ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ರಾಜ್ಯ ಸರಕಾರದ ಆಯವ್ಯಯದಲ್ಲಿ ಸಾಲದ ಪ್ರಮಾಣ ಏರುಗತಿ ಕಾಣುತ್ತಿದ್ದು, ಕಳೆದ ಬಜೆಟ್ ನ 71,332 ಕೋಟಿ ರೂ.ಸಾಲವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ.
ಎರಡು ವರ್ಷದ ಕೋವಿಡ್ ಅಲೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗಿಲ್ಲ. ಜಿಎಸ್ ಟಿ ಪರಿಹಾರವೂ ಲಭ್ಯವಾಗಿಲ್ಲ. ಯಡಿಯೂರಪ್ಪ ಅಧಿಕಾರದಿಂದ ನಿರ್ಗಮಿಸುವುದಕ್ಕೆ ಮುನ್ನ ಜಿಎಸ್ ಟಿ ಪರಿಹಾರಕ್ಕೆ ಬದಲಾಗಿ ಕೇಂದ್ರ ಸರಕಾರದಿಂದ 30 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲವನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ರಾಜ್ಯದ ಒಟ್ಟಾರೆ ಸಾಲದ ಹೊರೆಯ ಪ್ರಮಾಣ ಏರುಗತಿಯಲ್ಲಿದೆ.
ಇದನ್ನೂ ಓದಿ:ಸುಳ್ಳು ಹೇಳಿ ಸಿಎಂ ಆಗುವ ಆಸೆ ನನಗಿಲ್ಲ: ಸಚಿವ ಗೋವಿಂದ ಕಾರಜೋಳ
ಹೀಗಾಗಿ ಬೊಮ್ಮಾಯಿ ಬಜೆಟ್ ಸವಾಲು ಹೇಗೆ ನಿರ್ವಹಿಸುತ್ತಾರೆಂಬ ಕುತೂಹಲ ಸೃಷ್ಟಿಯಾಗಿದೆ. ಹಣಕಾಸು ಇಲಾಖೆ ಮೂಲಗಳ ಪ್ರಕಾರ ಒಂದಿಷ್ಟು ಜನಪ್ರಿಯ ಯೋಜನೆಗಳು ಬಜೆಟ್ ನಲ್ಲಿರುತ್ತದೆ. ಆದರೆ ಇಲಾಖಾವಾರು ಅನುದಾನ ಹಂಚಿಕೆ ಬದಲು ಸೆಕ್ಟರ್ ಆಧಾರದಲ್ಲಿ ಅನುದಾನ ಘೋಷಣೆಯಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ 2.60 ಲಕ್ಷ ಕೋಟಿ ರೂ. ಬಜೆಟ್ ಗಾತ್ರ ನಿಗದಿಯಾಗುವ ಸಾಧ್ಯತೆ ಇದೆ. ಕೃಷಿ, ಮೂಲ ಸೌಕರ್ಯ ಕ್ಕೆ ಆದ್ಯತೆ ಲಭಿಸಲಿದ್ದು, ಸಿಎಂ ಆದ ಹೊಸತರಲ್ಲಿ ಬೊಮ್ಮಾಯಿ ಘೋಷಣೆ ಮಾಡಿದ್ದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆಗೆ ಬಜೆಟ್ ರಕ್ಷಣೆ ಸಿಗಲಿದೆ.