Advertisement

ವಿಜಯಪುರ ಪ್ರವಾಹ ಪ್ರದೇಶಗಳಲ್ಲಿ ಸಿಎಂ ಸಮೀಕ್ಷೆ: ಜಿಲ್ಲಾಡಳಿತದಿಂದ ಹಾನಿಯ ಅಂದಾಜು ಸಿದ್ಧ

04:21 PM Oct 21, 2020 | keerthan |

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಜಯಪುರ ಜಿಲ್ಲೆಯ ಅತಿವೃಷ್ಠಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡಸಲಿದ್ದು, ಜಿಲ್ಲಾಡಳಿತ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಯ ಕುರಿತು ಪ್ರಾಥಮಿಕ ಅಂದಾಜು ಪಟ್ಟಿ ಸಿದ್ದಪಡಿಸಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಹಾನಿ ಬಗ್ಗೆ ಸಿಎಂಗೆ ಪ್ರಾಥಮಿಕ ವರದಿ ನೀಡಲು ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ನೇತೃತ್ವದಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಅಗಿರುವ ಹಾನಿಯ ಬಗ್ಗೆ ವೈಮಾನಿಕ ಸಮೀಕ್ಷೆ ಬಳಿಕ ಆಲಮಟ್ಟಿ ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯ ಪರಿಸರದ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ನಡೆಯುವ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಈ ಹಾನಿಯ‌ ವರದಿ ಮಂಡನೆಯಾಗಲಿದೆ.

ಇದನ್ನೂ ಓದಿ:ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಪರಿಹಾರ ಕಾರ್ಯವೇ ಸವಾಲು

ಜಿಲ್ಲೆಯಲ್ಲಿ 28 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು, 2543 ಮನೆಗಳು ಜಲಾವೃತವಾಗಿವೆ. ಮಳೆ ಹಾಗೂ ಪ್ರವಾಹದಿಂದ 72,534 ಜನರಿಗೆ ತೊಂದರೆ ಆಗಿದ್ದು,1516 ಸಂತ್ರಸ್ತರನ್ನು ರಕ್ಷಣಾ ತಂಡಗಳು ರಕ್ಷಿಸಿವೆ. 12,217 ಜನರನ್ನು ಸ್ಥಳಾಂತರಿಸಿ ಕಾಳಜಿ‌ ಕೇಂದ್ರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ. ಸಂತ್ರಸ್ತರಿಗಾಗಿ 42 ಕಾಳಜಿ ಕೇಂದ್ರ ತೆರೆದಿದ್ದು, 1140 ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ‌ ನೀಡಿದ್ದು, 5317 ಜನರು ಕಾಳಜಿ ಕೇಂದ್ರದಲ್ಲಿದ್ದಾರೆ. ಇದರಲ್ಲಿ 1955 ಪುರುಷರು, 1883 ಮಹಿಳೆಯರು, 1490 ಮಕ್ಕಳು ಸೇರಿದ್ದಾರೆ.

Advertisement

ಅತಿವೃಷ್ಠಿ ಹಾಗೂ ಪ್ರವಾಹದಿಂದ 160739 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 63,646.65 ಲಕ್ಷ ರೂ. ಮೌಲ್ಯದ ಕೃಷಿ ಬೆಳೆ ಹಾನಿಯಾಗಿದೆ. 11929.10 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು,15601.78 ಲಕ್ಷ ರೂ. ಮೌಲ್ಯದ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ.

ಮಳೆಯಿಂದ 4237.95 ಕಿಲೋ‌ ಮೀಟರ್ ರಸ್ತೆಗಳು‌ ಹಾಗೂ 77 ಸೇತುವೆಗಳಿಗೆ‌ ಹಾನಿಯಾಗಿವೆ‌ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next