ಕಲಬುರಗಿ: ವಿಧಾನಸಭೆ ಉಪಸಭಾಪತಿ ಚಂದ್ರಶೇಖರ ಮಾಮನಿ ಅವರ ನಿಧನದ ಕಾರಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂದಿನ ಕಲಬುರಗಿ ಜಿಲ್ಲಾ ಪ್ರವಾಸ ರದ್ದಾಗಿದೆ.
ಮುಖ್ಯಮಂತ್ರಿ ಯವರು ಆಳಂದ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಗೊಳಿಸಿ ತದನಂತರ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿದ್ದರು. ಅದೇ ರೀತಿ ಚಿತ್ತಾಪುರ ಪಟ್ಟಣದಲ್ಲೂ ನಿಗದಿಯಾಗಿದ್ದ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ ಈಗ ಸಂಕಲ್ಪ ಯಾತ್ರೆ ಮುಂದೂಡಲಾಗಿದ್ದು, ನವ್ಹೆಂಬರ್ 6 ಕ್ಕೆ ನಿಗದಿಯಾಗಿದೆ.
ಇದನ್ನೂ ಓದಿ:ದೀಪಾವಳಿಗೆ ಇಸ್ರೋ ಮಹಾನ್ ಸಾಧನೆ; 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಅತ್ಯಂತ ಭಾರದ ರಾಕೆಟ್
ಸಂಕಲ್ಪ ಯಾತ್ರೆಗೆ ಕಳೆದ ಹಲವಾರು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಉಪಸಭಾಪತಿ ಚಂದ್ರಶೇಖರ್ ಮಾಮನಿ ಅವರ ಅಕಾಲಿಕ ನಿಧನ ಅಘಾತ ಮೂಡಿಸಿದ್ದು, ಶೃದ್ದಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ಪ್ರವಾಸ ರದ್ದಾಗಿದ್ದು, ಜತೆಗೆ ಸಂಕಲ್ಪ ಯಾತ್ರೆ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು, ವಿಭಾಗೀಯ ಪ್ರಭಾರಿ ಆಗಿರುವ ಸೇಡಂ ಮತಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತಿಳಿಸಿದ್ದಾರೆ.
ಇನ್ನೊಂದೆಡೆ ಅ. 30 ರಂದು ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಕ್ಕೆ ಸಿದ್ದತೆಗಳು ನಡೆದಿವೆ. ಲಕ್ಷಾಂತರ ಜನ ಸೇರಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.