡಗಲ್ ಪುರ ನಾಗೇಂದ್ರ ಹೇಳಿದರು.

Advertisement

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯಡಿಯೂರಪ್ಪ ಅವರು ಬಿಲ್ ಗಳನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅವರು ಮೋದಿ ಮಾತು ಮೀರಲು ಸಿದ್ಧರಿಲ್ಲ. ಸೆ. 28 ರ ಬಂದ್ ಗೆ ರೈತರ ಅನ್ನ ಉಣ್ಣಯವವರು ಎಲ್ಲರೂ ಬಂದ್ ಗೆ ಬೆಂಬಲ ನೀಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next