ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಭಾರಿ ನಷ್ಟ ಸಂಭವಿಸಿದೆ. ಮಳೆಯಿಂದ ಹಾನಿಯುಂಟಾದ ಪ್ರತಿ ಕುಟುಂಬಕ್ಕೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇಂದು ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಮಹಾನಗರದಲ್ಲಿ ಅಬ್ಬರಿಸಿದ ಮಳೆರಾಯ
ಮಳೆ ಹಾನಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ಹೊಸಕೆರೆ ಹಳ್ಳಿ, ದತ್ತಾತ್ರೆಯ ನಗರಕ್ಕೆ ಭೇಟಿ ನೀಡಿದರು. ಮಳೆಹಾನಿ ಪ್ರದೇಶವನ್ನು ವೀಕ್ಷಿಸಿ, ಸಂತ್ರಸ್ತರ ಸಂಕಷ್ಟ ಆಲಿಸಿದರು. ಈ ವೇಳೆ ಸಂಕಷ್ಟದಲ್ಲಿರುವ ಪ್ರತಿ ಕುಟುಂಬಕ್ಕೆ ತಲಾ 25 ಸಾವಿರ ರೂ. ಪರಿಹಾರ ಘೋಷಿಸಿದರು.
ವರ್ಷದ ಗರಿಷ್ಠ ಮಳೆಗೆ ಗುರುವಾರ ಬೆಂಗಳೂರು ನಗರ ಅಕ್ಷರಶಃ ತತ್ತರಿಸಿತು. ಆರ್.ಆರ್.ನಗರದಲ್ಲಿ ಸತತ 2 ದಿನವೂ ಮಳೆ ಪರಿಣಾಮ, ಫ್ಲ್ಯಾಶ್‌ಫ್ಲಡ್ ಉಂಟಾಯಿತು. ರಸ್ತೆಯಲ್ಲಿದ್ದ ವಾಹನಗಳು, ತಗ್ಗು ಪ್ರದೇಶಗಳಲ್ಲಿದ್ದ ಮನೆಗಳು, ನಿಲ್ದಾಣ ಗಳಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಹಬ್ಬದ ಸಂತೆಗೆ ಬಂದ ಜನ, ವ್ಯಾಪಾರಿಗಳು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹೀಗೆ ಎಲ್ಲರಿಗೂ ಈ “ದಿಢೀರ್ ನೆರೆ’ಬಿಸಿ ತಟ್ಟಿತು. ಹೊಸಕೆರೆ ಹಳ್ಳಿಯಲ್ಲಿ ರಾಜಕಾಲುವೆ ಉಕ್ಕಿಹರಿದ ಪರಿಣಾಮ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು